Ravi Belagere
ದಂಗೆಯ ದಿನಗಳು
ದಂಗೆಯ ದಿನಗಳು
Publisher - ಭಾವನಾ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 298
Type - Paperback
ಕಳೆದ ಕೆಲವು ದಶಕಗಳಿಂದ ಜೋಯಿಡಾದ ಕಾಡಿನ ಮಧ್ಯೆ ಒಂದು ಬಂಗಲೆ ಕಟ್ಟಿಕೊಂಡು ಬದುಕುತ್ತಿರುವವರು ಮನೋಹರ ಮಳಗಾಂವಕರ್, ಅವರಿಗೀಗ ತೊಂಬತ್ತೈದು ವರ್ಷ. ಅವರು ನಿವೃತ್ತ ಸೈನ್ಯಾಧಿಕಾರಿ. ಹಾಗೆ ಕಾಡಿನ ಮಧ್ಯೆ ಮನೆ ಕಟ್ಟಿಕೊಂಡು ಒಬ್ಬಂಟಿಯಾಗಿ ಕುಳಿತು ಅಧ್ಯಯನ ಮಾಡುತ್ತ, ಇತಿಹಾಸದ ಬಗ್ಗೆ ಧೇನಿಸುತ್ತಾ, ಬರೆಯುತ್ತ ಬದುಕುವುದು ಎಷ್ಟು ಚೆಂದ! ನನ್ನಲ್ಲಿ ಅಂಥದೊಂದು ಮೋಹ ಹುಟ್ಟಿಸಿದವರೇ ಮಳಗಾಂವಕರ್. ಅವರು ಎಂಥ ಒಳ್ಳೆಯ ಬರಹಗಾರ ಎಂಬುದು, ಈ ಪುಸ್ತಕ ಓದಲಾರಂಭಿಸುತ್ತಿದ್ದಂತೆಯೇ ನಿಮಗೆ ಗೊತ್ತಾಗುತ್ತದೆ. ಮನುಷ್ಯನ ನಿಸ್ಸಹಾಯಕತೆ, ಪ್ರತಿಭಟನೆ, ಆಸೆ, ಕಾಮ, ನಿಷ್ಠೆ, ಕ್ರೌರ್ಯ, ಮೋಸ, ಸಣ್ಣತನ, ಔದಾರ್ಯ ಹೀಗೆ ಎಲ್ಲ ಮುಖಗಳನ್ನೂ ಒಂದು ರಟ್ಟಿನಡಿ ಚಿತ್ರಿಸಿಕೊಟ್ಟದ್ದೇ ಆದರೆ, ಅದರ ಹೆಸರು
'ದಂಗೆಯ ದಿನಗಳು'
ಸಿಪಾಯಿ ದಂಗೆಯೆಂದೂ, ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದೂ ಕರೆಯಲ್ಪಟ್ಟ 1857ರ ದಂಗೆಯ ಅಪರೂಪದ ವಿವರಗಳನ್ನು ನಿಮಗಾಗಿ ಕನ್ನಡಕ್ಕೆ ತರ್ಜುಮೆ ಮಾಡಿಕೊಟ್ಟಿದ್ದೇನೆ. ಒಪ್ಪಿಸಿಕೊಳ್ಳಬೇಕು.
ರವಿ ಬೆಳಗೆರೆ
Share
Subscribe to our emails
Subscribe to our mailing list for insider news, product launches, and more.