S. K. Umesh
ಐ WITNESS PART-2
ಐ WITNESS PART-2
Publisher - ಸಪ್ನ ಬುಕ್ ಹೌಸ್
- Free Shipping Above ₹250
- Cash on Delivery (COD) Available
Pages - 353
Type - Paperback
ಎಸ್. ಕೆ. ಉಮೇಶ್
ಸೂಪರಿಂಟೆಂಡ್ ಆಫ್ ಪೊಲೀಸ್
ರಾಮನಗರ ಜಿಲ್ಲೆಯ ಸೋರೆಕಾಯಿದೊಡ್ಡಿಯ ನನ್ನ ವಿದ್ಯಾಭ್ಯಾಸವನ್ನು ತಾಲ್ಲೂಕಿನ ಕನಕಪುರದಲ್ಲಿ ಮುಗಿಸಿ, ವಕೀಲರಾಗಿ ವೃತ್ತಿ ಪ್ರಾರಂಭಿಸಿ ಮಹದಾಸೆಯಿಂದ ಸಬ್ ಇನ್ಸ್ಪೆಕ್ಟರ್ ಹುದ್ದೆ ಅರಸಿದ್ದ ನನಗೆ ದಕ್ಕಿದ್ದು ಒಂದು ಅದೃಷ್ಟ
ಇದರಲ್ಲಿ 31 ವರ್ಷಗಳ ಕಾಲ ಸಾರ್ವಜನಿಕರ ಮಧ್ಯೆ ಸೇವೆ ಮಾಡುತ್ತಾ ಗಳಿಸಿದ ಅಪಾರ ಪ್ರೀತಿ ಬೆಟ್ಟದಷ್ಟು, ಪೊಲೀಸ್ ಸೇವೆಯಲ್ಲಿ ಪ್ರಾಣದ ಭಯವಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹಿರಿಯರು ತಿಳಿಸಿದ್ದರು. ನಾನು 1990ರಿಂದ 2020ರ ವರೆಗೆ ಬೆಂಗಳೂರಿನಲ್ಲಿ ಕೆಲಸ ಮಾಡುವ ಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ. ಇಲ್ಲಿ ಕೆಲಸಕ್ಕಿಂತ ಕ್ರಿಮಿನಲ್ಗಳ ಜೊತೆ ಆಡಿದ ಆಟವೇ ರೋಮಾಂಚಕ. ಈ ಭಾಗ್ಯ ಎಷ್ಟು ಅಧಿಕಾರಿಗಳಿಗೆ ಸಿಕ್ಕಿರಬಹುದೇನೋ ಎಂಬ ಯಕ್ಷಪ್ರಶ್ನೆ. ನಾನು ಪೊಲೀಸ್ ಕೆಲಸವನ್ನು ಪ್ರೀತಿಸಿದಷ್ಟು ಬೇರೇನನ್ನೂ ಈ ಮಟ್ಟಿಗೆ ಪ್ರೀತಿಸಲಾಗದೇನೋ. ದಿನಗಳು ಮಿಂಚಿನಂತೆ ಕಳೆದುಹೋದವು. ಹಿಂತಿರುಗಿ ನೋಡಿದಾಗ ನೆನಪಿನ ಬುತ್ತಿಗಳು ಮಾತ್ರ ಕಾಡುವುದುಂಟು.
ಸೇವಾವಧಿಯಲ್ಲಿ ನಡೆದ ಎನ್ ಕೌಂಟರ್ಗಳು, ಅಪಹರಣಗಳು, ಕೊಲೆಗಳು, ಸುಲಿಗೆಗಳು, ಸೈಕೋಪಾತ್ ಮಾರಣಹೋಮಗಳು, ಮಿಸ್ಸಿಂಗ್ ಪ್ರಕರಣಗಳು, ಅಂಡರ್ವರ್ಲ್ಡ್ನವರ ಜೊತೆ ನಿರಂತರ ಸಂಘರ್ಷ, ಮೋಸಗಾರರ ಸ್ವರ್ಗ- ಬೆಂದಕಾಳೂರಿನಲ್ಲಿ ಮೂಟೆ ಕಟ್ಟಿ ಜೈಲಿಗೆ ದಬ್ಬಿದ್ದು, ನ್ಯಾಯಾಲಯದಲ್ಲಿ ಅಪರಾಧಿಗಳಿಗೆ ಕೊಡಿಸಿದ ಶಿಕ್ಷೆಗಳ ಖುಷಿ. ಇದರೊಂದಿಗೆ ಅನುಭವಿಸಿದ ಮಾನಸಿಕ ತುಮುಲಾಟ. ಸಾರ್ವಜನಿಕರಿಂದ ಪಡೆದ ಮೆಚ್ಚುಗೆ ಮಾಡಿದ ಕೆಲಸಕ್ಕೆ ಸಂದ ಗೌರವಗಳು ಸಾಲು ಸಾಲು.
ಎರಡು ಬಾರಿ ಮುಖ್ಯಮಂತ್ರಿಗಳ ಪದಕ, ಒಂದು ಬಾರಿ ಮುಖ್ಯಮಂತ್ರಿ ಪುರಸ್ಕಾರ. 2015ರ ರಾಷ್ಟ್ರಪತಿಯವರ ಪದಕ. 2020ರಲ್ಲಿ ದೊರೆತ ಕೇಂದ್ರ ಸರ್ಕಾರದ 'ಸ್ಪೆಷಲ್ ಆಪರೇಷನ್ ಮೆಡಲ್' ಹಾಗು 'ಕೆಂಪೇಗೌಡ ಪ್ರಶಸ್ತಿ', ಹಲವಾರು ಪ್ರಶಸ್ತಿಗಳು ನೀಡಿ ಗೌರವಿಸಲಾಗಿದೆ. ಇನ್ನು ಬಹುಮುಖ್ಯ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಇವುಗಳನ್ನೂ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಬಹುದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಅದರ ಸಮಪಾಲು ನನ್ನ ಐ-ವಿಟೈಸ್ನ ಮೇಲಿದೆ.
Share
Subscribe to our emails
Subscribe to our mailing list for insider news, product launches, and more.