Sushanth Kotyan
ದೀಪವಿರದ ದಾರಿಯಲ್ಲಿ
ದೀಪವಿರದ ದಾರಿಯಲ್ಲಿ
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹250
- Cash on Delivery (COD) Available
Pages -
Type -
ನಮ್ಮ ಸಮಾಜದಲ್ಲಿ ಸಲಿಂಗರತಿ ಮತ್ತು ಅದಕ್ಕೆ ಸಂಬಂಧಿಸಿದಂತಿರುವ ಅನೇಕ ಸಂಗತಿಗಳು ಜನಪ್ರಿಯವಾಗಿದ್ದರೂ, ಅದರ ಬಗ್ಗೆ ಬಹಿರಂಗವಾದ ಚರ್ಚೆಗಳು ನಡೆದದ್ದು ಕಡಿಮೆ. ಈ ಕುರಿತು ನಮ್ಮ ತಿಳುವಳಿಕೆಗಳನ್ನು ಹೆಚ್ಚಿಸುವ ಪುಸ್ತಕಗಳಾಗಲಿ, ಲೇಖನಗಳಾಗಲಿ ಪ್ರಕಟವಾದದ್ದು ಕೂಡಾ ಕಡಿಮೆಯೆ. ಒಂದು ಗಂಡಿಗೆ ಇನ್ನೊಂದು ಗಂಡಿನ ಮೇಲಿನ ಮೋಹ ಹುಟ್ಟುವುದು ಅಸಹಜವೇನಲ್ಲವಾದರೂ, ಅದರ ಬಗ್ಗೆ ಅಮೆರಿಕಾದಲ್ಲೋ, ಮೆಕ್ಸಿಕೋದಲ್ಲೋ ಮಾತಾಡುವಷ್ಟು ಸಹಜವಾಗಿ ನಾವು ಮಾತಾಡಲಾರೆವು. ಸಲಿಂಗ ಪ್ರೇಮಿಗಳನ್ನು ನಮ್ಮ ಸಮಾಜವು ಆದರಿಸುವ ಉದಾರತೆಯನ್ನು ಇನ್ನೂ ತೋರಿಸಿಲ್ಲ. ಈ ಕಾದಂಬರಿಯು ಅಂತಹ ಲೈಂಗಿಕತೆಯ ವಿಭಿನ್ನ ಮಜಲುಗಳನ್ನು ಧೈರ್ಯವಾಗಿ ಶೋಧಿಸುತ್ತದೆ.
ರವೀಂದ್ರ, ಆಕಾಶ್ ಮತ್ತು ಸುಕೇಶರ ನಡುವಣ ತ್ರಿಕೋನ ಸಂಬಂಧಗಳ ಜೊತೆಗೆ, ಗಂಡಸರ ಹಿಂದೆ ಹೋಗುವ ರಘುಪತಿಯ ಸಮಸ್ಯೆಗಳೂ ಬಿಚ್ಚಿಕೊಳ್ಳುತ್ತವೆ. ಗೇ ಸೆಕ್ಸ್ ವೀಡಿಯೋ ನೋಡುವ ಗಂಡನನ್ನು ತೊರೆದು, ಅವನ ಹೆಂಡತಿ ಗುಜರಾತಿಯೊಬ್ಬನ ಸ್ನೇಹ ಮಾಡುತ್ತಾಳೆ. ಈ ಎಲ್ಲಾ ಘಟನೆಗಳನ್ನು ಸಮಾಜವು ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿಕೊಳ್ಳುತ್ತಾ ಹೋಗುತ್ತದೆ. ಇಂಥ ಸಂಕೀರ್ಣ ಸ್ಥಿತಿಯನ್ನು ಕಾದಂಬರಿ ತಣ್ಣಗೆ ಕಟ್ಟಿಕೊಡುತ್ತದೆ. ಈ ಕಾದಂಬರಿಯ ವಸ್ತು ಮತ್ತು ಪಾತ್ರಗಳು ಕನ್ನಡಕ್ಕೆ ತೀರಾ ಹೊಸದು. ಕಾನೂನು ತೊಡಕುಗಳು, ಸಂಪ್ರದಾಯಸ್ಥರ ಆಕ್ರಮಣ, ಮಡಿವಂತಿಕೆ ನಿಷೇಧ ಭಯ ಇತ್ಯಾದಿ ಕಾರಣಗಳಿಂದಾಗಿ LGBTQ ಕಥನಗಳು ಸಾಹಿತ್ಯದ ಮುಖ್ಯ ಧಾರೆಗೆ ಬರಲೇ ಇಲ್ಲ. ಸುಶಾಂತ್ ಕೋಟ್ಯಾನ್, ತುಂಬ ಧೈರ್ಯವಹಿಸಿ ಈ ಕಾದಂಬರಿಯನ್ನು ಬರೆದು ನಮ್ಮ ಅರಿವಿನ ಗಡಿರೇಖೆಗಳನ್ನು ವಿಸ್ತರಿಸಿದ್ದಾರೆ.
Share
Subscribe to our emails
Subscribe to our mailing list for insider news, product launches, and more.