Dr. Sandya. V, Pavanamourya Chakravarthi. S, Dr. Yuvaraju. R, Dr. G. K. Devarajaswamy
ಗಂಗ ಕನ್ದರ್ಪ
ಗಂಗ ಕನ್ದರ್ಪ
Publisher -
- Free Shipping Above ₹300
- Cash on Delivery (COD) Available
Pages - 1068
Type - Hardcover
Couldn't load pickup availability
.....ಮುಖವಾಡದ ಬದುಕು ಮೂರು ದಿನ, ಬಣ್ಣದ ಬದುಕು ಆರು ದಿನ. ನಿಯತ್ತಿನ ಬದುಕು ಶಾಶ್ವತ, ಬದುಕಿನ ಪುಸ್ತಕ ಎಷ್ಟೇ ಹಳೆಯದಾದರೂ ನೆನಪಿನ ಪುಟಗಳು ಯಾವಾಗಲೂ ಹೊಸದಾಗಿಯೇ ಇರುತ್ತವೆ. ಪೆಟ್ಟು ತಿಂದ ಕಲ್ಲು ಸುಂದರ ದೇವರ ಮೂರ್ತಿಯಾಯಿತು. ಆದರೆ ಪೆಟ್ಟು ಕೊಟ್ಟ ಸುತ್ತಿಗೆ ಸುತ್ತಿಗೆಯಾಗಿಯೇ ಉಳಿಯಿತು. ನೋವು ಕೊಡುವವರು ಹಾಗೆಯೇ ಉಳಿಯುತ್ತಾರೆ. ನೋವನ್ನು ಉಂಡವರು ಜ್ಞಾನಿಗಳಾಗುತ್ತಾರೆ ಮತ್ತು ಬೆಳೆಯುತ್ತಾರೆ.......
ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು. ಒಳ್ಳೆಯವರು ಬೇಕಾದಷ್ಟು ಜನ ಇರಬಹುದು. ಆದರೆ ನಿಖರವಾದ ನಿಲುವು ಮತ್ತು ಶಿಸ್ತುಬದ್ಧವಾಗಿ ಇರುವವರ ಸಂಖ್ಯೆ ಅತ್ಯಂತ ವಿರಳ. ಒಂದು ಹೆಮ್ಮರ ಅನೇಕ ಏರಿಳಿತಗಳನ್ನು ಮೌನದಿಂದಲೇ ಸ್ವೀಕರಿಸಿ ಬೃಹತ್ತಾಗಿ ಬೆಳೆಯುತ್ತದೆ. ನಮಗೆ ಎದುರಾಗುವ ಸಂಕಷ್ಟಗಳನ್ನು ದಾಟಿ ಹೆಮ್ಮರವಾಗಿ ಬೆಳೆಯಬೇಕು. ಕುದುರೆ ಎಷ್ಟೇ ಚೆನ್ನಾಗಿ ಗಾಡಿ ಎಳೆದರೂ ಚಾಟಿ ಏಟು ತಪ್ಪಿದ್ದಲ್ಲ. ಮರ ಎಷ್ಟೇ ರುಚಿಯಾದ ಹಣ್ಣು ಕೊಟ್ಟರೂ ಕಲ್ಲು ಏಟು ತಪ್ಪಿದ್ದಲ್ಲ. ಮನುಷ್ಯ ಎಷ್ಟೇ ಶ್ರೇಷ್ಠ ವ್ಯಕ್ತಿಯಾದರೂ ಜನರ ನಿಂದನೆ ತಪ್ಪಿದ್ದಲ್ಲ. ಕಾಯುತ್ತಾ ಕುಳಿತವರಿಗೆ ಒಳ್ಳೆಯ ದಿನಗಳು ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಕಷ್ಟಪಟ್ಟು ದುಡಿಯುವವರಿಗೆ ಇಂದಿಲ್ಲ ನಾಳೆ ಒಳ್ಳೆಯ ದಿನಗಳು ಬಂದೇ ಬರುತ್ತವೆ. ಮನುಷ್ಯನ ನಿಜವಾದ ಆನಂದ ಹೃದಯದ ಗೂಡಿನಲ್ಲಿದೆ ಹೊರತು ಗುಡಿಸಲು ಅರಮನೆಯಲ್ಲಲ್ಲ. ಸುಳ್ಳಿನ ಜೊತೆ ಜನ ಇದ್ದರೆ ಸತ್ಯದ ಪರ ದೇವರು ಇರುತ್ತಾನೆ. ಜೀವನದಲ್ಲಿ ಸಂಬಂಧಗಳು ಶ್ರೀಗಂಧದಂತೆ ಇರಬೇಕು. ಹಲವಾರು ತುಂಡುಗಳಾದರೂ ಸುಗಂಧ ಮಾತ್ರ ತುಂಡಾಗದು ಎಂಬ ಮಾತಿನಂತೆ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ ಜೀನವದಲ್ಲಿ ಮೇರು ಗಿರಿಯನ್ನೇರಿದವರು ಡಾ. ದೇವರಕೊಂಡಾರೆಡ್ಡಿಯವರು.
-ಶ್ರೀ ರಂಭಾಪುರಿ ಜಗದ್ಗುರುಗಳ ಶುಭಾಶೀರ್ವಾದ ಸಂದೇಶದಿಂದ
Share


Subscribe to our emails
Subscribe to our mailing list for insider news, product launches, and more.