Dr. N. Gopi, To Kannada : Ranganatha Ramachandrarao
ಗರಿ ಬಿಚ್ಚಿದ ಉಸಿರು
ಗರಿ ಬಿಚ್ಚಿದ ಉಸಿರು
Publisher - ಪಂಚಮಿ ಪಬ್ಲಿಕೇಷನ್ಸ್
- Free Shipping Above ₹300
- Cash on Delivery (COD) Available
Pages - 104
Type - Paperback
Couldn't load pickup availability
ಗೋಪಿ ತೆಲುಗು ಪರಂಪರೆಯ ಕ್ಲಾಸಿಕಲ್ ಸಂಪ್ರದಾಯದಿಂದ ಪ್ರಭಾವಿತರಾದವರು. ನನ್ನಯ, ತಿಕ್ಕನ, ಪೋತನ, ಶ್ರೀನಾಥ, ಸೋಮನಾಥ ಇವರೆಲ್ಲರನ್ನೂ ಆಳವಾಗಿ ಅಧ್ಯಯನ ಮಾಡಿರುವ ಗೋಪಿ ಪರಂಪರೆಯಿಂದ ಪಡೆಯಬೇಕಾದ್ದನ್ನು ಪಡೆದಿದ್ದಾರೆ. ಪರಂಪರೆಯ ತಳಹದಿಯ ಮೇಲೆಯೇ ಅವರ ಕಾವ್ಯದ ವಿನ್ಯಾಸ ರೂಪುಗೊಂಡಿದೆ.
ಗೋಪಿಯವರ ಕಾವ್ಯಶ್ರದ್ಧೆ ಲೋಹಿಯಾ ಹೇಳುವ ಸೃಜನಶೀಲತೆಯ ಶಕ್ತಿಗೂ ನಮ್ಮ ಕುವೆಂಪು ಹೇಳುವ ಕಾವ್ಯಶಕ್ತಿಗೂ ಗೋಪಿಯವರ ಮನೋಭಾವ ರ ತೀರ ಹತ್ತಿರವಾದಂಥದು. ಕಾವ್ಯಕ್ಕೆ ಬಡತನವನ್ನು ಗೆಲ್ಲುವ, ಅವಮಾನವನ್ನು ಮೀರುವ ಶಕ್ತಿ ಇದೆ. ಅದು ಪ್ರತಿಭಟನೆಯ ಅಸ್ತ್ರಎಂದು ಗೋಪಿ ತಮ್ಮ ಕವಿತೆಗಳಲ್ಲಿ ಪ್ರತಿಪಾದಿಸುತ್ತಾರೆ. ಕಾವ್ಯಗ್ರಹಿಕೆಯ ಈ ಆಯಾಮವೇ ಅವರ ಕವಿತೆಗಳಿಗೆ ಸಾಮಾಜಿಕ ನೆಲೆಯನ್ನು ಸಹಜವೆಂಬಂತೆ ಕಲ್ಪಿಸಿದೆ. ಯಾಂತ್ರೀಕೃತ ನಗರ ಬದುಕಿನ ಬಗ್ಗೆ ಗೋಪಿಯವರ ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ. ಆಧುನಿಕ ಬದುಕು ನಮಗೆ ಕಲ್ಪಿಸಿಕೊಟ್ಟಿರುವ ಸವಲತ್ತುಗಳ ಬಗ್ಗೆ ಗೋಪಿಯವರಿಗೆ ಅರಿವಿದೆ. ಆದರೆ ಮಾನವ ಸಂಬಂಧ ಶಿಥಿಲವಾಗುತ್ತಿರುವ ಬಗ್ಗೆ ಅವರಿಗೆ ಆತಂಕವಿದೆ.
ರಂಗನಾಥ ರಾಮಚಂದ್ರರಾವ್ ನಮ್ಮ ಕಾಲದ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದಿಂದ ತೆಲುಗಿಗೆ ತೆಲುಗಿನಿಂದ ಕನ್ನಡಕ್ಕೆ ಅವರು ಅನೇಕ ಮಹತ್ವದ ಕೃತಿಗಳನ್ನು ಮರುಸೃಷ್ಟಿ ಮಾಡುವುದರ ಮೂಲಕ ನಮ್ಮ ಅರಿವನ್ನು ವಿಸ್ತರಿಸುತ್ತಿದ್ದಾರೆ.
- ನರಹಳ್ಳಿ ಬಾಲಸುಬ್ರಮಣ್ಯ
Share


Subscribe to our emails
Subscribe to our mailing list for insider news, product launches, and more.