Skip to product information
1 of 2

Beluru Ramamurthy

ದಡ ಸೇರದ ದೋಣಿಗಳು

ದಡ ಸೇರದ ದೋಣಿಗಳು

Publisher - ವೀರಲೋಕ ಬುಕ್ಸ್

Regular price Rs. 275.00
Regular price Rs. 275.00 Sale price Rs. 275.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 236

Type - Paperback

ಕಥೆ ಅಂದರೆ ಕಟ್ಟು ಕಥೆಯಲ್ಲ, ಒಂದು ಅಳತೆಗೆ ಕಟ್ಟಿದ ಕಥೆ, ಸಹಜವಾಗಿ ಹೆಣೆದಾಗ ಅದು ಕಣ್ಣಿಗೆ ಕಟ್ಟುವಂಥಾ ಕಥೆಯಾಗುತ್ತದೆ. ಕಥೆಗಳ ಸ್ವರೂಪವೇ ಹಾಗಿರಬೇಕು. ಓದುತ್ತಾ ಇದ್ದ ಹಾಗೆ ಕಥೆಯ ಪಾತ್ರಗಳು ಕಣ್ಣು ಮುಂದೆ ಬಂದು ನಿಲ್ಲಬೇಕು. ಪಾತ್ರಗಳು ಆಡುವ ಮಾತುಗಳು ಯಾವುದೂ ನಾಟಕೀಯವಾಗಿರಬಾರದು. ಇಂಥಾ ಸಂದರ್ಭಗಳಲ್ಲಿ ನಾವು ಮಾತಾಡಿದರೂ ಹಾಗೇ ಮಾತಾಡುತ್ತೀವಿ ಎನ್ನುವಂತಿರಬೇಕು. ಇನ್ನು ಕಥೆಯಲ್ಲಿ ಬರುವ ಘಟನೆಗಳೂ ನೈಜತೆಗೆ ದೂರವಾಗಿರಬಾರದು. ಹೌದು ಇದು ಎಲ್ಲರ ಬದುಕಲ್ಲೂ ನಡೆಯುವಂಥದು, ಎಲ್ಲ ಪಾತ್ರಗಳೂ ಹೀಗೇ ನಡೆದುಕೊಳ್ಳುವಂಥವು ಎನಿಸಬೇಕು. ಆಗ ಮಾತ್ರ ಕಥೆ ಬರೆದವನಿಗೂ ಕಥೆ ಓದುವವನಿಗೂ ಒಂದು ಸಹೃದಯ ಸಂಪರ್ಕ ಬರುತ್ತದೆ. ಅಲ್ಲಿಗೆ ಕಥೆಯೂ ಗೆಲ್ಲುತ್ತದೆ, ಕಥೆಗಾರನೂ ಗೆಲ್ಲುತ್ತಾನೆ.

ಪ್ರಸ್ತುತ ನಿಮ್ಮ ಕೈಯಲ್ಲಿರುವ ದಡ ಸೇರದ ದೋಣಿಗಳು ಕಥೆಯಲ್ಲಿ ಇರುವ ಎಲ್ಲಾ ಇಪ್ಪತ್ತೈದು ಕಥೆಗಳ ಸ್ವರೂಪವೂ ಹೀಗೇ ಇದೆ. ಈ ಎಲ್ಲಾ ಕಥೆಗಳನ್ನು ಓದುವಾಗ ಲೇಖಕರ ಸುಮಾರು 50 ವರ್ಷಕ್ಕೂ ಹೆಚ್ಚಿನ ಸಾಹಿತ್ಯ ವ್ಯವಸಾಯದ ಅನುಭವದ ಸಾರ ಓದುಗರಿಗೆ ಅರಿವಾಗುತ್ತದೆ. ಪಾತ್ರಗಳು ಯಾವುದೂ ಸೃಷ್ಟಿಯಾಗಿಲ್ಲ, ಬದಲಿಗೆ ಅವುಗಳೇ ಬಂದು ಬೆಸೆದುಕೊಂಡಿವೆ. ಸೃಷ್ಟಿಕರ್ತ ಬ್ರಹ್ಮ ಒಬ್ಬನೇ ಆದರೂ ಅವನು ಸೃಷ್ಟಿಸಿರುವ ಪಾತ್ರಗಳೂ, ಅವುಗಳ ಸ್ವಭಾವಗಳೂ, ಮಾತುಗಳೂ, ನಡವಳಿಕೆಗಳೂ ಹೇಗೆ ಬೇರೆಬೇರೆ ಯಾಗಿರುವುವೋ ಹಾಗೆ ಕಥೆಗಾರ ಒಬ್ಬನೇ ಆದರೂ ಅವನು ತನ್ನ ಕಥೆಯಲ್ಲಿ ಸೃಷ್ಟಿಸಿರುವ ಪಾತ್ರಗಳು ಅವನ ಮೂಗಿನ ನೇರಕ್ಕೆ ನಡೆದುಕೊಂಡರೂ, ಮಾತಾಡಿದರೂ ಎಲ್ಲವೂ ಸಹಜವಾಗಿರುತ್ತವೆ. ಯಾವುದೂ ನಾಟಕೀಯ ಎನಿಸುವುದಿಲ್ಲ, ಬಲವಂತ ಎನಿಸುವುದಿಲ್ಲ.

ಒಟ್ಟಿನಲ್ಲಿ ಕಥೆ ಅಂದರೆ ಅದು ಬರೀ ಕಥೆಯಲ್ಲ, ಅದು ನಮ್ಮ ಬದುಕಿನ ಅನೇಕ ಘಟನೆಗಳಿಗೆ ಹಿಡಿದ ಕನ್ನಡಿ ಎನ್ನುವಂತೆ ಈ ಸಂಗ್ರಹದ ಕಥೆಗಳೆಲ್ಲಾ ನಿಮ್ಮನ್ನು ಸೆರೆಹಿಡಿದು ಓದಿಸಿ ಕೊಳ್ಳುವುದರಲ್ಲಿ ಅನುಮಾನವಿಲ್ಲ. ನಿಮಗೆ ಈ ಎಲ್ಲಾ ಕಥೆಗಳ ಓದಿನ ಸುಖ ದೊರೆಯಲಿ.

-ಬೇಲೂರು ರಾಮಮೂರ್ತಿ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)