Dr. Gajanana Sharma
Publisher - ಅಂಕಿತ ಪುಸ್ತಕ
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಭಾರತದ ಮಹಾಮಾಪನದ ಕತೆಯನ್ನು ಹೇಳುತ್ತಲೇ, ಭಾರತೀಯ ಮನಸ್ಸು, ದೈವಿಕತೆ, ಅಧ್ಯಾತ್ಮವನ್ನು ಹೇಳುವ ಕಾದಂಬರಿ ಪ್ರಮೇಯ, ಇದರ ಹರಹು ಮತ್ತು ಆಳ ನನ್ನನ್ನು ಅಚ್ಚರಿಗೊಳಿಸಿದೆ. ಇದು ಹಿಮಾಲಯವನ್ನು ಅಳೆದ ಕತೆ, ಅಳೆದವರ ಕತೆ, ಅಳೆದು ಉಳಿದವರ ಕತೆ, ವೈಜ್ಞಾನಿಕ ಜಗತ್ತು ಭಾರತದ ಮಹಾಮಾಪನವನ್ನು ಗ್ರೇಟ್ ಟ್ರಿಗೋಮೆಟ್ರಿಕ್ ಸರ್ವೆ ಎ೦ದು ಕರೆಯಿತು. ಆ ಯೋಜನೆಯನ್ನು ಮುನ್ನಡೆಸಿದ ಕರ್ನಲ್ ಲ್ಯಾಂಟ್ಸನ್, ಜಾರ್ಜ್ ಎವರೆಸ್ಟ್, ಆಂಡ್ರ ವಾ ಥಾಮಸ್ ಜಾರ್ಜ್ ಮಾಂಟೆಗು ಮತ್ತು ವಿಲಿಯಂ ಜಾನ್ಸನ್‌ರ ಕಷ್ಟಸುಖದ ಕತೆಯನ್ನು ಹೇಳುತ್ತಲೇ ಭಾರತದ ಕತೆಯನ್ನೂ ಗಜಾನನ ಶರ್ಮರು ಹೇಳುತ್ತಾರೆ.
ಇಂಥದ್ದೊಂದು ವಸ್ತುವನ್ನು ಆಧರಿಸಿದ ಮೊದಲ ಭಾರತೀಯ ಕಾದಂಬರಿ ಇದು. ಚರಿತ್ರೆ ಮತ್ತು ಕಲ್ಪನೆ ಎರಡನ್ನೂ ಹದವಾಗಿ ಬೆರೆಸುತ್ತಾ, ಚಾರಿತ್ರಿಕ ವಿವರಗಳಿಗೆ ಅಪಚಾರ ಆಗದಂತೆ, ಕಲಾನುಭವಕ್ಕೆ ಕುಂದಾಗದಂತೆ ಈ ಕತೆಯನ್ನು ಗಜಾನನ ಶರ್ಮ ಕಟ್ಟಿದ್ದಾರೆ. ಕ್ಲುಪ್ತ ವಿವರ, ಸ್ಪಷ್ಟ ಮಾಹಿತಿ, ಸಮರ್ಪಕ ಕ್ಷೇತ್ರಾಧ್ಯಯನ, ಅನುಪಮ ಶ್ರದ್ಧೆ ಮತ್ತು ಸರಳ ಭಾಷೆ ಹುರಿಗಟ್ಟಿರುವ ಕಾದಂಬರಿ ಇದು. ನಮಗೆ ಗೊತ್ತಿಲ್ಲದ ಹೊರಜಗತ್ತು ಮತ್ತು ಒಳಜಗತ್ತನ್ನು ಈ ಕಾದ೦ಬರಿ ಅನಾವರಣ ಮಾಡುತ್ತದೆ.
- ಜೋಗಿ
