Skip to product information
1 of 1

Vishweswara Bhat

ಎಲ್ಲರ ಕಾಲನ್ನೂ ಎಳೆಯುತ್ತೆ ಕಾಲಂ!

ಎಲ್ಲರ ಕಾಲನ್ನೂ ಎಳೆಯುತ್ತೆ ಕಾಲಂ!

Publisher - ಸಾವಣ್ಣ ಪ್ರಕಾಶನ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 200

Type - Paperback

ಯಾವುದೇ ಕಾಲಂನ್ನು ನಿರಂತರವಾಗಿ ಓದಿಸಿಕೊಂಡು ಹೋಗುವುದು ಕಷ್ಟ. ಓದುಗನನ್ನು ಒಂದು ಶಿಸ್ತಿಗೆ, ಚೌಕಟ್ಟಿಗೆ, ಮನಸ್ಥಿತಿಗೆ ಒಳಪಡಿಸಿ ವಾರವಾರವೂ ಓದುವಂತೆ ಪ್ರೇರೇಪಿಸುವುದು ಸವಾಲು, ಅಂಕಣಕಾರನ ಪಾತ್ರ ಎಂದೂ ಬರಿದಾಗಬಾರದು, ಹಾಗಂತ ಅದು ಉಕ್ಕಿ ಹರಿಯಲೂ ಬಾರದು. ಈ ವಾರ ಏನು ಬರೆಯಬಹುದು ಎಂಬ ಸಣ್ಣ ಸುಳಿವನ್ನು ಓದುಗನಿಗೆ ಕೊಡಬಾರದು. ಇನ್ನು ವಿಷಯವೂ ಅಷ್ಟೇ, ಪ್ರಸ್ತಾಪಿಸಿದ ವಿಷಯಗಳಾಚೆಯೂ ಹಲವು ಸಂಗತಿಗಳನ್ನು ತಿಳಿದೆ ಎಂದು ಓದುಗನಿಗೆ ಅನ್ನಿಸಬೇಕು. ಭಾಷೆ, ನಿರೂಪಣೆ, ಶೈಲಿ ಒಮ್ಮೊಮ್ಮೆ ಸಾಮಾನ್ಯ ಅಥವಾ ನೀರಸವೆನಿಸುವ ವಿಷಯವನ್ನೂ ಎತ್ತಿಕೊಂಡು ಹೋಗಿಬಿಡಬಲ್ಲದು, ಅಂಕಣಕಾರ ಒಂದು ವಾದ, ಸಿದ್ಧಾಂತಕ್ಕೆ ಕಟ್ಟುಬಿದ್ದು, ಸದಾ ಅದನ್ನೇ ಪ್ರತಿಪಾದಿಸುತ್ತಿರಬಾರದು. ಆಗ ಆತ ವಕ್ತಾರನಾಗುತ್ತಾನೆ. ಪೋಸ್ಟರ್ ಬಾಯ್ ಆಗುತ್ತಾನೆ. ಅದರ ಬದಲು ಕಾಲಂ ಎಲ್ಲರ ಕಾಲನ್ನೂ ಎಳೆಯಬೇಕು. ಅದು ಸಾಧ್ಯವಾಗುವುದಾದರೆ, ಅದಕ್ಕೆ ಬೇಕಾದ ದಿಟ್ಟತನ, ಪ್ರಾಮಾಣಿಕತೆ, ಬದ್ಧತೆ ಅಂಕಣಕಾರನಲ್ಲಿ ತನ್ನಷ್ಟಕ್ಕೆ ಕಾಣಿಸಿಕೊಳ್ಳುತ್ತದೆ. ಒಂದು ಕಾಲಂ ಎಲ್ಲರ ಕಾಲನ್ನೂ ಎಳೆಯದಿದ್ದರೆ, ಅದೂ ಒಂದು ಕಾಲಮ್ಮಾ? ಹಾಗಾದಾಗ ಕಾಲಂ ಕೆಲವು ಘಟನೆಗಳ ಕೈಫಿಯತ್ತಾಗುತ್ತದೆ.

ಕಾಲವೊಂದೇ ಅಲ್ಲ, ಕಾಲಮ್ಮೂ ಎಲ್ಲರ ಕಾಲೆಳೆಯಬೇಕು!

-ವಿಶ್ವೇಶ್ವರ ಭಟ್
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)