Skip to product information
1 of 2

Kamnadigaa Narayana

ದ್ವಾಪರ

ದ್ವಾಪರ

Publisher - ನವಕರ್ನಾಟಕ ಪ್ರಕಾಶನ

Regular price Rs. 395.00
Regular price Rs. 395.00 Sale price Rs. 395.00
Sale Sold out
Shipping calculated at checkout.
Material

- Free Shipping Above ₹250

- Cash on Delivery (COD) Available

Pages -

Type - Paperback

ಸಂಕೀರ್ಣವಾದ ಮಹಾಭಾರತವನ್ನು ವಿಭಿನ್ನವಾದ ವಿಶ್ಲೇಷಣೆಗೆ ಒಳಪಡಿಸುವ ಕಾದಂಬರಿ 'ದ್ವಾಪರ', ವಿವಿಧ ಸಂದರ್ಭ, ಸನ್ನಿವೇಶಗಳನ್ನು ಆಯಾ ಪಾತ್ರಗಳು ಮನೋವೈಜ್ಞಾನಿಕವೆನ್ನುವಂತೆ ವಿಶ್ಲೇಷಿಸುತ್ತ, ತಮ್ಮ ತಮ್ಮ ಅಂತರಂಗದ ತುಮುಲಗಳನ್ನು ಶೋಧಿಸಿಕೊಳ್ಳುತ್ತಲೇ ವಾಸ್ತವವನ್ನು ಉದ್ವಸ್ಥಗೊಳಿಸುತ್ತ, ವೈಚಾರಿಕ-ವೈಜ್ಞಾನಿಕವಾಗಿ ವರ್ತಮಾನದ ಒರೆಗಲ್ಲಿಗೆ ಹಚ್ಚುತ್ತ. ಮಿಥ್‌ಗಳನ್ನು ಒಂದೊಂದಾಗಿ ಒಡೆಯುತ್ತ ಸಾಗುತ್ತವೆ.. ಎಲ್ಲವನ್ನು ಸ್ಥೂಲವಾಗಿ, ಸೂಚ್ಯವಾಗಿ ನಿರ್ವಚಿಸಿದಂತೆ ಕಂಡರೂ ಎಲ್ಲ ಅರ್ಥ ಸಾಧ್ಯತೆಗಳನ್ನೂ ಹೊರಹೊಮ್ಮಿಸುವ ಕಂನಾಡಿಗಾ ನಾರಾಯಣ ಅವರದು ಅದ್ಭುತ ಚಿತ್ರಕ ಶಕ್ತಿ. ಇವೆಲ್ಲದರ ಹಿಂದಿನ ಅವರ ಅಪಾರ ಓದು, ಪರಿಶ್ರಮ, ಕಲ್ಪನಾಶಕ್ತಿಯಿಂದ ವಿಸ್ತಾರವಾದ ಮಹಾಭಾರತವನ್ನು ಅಗತ್ಯಕ್ಕೆ ತಕ್ಕಂತೆ ಸಂಗ್ರಹಿಸಿ, ವಿಸ್ತರಿಸಿ, ವಿಚ್ಛೇದಿಸಿ, ಪುನರ್ನಿಮಿ್ರಸುವ ಹಾಗೂ ಅವೆಲ್ಲವನ್ನೂ ತಳುಕು ಹಾಕುವ ಸ್ಟೋಪಜ್ಞತೆಯಿಂದಾಗಿ 'ದ್ದಾಪರ' ಆಪ್ತವಾಗುತ್ತದೆ.
ಮಲೆನಾಡಿನ ಶಿವಮೊಗ್ಗೆಯಲ್ಲಿ 1966ರಲ್ಲಿ ಜನಿಸಿದ ಕಂನಾಡಿಗಾ ನಾರಾಯಣ ಅವರು ಇಂಗ್ಲಿಷ್, ಇತಿಹಾಸ, ರಾಜ್ಯಶಾಸ್ತ್ರ ಮತ್ತು ಕಾನೂನು ವಿಷಯಗಳಲ್ಲ ಪ್ರತ್ಯೇಕವಾಗಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1986ರಲ್ಲಿ ಬರವಣಿಗೆ ಆರಂಭಿಸಿ, 'ಮಂಡಲ', 'ಹಸಿರು ಕಣ್ಣಿನ ಹುಡುಗಿ', 'ನರವಿಂದ', 'ಇಹದ ಪರಿಮಳ ಮುಂತಾದ ಕಥಾಸಂಕಲನಗಳನ್ನು: 'ಕಾಂಡ' (ಸುಂದರ ರಾಮಾಯಣಕ್ಕೊಂದು ಮಧುರ ವ್ಯಾಖ್ಯಾನ), 'ಆಕಾಶ', 'ಭೂಮಿ', 'ದ್ವಾಪರ' (ಸಂಕೀರ್ಣ ಮಹಾಭಾರತ ಕ್ಕೊಂದು ವಿಭಿನ್ನ ವಿಶ್ಲೇಷಣೆ) ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. 'ಕಾಲ ಕರಗುವ ಮುನ್ನ', 'ಬಿ.ವಿ.ವೀ.ಸಮಗ್ರ' (ನಾಲ್ಕು ಸಂಪುಟ)ಗಳನ್ನು ಸಂಪಾದಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿಗಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿಯೂ ಪುಸ್ತಕಗಳನ್ನು ಸಂಪಾದಿಸಿಕೊಟ್ಟದ್ದಾರೆ. ಕಾದಂಬರಿ Dwapara, Kaanda, ಕಥಾಸಂಕಲನಗಳಾದ Herpes, Green Eyed Belle, Eclipsed Beauty, That Moment of Tumult, Ji Gandhi, The Fragrance of this World ಹಾಗೂ ಮಕ್ಕಳ ಕಥಗಳಾದ Baby Elephant, Peacock Quill ಇಂಗ್ಲಿಷಿಗೆ ಅನುವಾದಗೊಂಡ ಕೃತಿಗಳು.
ದ್ವಾಪರ' ಇವರ ಮಹತ್ವಾಕಾಂಕ್ಷೆಯ ಕಾದಂಬರಿ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)