Skip to product information
1 of 1

R. P. Hegade

ಗಿಳಿಗಳು

ಗಿಳಿಗಳು

Publisher - ರವೀಂದ್ರ ಪುಸ್ತಕಾಲಯ

Regular price Rs. 70.00
Regular price Rs. 70.00 Sale price Rs. 70.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

10 ಡಿಸೆಂಬರ್ 1944ರಲ್ಲಿಚೆನ್ನೈಯಲ್ಲಿ ಜನಿಸಿ, ಮುಂಬಯಿಯಲ್ಲಿ ಶಿಕ್ಷಣ ಪಡೆದ ಚಿತ್ರಾ ಮುದ್‌ಗಲ್ ಆಧುನಿಕ ಕಥಾ ಸಾಹಿತ್ಯದ ಬಹುಚರ್ಚಿತ ಹಾಗೂ ಸಮ್ಮಾನಿತ ಬರಹಗಾತಿ, ಪ್ರಖರ ಚೈತನ್ಯ ಹಾಗೂ ಆತ್ಮವಿಶ್ವಾಸಗಳನ್ನುಹೊಂದಿದ ಚಿತ್ರಾ ಅವರ ಬಳಿ ಅನುಭವದ ವಿಪುಲ ಭಂಡಾರವೇ ಇದೆ. ಅವರು ಸಮಾಜದ ವಿಭಿನ್ನ ಸಮುದಾಯಗಳ ವಿಶೇಷವಾಗಿ ದಲಿತರು ಶೋಷಿತರ ನಡುವೆ ಇದ್ದು ಕೆಲಸ ಮಾಡಿದ್ದಾರೆ. ಸಾಮಾಜಿಕ ಪರಿವರ್ತನೆಯಲ್ಲಿ ಆಂದೋಲನಗಳು ನಿರ್ಣಾಯಕ ಪಾತ್ರ ವಹಿಸಬಲ್ಲವು ಎಂಬುದು ಅವರ ನಂಬಿಕೆ.

ದೂರದರ್ಶನಕ್ಕಾಗಿ 'ವಾಲಸ್' ಟೆಲಿಫಿಲ್ಡ್ ನಿರ್ಮಾಣವನ್ನು ಚಿತ್ರಾಜಿ ಮಾಡಿದ್ದಾರೆ. ಅಲ್ಲದೆ ಚಿತ್ರಾ ಅವರ ಅನೇಕ ಕತೆಗಳ ಮೇಲೆ ಟೆಲಿ ಪಿಲ್ಮ್ಗಳ ನಿರ್ಮಾಣ ಕೂಡ ಆಗಿದೆ. ಚಿತ್ರಾ ಮುದ್‌ಗಲ್ ಈ ವರೆಗೆ 13 ಕಥಾಸಂಕಲನ, ಮೂರು ಮಕ್ಕಳ ಕಾದಂಬರಿಗಳು, ನಾಲ್ಕು ಬಾಲಕಥಾ ಸಂಗ್ರಹ, ಐದು ಸಂಪಾದಿತ ಗ್ರಂಥಗಳು- ಹಾಗೂ ಎರಡು ವೈಚಾರಿಕ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಇವರಿಗೆ ಬಹು ಚರ್ಚಿತ 'ಅವಾಂ' ಕಾದಂರಿಗಾಗಿ ಸಹಸ್ರಾಬ್ಧಿಯ ಮೊದಲ ಅಂತರಾಷ್ಟ್ರೀಯ ಇಂದು ಶರ್ಮಾ ಕಥಾಸಮ್ಮಾನವನ್ನು ಲಂಡನ್ ನಲ್ಲಿ ಪಡೆಯುವ ಗೌರವ ಪ್ರಾಪ್ತವಾಯಿತು. ಅಲ್ಲದೆ ವ್ಯಾಸ ಸಮ್ಮಾನ ಪಡೆದ ಮೊದಲ ಮಹಿಳೆ ಆಗಿದ್ದಾರೆ. ಚಿತ್ರಾ ಅವರಿಗೆ ಹಿಂದೀ ಅಕಾಡೆಮಿ, ದಿಲ್ಲಿಯ ಸಾಹಿತ್ಯಕಾರ ಸಮ್ಮಾನ, ವಿಕಾಸ ಕಾಯಾ ಫೌಂಡೇಷನ್ನಿನವರು ಸಾಮಾಜಿಕ ಕಾರ್ಯಗಳಿಗಾಗಿ ಕೊಡುವ ವಿದುಲ ಸಮ್ಮಾನ, ಹಾಗೂ ಹಿಂದೀ ಸಂಸ್ಥಾನದ ಸಾಹಿತ್ಯಭೂಷಣ ಸಮ್ಮಾನ ಮುಂತಾದವು ಲಭ್ಯವಾಗಿವೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)