Skip to product information
1 of 1

Translated By Sahana Hegde

ಫಾಲೋಯಿಂಗ್ ಫಿಶ್

ಫಾಲೋಯಿಂಗ್ ಫಿಶ್

Publisher - ಛಂದ ಪ್ರಕಾಶನ

Regular price Rs. 220.00
Regular price Rs. 220.00 Sale price Rs. 220.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಈ ಅನನ್ಯ ಪ್ರವಾಸ ಕಥನವು, ಸೃಜನಶೀಲ ಪರಿಕಲ್ಪನೆ ಮತ್ತು ಕೌಶಲ್ಯಪೂರ್ಣ ನಿರ್ವಹಣೆಯನ್ನು ಹೊಂದಿದೆ. ಭಾರತ ಭೂಖಂಡದಲ್ಲಿ ಮೀನುಗಾರಿಕೆ ಮತ್ತು ಮೀನೂಟದ ಕ್ರಮವು ಹೇಗೆ ತನ್ನದೇ ಆದ ಸಂಸ್ಕೃತಿ ಮತ್ತು ಪರಿಸರಗಳನ್ನು ರೂಪಿಸಿದೆ ಎಂಬುದನ್ನು ಅದ್ಭುತ ಒಳನೋಟಗಳನ್ನುಳ್ಳ ಲೇಖನಗಳ ಮೂಲಕ ಲೇಖಕ ಕಟ್ಟಿ ಕೊಟ್ಟಿದ್ದಾರೆ. ಹಲವಾರು ಭೂಪ್ರದೇಶ ಮತ್ತು ಕರಾವಳಿಗಳ ವೈವಿಧ್ಯಮಯ ಚಿತ್ರಣವನ್ನು ಹೊಂದಿರುವ ಈ ಕೃತಿಯು ಸಮೃದ್ಧ ಪಾತ್ರಪ್ರಪಂಚವನ್ನೂ ಒಳಗೊಂಡಿದೆ. ಹದಮೀರದ ಇಲ್ಲಿಯ ಅಭಿರುಚಿಪೂರ್ಣ ಭಾಷೆ ಮತ್ತು ನುಡಿಗಟ್ಟುಗಳು ಘನತೆಯಿಂದ ಕೂಡಿವೆ. ಆಪ್ತ ಭಾವದ ಈ ಬರೆವಣಿಗೆಗೆ ಸಾಕಷ್ಟು ಕೋಮಲತೆಯೂ ಇದೆ.

ಇದು ಪ್ರವಾಸವನ್ನು ಹೇಗೆ ಮಾಡಬೇಕು ಎನ್ನುವುದನ್ನು ಹೇಳುವ ಪುಸ್ತಕವಲ್ಲ. ಬದಲಿಗೆ ಇದೊಂದು ಕೇವಲ ಪ್ರವಾಸ ಕಥನ. ಲೇಖಕರ ಪ್ರವಾಸಗಳ ಅನುಭವ ಹಾಗೂ ಅವಲೋಕನ. ಭೇಟಿಮಾಡಿದ ಜನರೊಂದಿಗೆ ಆಡಿದ ಮಾತುಕತೆ. ಸೆಳೆದ ವಿಷಯಗಳ ಕುರಿತಾದ ಶೋಧನೆಗಳ ದಾಖಲೆಯಷ್ಟೆ. ಇದೊಂದು ಸರಳವಾದ ಆಲೋಚನೆ-ವಿಚಾರಗಳು.

View full details