Dr. Gururaja Karajagi
ಈಶಾವ್ಯಾಸ ಉಪನಿಷತ್
ಈಶಾವ್ಯಾಸ ಉಪನಿಷತ್
Publisher - ವಸಂತ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 212
Type - Paperback
ಉಪನಿಷತ್ತುಗಳು ಸಂಸ್ಕೃತ ಬಲ್ಲವರಿಗೆ ಮಾತ್ರ ಸೀಮಿತವಾದುದು, ವಿದ್ವಾಂಸರಿಗಷ್ಟೇ ನಿಲುಕುವಂತಹುದು, ಅಧ್ಯಾತ್ಮ ವಿಚಾರಗಳನ್ನು ಸಾಮಾನ್ಯ ಹುಲುಮಾನವರು ಓದತಕ್ಕದ್ದಲ್ಲ ಎಂಬಿತ್ಯಾದಿ ಪೂರ್ವಗ್ರಹಗಳನ್ನು ಸಮಾಜ ಬೆಳೆಸಿಕೊಂಡಿದೆ. ಕರಜಗಿಯವರು ಈ ಕೃತಿಯನ್ನು ರಚಿಸುವ ಮೂಲಕ ಅಂತಹ ಪೂರ್ವಗ್ರಹಗಳನ್ನು ಭಗ್ನಗೊಳಿಸಿದ್ದಾರೆ. ಇದು ವೇದೋಪನಿಷತ್ತುಗಳಲ್ಲಿ ಆಸಕ್ತರಾದವರಿಗಷ್ಟೇ ಪ್ರಿಯವೆನಿಸುವ ಕೃತಿಯಲ್ಲ. ವೇದೋಪನಿಷತ್ತುಗಳ ಪ್ರಾಥಮಿಕ ತಿಳಿವಳಿಕೆ ಇಲ್ಲದವರೂ ಸಹ ಅವುಗಳ ಕುರಿತು ಅರಿಯುವಂತೆ, ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡುವ ಕೃತಿಯಾಗಿದೆ. ಓದುಗರಿಗೆ ಸುಲಭವಾಗಲೆಂದು ಡಿ.ವಿ.ಜಿ. ಅವರ ಈಶೋಪನಿಷತ್ತಿನ ಕನ್ನಡಾನುವಾದವನ್ನು ಬಳಸಿಕೊಂಡಿದ್ದಾರೆ. ವ್ಯಾಖ್ಯಾನದ ಮಧ್ಯೆ ಮಧ್ಯೆ, ಮಂತ್ರಾರ್ಥಕ್ಕೆ ಪೂರಕವಾಗುವಂತೆ ಹತ್ತು ಹಲವು ದೃಷ್ಟಾಂತ ಕಥೆಗಳು, ಪ್ರಸಂಗಗಳು, ಪ್ರಹಸನಗಳನ್ನು ಪೋಣಿಸಿ ಕೃತಿಯ ಆಕರ್ಷಣೆಯನ್ನು ಹೆಚ್ಚಿಸಿದ್ದಾರೆ. ವೇದಾಂತ ಪಾರಾಯಣವಲ್ಲದೇ ಸುಮ್ಮನೆ ಓದಿನ ಸುಖ ಅನುಭವಿಸಲಿಕ್ಕೂ ಸಹ ಅವರ ಕೃತಿ ನೆರವಾಗುತ್ತದೆ. ಅವರ ಕೈಯಿಂದ ಇಂತಹ ಇನ್ನೂ ಹಲವು ಕೃತಿರತ್ನಗಳು ಮೂಡಲಿ ಎಂದು ಹಾರೈಸುತ್ತೇವೆ.
-ಡಾ|| ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪೀಠಾಧ್ಯಕ್ಷರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಶ್ರೀ ಆದಿಚುಂಚನಗಿರಿ ಕ್ಷೇತ್ರ
Share
Subscribe to our emails
Subscribe to our mailing list for insider news, product launches, and more.