Skip to product information
1 of 1

Lakshmana V. A.

ಗರ್ದಿ ಗಮ್ಮತ್ತು ನೋಡ, ಗೋಳ ಗುಮ್ಮಟ ನೋಡ

ಗರ್ದಿ ಗಮ್ಮತ್ತು ನೋಡ, ಗೋಳ ಗುಮ್ಮಟ ನೋಡ

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಇದೊಂದು ಮಾನವೀಯ ಮಿಡಿತಗಳ ಗುಚ್ಛ. ಡಾ. ಲಕ್ಷ್ಮಣ್ ಹೇಳಿಕೇಳಿ ವೈದ್ಯರು. ಜತೆಗೇ ಕವಿ. ಎರಡೂ ಸೇರಿ ಅವರ ಮನದಲ್ಲೊಬ್ಬ ನಿಜ ಮನುಷ್ಯನಿದ್ದಾನೆ. ತುಳಿತಕ್ಕೊಳಗಾದವರ, ದನಿಯಿಲ್ಲದವರ ಒಳದನಿಯಂತೆ ಬರೆವ ಲಕ್ಷ್ಮಣ್‌ರ ಕವನಗಳೇ ಇಲ್ಲಿ ಲೇಖನಗಳಾಗಿವೆಯೇನೋ ಎಂಬಂತೆ ಈ ಲೇಖನಗಳ ತುಂಬ ಭಾವಗಳು ಮುಪ್ಪುರಿಗೊಂಡಿವೆ. ಇಂದಿನ ಆಗುಹೋಗುಗಳು, ವಾಸ್ತವದ ಕ್ರೌರ್ಯದ ಕುರಿತು ಇಲ್ಲೊಂದು ವಿಷಾದವಿದೆ. ತಣ್ಣನೆಯ ವಿರೋಧವೂ ಇದೆ.

ಇದೊಂದು ಕನ್ನಡಿ. ಇಂದಿನ ವ್ಯವಸ್ಥೆ, ಬದುಕಿನ ರೀತಿನೀತಿ, ನಾವು ಹಾಕಿಕೊಂಡಿರುವ ಮುಖವಾಡ ಎಲ್ಲವನ್ನೂ ಈ ಕೃತಿ ಪ್ರತಿಫಲಿಸಿದೆ. ನಮ್ಮನ್ನು ನಾವು ತಿದ್ದಿಕೊಳ್ಳಬೇಕಾದ ಎಲ್ಲ ಅಂಕುಡೊಂಕುಗಳೂ ಇಲ್ಲಿನ ಅಕ್ಷರಗಳಲ್ಲಿವೆ.

ಇದೊಂದು ಅಪ್ತಮಾತಿನ ಸಮಯ. ತಮ್ಮ ವ್ಯಕ್ತಿತ್ವದಂತೆಯೇ ಲಕ್ಷ್ಮಣ್‌ರ ಬರವಣಿಗೆಯಲ್ಲಿಯೂ ಒಂದು ಆತ್ಮೀಯ ಭಾವವಿದೆ. ಇಲ್ಲಿರುವುದು ಅವರೋ ಇವರೋ ಇನ್ನಾರೋ ಅಲ್ಲ, ನಾವೇ. ನಮ್ಮೆಲ್ಲರ ನಡುವಣ ಒಂದು ಮಾತುಕತೆಯಂತೆ, ನಮ್ಮದೇ ನಿತ್ಯದ ಕಥನವೆಂಬಂತಹ ನಿರೂಪಣೆ ಸೆಳೆಯುತ್ತದೆ.

ಇದೊಂದು ಸುವಿಚಾರಗಳ ಸರಣಿ. ಪ್ರತಿ ಲೇಖನದಲ್ಲಿಯೂ ನಾವೆಲ್ಲರೂ ಯೋಚಿಸಬೇಕಾದ ಗಹನವಾದ ವಿಚಾರಗಳಿವೆ. ಓದುತ್ತ ಓದುತ್ತ ಓದುಗರಲ್ಲಿ ಚಿಂತನೆಗೆ ಹಚ್ಚುವ ಈ ವಸ್ತುಗಳು ನಮ್ಮಲ್ಲಿಯೂ ಮುಂದುವರಿಯುತ್ತವೆ. ನಮ್ಮೆಲ್ಲರ ಸುತ್ತಲಿನ ಲಕ್ಷ್ಮಣ ರೇಖೆಯನ್ನು ಮೀರಿಯೂ ಈ ಕೃತಿ ಬೆಳೆಯ.

-ವಿದ್ಯಾರಶ್ಮಿ ಪೆಲತ್ತಡ್ಕ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)