Gururaj S. Davanagere
ಡೇಟಾ ದೇವರು ಬಂದಾಯ್ತು!
ಡೇಟಾ ದೇವರು ಬಂದಾಯ್ತು!
Publisher - ಭೂಮಿ ಬುಕ್ಸ್
Regular price
Rs. 150.00
Regular price
Rs. 150.00
Sale price
Rs. 150.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಕಾನಿನಿಂದ ಬಾನಿನವರೆಗೆ ಎಲ್ಲೆಲ್ಲೂ ಡೇಟಾದೇವ......
ಭಕ್ತ ಪ್ರಹ್ಲಾದನ ಎದುರು ಹಿರಣ್ಯಕಶಿಪುವಿನ ಗರ್ಜನೆಯನ್ನು ನೆನಪಿಸಿಕೊಳ್ಳಿ, “ದೇವರು ಎಲ್ಲಿದ್ದಾನೆ? ನೀರಿನಲ್ಲಿ? ಗಾಳಿಯಲ್ಲಿ? ನಿನ್ನಲ್ಲಿ? ನನ್ನಲ್ಲಿ? ಈ ಕಂಬದಲ್ಲಿ?" ಈ ಯುಗದ ಡೇಟಾ ದೇವರ ಬಗೆಗೂ ಅಂಥದೇ ಪ್ರಶ್ನೆಗಳನ್ನು ನೀವು ಮಕ್ಕಳಿಗೆ ಕೇಳಿ ನೋಡಿ: “ಹಾರುವ ಡ್ರೋನಲ್ಲಿ? ಪೇಸ್ ಮೇಕರಲ್ಲಿ? ವಾಷಿಂಗ್ ಮಷಿನ್ನಲ್ಲಿ? ಎಟಿಎಮ್ಮಲ್ಲಿ? ಸಿಸಿ ಕ್ಯಾಮೆರವನ್ನು ಸಿಕ್ಕಿಸಿದ ಆ ಕಂಬದಲ್ಲಿ?"
ಪುಟ್ಟ ಪ್ರಹ್ಲಾದನ ಉತ್ತರವೇ ಈಗಿನಎಲ್ಲ ಮಕ್ಕಳದ್ದೂ ಆಗಿರುತ್ತದೆ. ಹೌದು, ಹೌದು, ಹೌದು.ಡೇಟಾ ದೇವರು ಅಲ್ಲೆಲ್ಲ ಬಂದಾಗಿದೆ.
ಇಂದಿನ ಟೆಕ್ನಾಲಜಿಯ ಅಂಥ ಹತ್ತಾರು ಮುಖಗಳನ್ನು ನಾವು ಈ ಪುಸ್ತಕದಲ್ಲಿ ಕಾಣುತ್ತೇವೆ. ನಾಳಿನ ಪೀಳಿಗೆಯನ್ನು ರೂಪಿಸುವ ಶಿಕ್ಷಕರಿಗೆ, ಇಂದಿನ ವಿದ್ಯಾರ್ಥಿಗಳಿಗೆ, ಅವರ ಪಾಲಕರಿಗೆ ಹಾಗೂ ಒಟ್ಟಾರೆ ಕನ್ನಡ ಓದುಗರಿಗೆ ಈಚೀಚಿನ ತಂತ್ರಜ್ಞಾನ ಲೋಕದ ಆಗುಹೋಗುಗಳ ಸ್ಥೂಲ ನೋಟ ಇಲ್ಲಿದೆ.
ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್, ಅಲ್ಗೊರಿದಮ್, ಬಿಗ್ ಡೇಟಾ, ರೊಬೊಟಿಕ್ಸ್‌ನಿಂದ ಹಿಡಿದು, ಬಾಹ್ಯಾಕಾಶ ತಂತ್ರಜ್ಞಾನದವರೆಗೆ ಎಲ್ಲೆಲ್ಲಿ ಏನೇನಾಗುತ್ತಿದೆ ಎಂಬುದನ್ನು ಅರಿಯಬಯಸುವವರಿಗೆ ಇದೊಂದು ಕೈಮರ ಆಗುವಂತಿದೆ.
ಲೇಟೆಸ್ಟ್ ಟೆಕ್ನಾಲಜಿ ಬಗ್ಗೆ ಎಲ್ಲರಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಸೊಗಸಾಗಿ ಬರೆಯುವ ಗಣಿತ ಅಧ್ಯಾಪಕ ಗುರುರಾಜ್ ಎಸ್. ದಾವಣಗೆರೆಯವರು ಬೆಂಗಳೂರಿನ ಪೂರ್ಣಪ್ರಜ್ಞ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದು, ನಾಳಿನ ಜಗತ್ತನ್ನು ರೂಪಿಸಹೊರಟ ಯುವಜನಾಂಗದ ಜೊತೆ ದಿನವೂ ಮುಖಾಮುಖಿ ಆಗುತ್ತಿದ್ದಾರೆ.
ಜಗತ್ತನ್ನೇ ಮುಷ್ಟಿಯಲ್ಲಿ ಹಿಡಿದು ಅತಿಮಾನವರಾಗಲು ಹೊರಟವರು ಮುಂದೆ ತಾವೇ ಸ್ವತಃ ಡೇಟಾ ದೇವರ ಮುಷ್ಟಿಯಲ್ಲಿ ಸಿಲುಕಿದರೆ?
ಹಾಗಾಗದಿರಲೆಂದು ಆಶಿಸುವ ಎಲ್ಲರ ಕೈಯಲ್ಲಿರಬೇಕಾದ ಕೃತಿ ಇದು.
-ನಾಗೇಶ ಹೆಗಡೆ

Share
Subscribe to our emails
Subscribe to our mailing list for insider news, product launches, and more.