Dayananda
Publisher - ಛಂದ ಪ್ರಕಾಶನ
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ದಯಾನಂದರ ಕತೆಗಳು ಒಂದು ಘಟನೆಯನ್ನು ಇರಿಸಿಕೊಂಡು ಕುತೂಹಲ ಕೆರಳುವ ಹಾಗೆ, ಭಾವನೆಯ ತಂತಿಗಳನ್ನು ಮೀಟುತ್ತ, ಓದುಗರನ್ನ ಅನಿರೀಕ್ಷಿತವಾದ ಒಂದು ಅಂತ್ಯಕ್ಕೆ ಕರೆದೊಯ್ದು ಅಚ್ಚರಿ ಪಡಿಸುವ ಇಲ್ಲವೆ ಕಣ್ಣಂಚಿಗೆ ನೀರನ್ನು ತಂದು ನಿಲ್ಲಿಸುವ ಕತೆಗಳ ಜಾಯಮಾನದಿಂದ ಹೊರಬಂದಿರುವಂತಹ ಕತೆಗಳು, ಮುಂದುವರಿದ ಹಾಗೆ ಅವರ ಕತೆಗಳು ಇನ್ನೂ ಹೆಚ್ಚಿನ ಆಳಕ್ಕೆ ಹೋಗಿ ತಲುಪುತ್ತವೆ ಅನ್ನುವ ಭರವಸೆ ನನಗಿದೆ. ಲೇಖಕರು ಕತೆ ಹೇಳುವುದರಲ್ಲಿ ನೈಪುಣ್ಯತೆ ಸಾಧಿಸಿದ್ದಾರೆ. ಆಕರ್ಷಕವಾದ ಭಾಷೆ ಇದೆ. ಓದುಗರ ಬಗ್ಗೆ ಗೌರವ ಇರಿಸಿಕೊಂಡೇ ಬರೆಯುತ್ತಾರೆ. ನೇರವಾಗಿ, ಸರಳವಾಗಿ ಕತೆ ಕಟ್ಟುತ್ತಾರೆ. ಸಮಯ, ಸಂದರ್ಭ, ಸನ್ನಿವೇಶಗಳನ್ನು ಸಹಜವಾಗಿ ತರುತ್ತಾರೆ.
-ಡಾ ನಾ ಡಿಸೋಜ
ಇವರ ಯಾವ ಕಥೆಯ ಪಾತ್ರವೂ ಕಪ್ಪು-ಬಿಳುಪಲ್ಲ, - ಲೇಖಕರು ಸಾಧ್ಯವಿದ್ದಷ್ಟೂ ವಸ್ತುನಿಷ್ಠವಾಗಿ ಸದ್ಯಸ್ಥಿತಿಯನ್ನು ಚಿತ್ರಿಸುತ್ತಾರೆ. ಕಥೆಯ ಪಾತ್ರವೊಂದು ಹೇಳುವಂತೆ 'ಮಿಥೈ ಅಂತಾರಲ್ಲ ಅದು ಸತ್ಯದ ಪಕ್ಕದ ಸೀಟಲ್ಲೇ ಕೂತಿರುತ್ತದೆ' ಎಂಬಂತಹ ತಾತ್ವಿಕ ನಿಲುವಿನ ಕಾರಣದಿಂದಾಗಿ ಕಥೆಗಳು ವಿಶ್ವಾಸವನ್ನು ಪಡೆದುಕೊಳ್ಳುತ್ತವೆ. ಸಂಕ್ರಮಣ ಕಾಲದ ಸಾಮಾಜಿಕ-ಸಾಂಸ್ಕೃತಿಕ ಸುಳಿಗಳಲ್ಲಿ ಸಿಕ್ಕಿ ಕಳೆದುಹೋಗುವ ಅಥವಾ ಕಳೆದುಹೋಗದಿರಲು ಹಟದಿಂದ ಕೈಕಾಲು ಬಡಿಯುವ ಇಂದಿನ ಯುವಜನಾಂಗವನ್ನು ಚಿತ್ರಿಸುವ ದಯಾನಂದ ಅವರ ಕಥೆಗಳನ್ನು ಕನ್ನಡ ಓದುಗರು ಪ್ರೀತಿಯಿಂದ ಸ್ವಾಗತಿಸುತ್ತಾರೆ ಎಂಬ ನಂಬಿಕೆ ನನಗಿದೆ.
-ಸಿ ಎನ್ ರಾಮಚಂದ್ರನ್