Skip to product information
1 of 2

Rajesh Kumar Kalya

ಈಗಲ್ಸ್ ಲೈನ್

ಈಗಲ್ಸ್ ಲೈನ್

Publisher - ವೀರಲೋಕ ಬುಕ್ಸ್

Regular price Rs. 220.00
Regular price Rs. 220.00 Sale price Rs. 220.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 182

Type - Paperback

ತನ್ನ ಹಿರಿಯರು ಬಾಳಿ ಬದುಕಿದ ಊರಿಗೆ, ನಾಯಕ ಅಧ್ಯಯನದ ನೆಪದಲ್ಲಿ ಬರುತ್ತಾನೆ. ಮಾಹಿತಿ ಸಂಗ್ರಹದ ನೆಪದಲ್ಲಿ ಊರಿನವರೊಂದಿಗೆ ಒಡನಾಟ ಬೆಳೆಸಿಕೊಳ್ಳುತ್ತಾನೆ. ಅನಂತರದಲ್ಲಿ ಅವನೆದುರಿಗೆ ಒಂದು ಅನೂಹ್ಯ ಲೋಕವೇ ತೆರೆದುಕೊಳ್ಳುತ್ತದೆ. ಕುತೂಹಲದಿಂದಲೇ ಪ್ರತಿಯೊಂದಕ್ಕೂ ಮುಖಾಮುಖಿಯಾಗುತ್ತಾನೆ. ಮುಗ್ಧತೆ, ಸ್ವಾರ್ಥ, ಈರ್ಷ್ಯೆ, ದ್ವೇಷ, ಧೈರ್ಯ, ಉಡಾಫೆ, ಪೆದ್ದುತನ, ಸಿಟ್ಟು, ಸೆಡವು ಮುಂತಾದ ಗುಣಾವಗುಣಗಳನ್ನು ಹೊಂದಿದ ಜನರು ಒಂದೊಂದು ಪಾತ್ರಗಳ ರೂಪದಲ್ಲಿಪರಿಚಯವಾಗುತ್ತಾ ಹೋಗುತ್ತಾರೆ.

ಈ ಕೃತಿಯ ಹಲವು ಅಧ್ಯಾಯಗಳಲ್ಲಿ ಒಂದೊಂದು ಕಥೆಗೆ ವಸ್ತುವಾಗುವಂಥ ಬೆರಗಿನ ವಿವರಗಳಿವೆ.ಸ್ವಾರಸ್ಯಕರ ಮಾಹಿತಿಗಳಿವೆ. ಹಾಗಂತ ಇದು ಅಜ್ಜಿಕಥೆಯಲ್ಲ, ಕುತೂಹಲ, ಪದೇಪದೇ ಕೈಜಗ್ಗುತ್ತದೆ; ಆದರೆ ಇದು ಸಸ್ಪೆನ್ಸ್‌ ಡ್ರಿಲ್ಲರ್ ಅಲ್ಲ, ಕಾಡಿನ ಹತ್ತಾರು ಜೀವಿಗಳ ಬದುಕಿನ ವಿವರವಿದ್ದರೂ ಇದು ಪರಿಸರದ ಕಥೆಯಷ್ಟೇ ಅಲ್ಲ, ಹಲವು ನಂಬಿಕೆ, ಆಚರಣೆಗಳ ಮೆರವಣಿಗೆಯಿದೆ. ಆದರೆ ಇದು ಕಾಡಂಚಿನ ಮಲೆನಾಡಿನ ಹಳ್ಳಿಯೊಂದರ ಕಥೆಯಷ್ಟೇ ಆಗಿ ಉಳಿಯುವುದಿಲ್ಲ. ಬದಲಿಗೆ, ಈ ಎಲ್ಲಾ ಅಂಶಗಳನ್ನೂ ಇಷ್ಟಿಷ್ಟೇ ಸೇರಿಸಿ ಹೆಣಿಗೆ ಹಾಕಿದ ಕಾದಂಬರಿ ಎಂಬ ಕುಲಾದವಿ.

ಕಾಡು, ಕಣಿವೆ, ಸಂಶೋಧನೆ, ಪರಿಸರ ಎನ್ನುವಾಗ, ಒಂದಿಡೀ ತಲೆಮಾರನ್ನು ಸೂಜಿಗಲ್ಲಿನಂತೆ ಸೆಳೆದ ಪೂರ್ಣಚಂದ್ರ ತೇಜಸ್ವಿಯವರನ್ನು ನೆನೆಯದೇ ಇರಲು ಸಾಧ್ಯವೇ ಇಲ್ಲ, ತೇಜಸ್ವಿಯವರ ಪರಮ ಅಭಿಮಾನಿಯಾದ ರಾಜೇಶ್ ಕುಮಾರ್, ಅವರನ್ನು ಧ್ಯಾನಿಸುತ್ತಲೇ ಕೃತಿ ರಚನೆಗೆ ಮುಂದಾದರೇನೋ, ಹಾಗಾಗಿಯೇ ಕಾದಂಬರಿಯ ಉದ್ದಕ್ಕೂ ಅದೆಷ್ಟೋ ಸಂದರ್ಭಗಳಲ್ಲಿ ತೇಜಸ್ವಿಯವರ 'ನೆರಳು ಪದೇಪದೇ ಸುಳಿದುಹೋಗುತ್ತದೆ. ಈ ಕಾದಂಬರಿಯಲ್ಲಿ ಬರುವ ಹಲವು ಸಂದರ್ಭಗಳನ್ನು ನಾವೂ ಕಂಡಿದ್ದೇವೆ, ಅನುಭವಿಸಿದ್ದೇವೆ ಅನ್ನಿಸಿದ ಸಂದರ್ಭದಲ್ಲಿಯೇ, ನಮಗೆ ಗೊತ್ತಿಲ್ಲದ ಎಷ್ಟೊಂದು ಸಂಗತಿಗಳು ಇವೆಯಲ್ಲ ಅನ್ನಿಸಿ ಸೋಜಿಗವೂ ಆಗುತ್ತದೆ. ಇಲ್ಲಿನ ಪ್ರತಿಯೊಂದು ಪಾತ್ರದ ಸನ್ನಿವೇಶದ ಮಾತುಕತೆಯ ವಿವರಗಳು ದೀರ್ಘವಾಗಿವೆ. ಅದೇ ಈ ಕಾದಂಬರಿಯ ಶಕ್ತಿ ಮತ್ತು ಮಿತ ಆಗಿರುವುದು ವಿಶೇಷ,
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)