L. S. Shyamasundar Sharma
Publisher - ನವಕರ್ನಾಟಕ ಪ್ರಕಾಶನ
Regular price
Rs. 65.00
Regular price
Rs. 65.00
Sale price
Rs. 65.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಶಿಕ್ಷಕ, ಶಿಕ್ಷಣತಜ್ಞ, ಸಂಶೋಧಕ ಹಾಗೂ ಆಡಳಿತಗಾರ ಎಲ್. ಎಸ್. ಶ್ಯಾಮಸುಂದರ ಶರ್ಮ ಅವರು ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ರಸಪ್ರಶ್ನೆ ಶರ್ಮ ಎಂದೇ ಪರಿಚಿತರಾಗಿರುವ ಇವರು ಮಕ್ಕಳಿಗಾಗಿ ಬರೆಯುವುದರಲ್ಲಿ ಹೆಚ್ಚಿನ ಒಲವು ಹೊಂದಿದ್ದಾರೆ. ಇವರ ಕೆಲವು ಬರಹಗಳು ಈಗಾಗಲೇ ಹೊರಬಂದಿವೆ. ಕಲೆ, ಸಂಗೀತ, ಸ್ಕೌಟಿಂಗ್, ಸಮಾಜ ಸೇವೆ ಇವರ ಆಸಕ್ತಿಯ ವಿಷಯಗಳು, ಮಾಗಡಿ ರಸ್ತೆಯ ಪ್ರಸಿದ್ಧ ಶ್ರೀವಾಣಿ ವಿಜ್ಞಾನ ವನದ ರೂವಾರಿ ಇವರು.
ಗಹನವಾದ ವೈಜ್ಞಾನಿಕ ವಿವರಗಳನ್ನು ಸುಲಭವಾಗಿ ಅರಗಿಸಿಕೊಳ್ಳಲು ಅನುವಾಗುವಂತೆ ಕಥಾಹಂದರವನ್ನು ಇಲ್ಲಿ ರಚಿಸಲಾಗಿದೆ. ರಂಜನೀಯವಾಗಿ ಲವಲವಿಕೆಯಿಂದ ಓದಿಸಿ ಕೊಂಡು ಹೋಗುವ ಆ ಬರಹಗಳಿಂದ ಮಕ್ಕಳು ತಮಗೇ ಅರಿವಾಗದಂತೆ ವೈಜ್ಞಾನಿಕ ವಿಷಯಗಳ ಪರಿಚಯ ಮಾಡಿ ಕೊಳ್ಳುತ್ತಾ ಹೋಗುತ್ತಾರೆ. ಮಕ್ಕಳು ನಡೆಸಬಹುದಾದ ಅನೇಕ ಚಟುವಟಿಕೆಗಳ ವಿವರ ಇಲ್ಲಿದೆ. ಇದರಿಂದ ಹೆಚ್ಚಿನ ವಿಚಾರಗಳನ್ನು ತಿಳಿಯಲು ಕುತೂಹಲ, ಆಸಕ್ತಿ ಬೆಳೆದು ಜ್ಜಾನ ವಿಕಾಸಕ್ಕಾಗಿ ಆಕರಗಳನ್ನು ಹುಡುಕಿಕೊಂಡು ಹೋಗುವ ಪ್ರವೃತ್ತಿ ಬೆಳೆಯುತ್ತದೆ.
ಇವರ ಇನ್ನೊಂದು ಕೃತಿ 'ಸುಣ್ಣದಿಂದ ಅಮೃತಶಿಲೆ'ಯಲ್ಲಿ ಭೌತವಿಜ್ಞಾನಕ್ಕೆ ಸಂಬಂಧಿಸಿದ ಕುತೂಹಲ ಕೆರಳಿಸುವ ಕತೆಗಳಿವೆ. ಇವುಗಳಲ್ಲಿ ನಿತ್ಯಜೀವನದಲ್ಲಿ ಕಂಡುಬರುವ ಕೌತುಕಗಳಿಗೆ ವಿವರಣೆ ಇದೆ.
ಪ್ರಸ್ತುತ 'ಎಲ್ಲಿಂದ ಬಂತು ಬೂಸ್ಟ್'ನಲ್ಲಿ ಜೀವವಿಜ್ಞಾನಕ್ಕೆ ಸಂಬಂಧಿಸಿದ ಕುತೂಹಲಕಾರಿ ಕತೆಗಳಿವೆ. ಇವುಗಳಲ್ಲಿ ವೈಜ್ಞಾನಿಕ ವಿವರಗಳ ಜೊತೆಗೆ ಪರಿಸರದ ಬಗ್ಗೆ ಕಾಳಜಿ ಬೆಳೆಸಲು ಒತ್ತು ಕೊಡಲಾಗಿದೆ.
ಈ ಬರಹಗಳು ಬರೀ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಸಹಾ ಇಷ್ಟವಾಗಬಲ್ಲವು