Skip to product information
1 of 2

Dr. Virupaksha Devaramane

ಕ್ರಾಸ್ ರೋಡ್ಸ್

ಕ್ರಾಸ್ ರೋಡ್ಸ್

Publisher - ನವಕರ್ನಾಟಕ ಪ್ರಕಾಶನ

Regular price Rs. 170.00
Regular price Rs. 170.00 Sale price Rs. 170.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 170

Type - Paperback

ನಾವೆಲ್ಲ ಬದುಕಿನ ಕ್ಲಾಸ್‌ ರೋಡ್ಸ್ ದಾಟಿ ಬಂದವರೆ, ಯೌವನದ ಕನಸುಗಳ ಬೆನ್ನು ಹತ್ತಿದವರಿಗೆ ಹೆತ್ತವರ ಸಹಕಾರ, ಗುರು ಹಿರಿಯರ ಮಾರ್ಗದರ್ಶನ ಒಂದುಗೂಡಿದಲ್ಲಿ ಹರೆಯ ಬಾಳಿನ ವಸಂತ ಇಲ್ಲವಾದಲ್ಲಿ, ಬದುಕಿನ ವೈಶಾಖ ಆರಂಭವಾಗಬಹುದು. ಹರೆಯದಲ್ಲಿ ಬಹಳಷ್ಟು ಜನರಿಗೆ ಕೋರ್ಸು, ಕಾಲೇಜು, ಸ್ನೇಹಿತರು, ವೃತ್ತಿ, ಸಂಗಾತಿಯ ಆಯ್ಕೆಗಳಲ್ಲಿನ ಗೊಂದಲ ಸಹಜವಾದದ್ದೆ. ಆದರೆ ಹೆತ್ತವರಿಗೂ ಮಕ್ಕಳಿಗೂ ಇಂತಹ ವಿಷಯಗಳಲ್ಲಿ ಅಭಿಪ್ರಾಯ ಭೇದಗಳು ಹೆಚ್ಚಿದಷ್ಟೂ ಕಿಶೋರದ ಕವಲುಹಾದಿಯ ಪಯಣ ಅಸಹನೀಯವೆನಿಸುತ್ತದೆ.

ಹರೆಯ ತರುವ ಶಾರೀರಿಕ ಮಾನಸಿಕ ಬದಲಾವಣೆಗಳು, ಶೈಕ್ಷಣಿಕ, ವೃತ್ತಿಯಲ್ಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಹಿರಿಯರ ಸಹಕಾರ ಅತ್ಯಗತ್ಯ. ಉಡಲು-ತೊಡಲು ಯಾವ ಕೊರತೆಯಿಲ್ಲದಿರಬಹುದು. ಆದರೆ ಹದಿಹರೆಯದಲ್ಲಿ 'ಹೆದರದಿರು ನಾನಿದ್ದೇನೆ' ಎನ್ನುವ ಭರವಸೆಯ ಮಾತುಗಳು, 'ನೀನೆಂದರೆ ನನಗೆ ಹೆಮ್ಮೆ' ಎನ್ನುವ ಅತ್ಯಾನುಭೂತಿ ಹೆಚ್ಚಿಸುವ ಮಾತುಗಳ ಕೊರತೆ ಅವರನ್ನು ಕಾಡಬಹುದು, ಆತಂಕ, ಖಿನ್ನತೆ, ಕೀಳರಿಮೆ, ಒಂಟಿತನ, ಐಡೆಂಡಿಟಿ ಕ್ರೈಸಿಸ್, ಒಂದೆಡೆಯಾದರೆ ಲೈಂಗಿಕತೆಯ ಕುರಿತಾದ ಪ್ರಶ್ನೆಗಳು, ಅತಿಯಾದ ಇಂಟರ್‌ನೆಟ್‌ ಬಳಕೆ, ಮದ್ಯ-ಮಾದಕ ವ್ಯಸನಗಳ ಕುರಿತಾದ ಕುತೂಹಲ ಹರೆಯದ ಮಕ್ಕಳನ್ನು ಕಾಡಬಹುದು. ಬದುಕಿನ ಕ್ರಾಸ್‌ ರೋಡ್‌ನಲ್ಲಿರುವ ಮಕ್ಕಳ ಬೆನ್ನುತಟ್ಟಿ, ಕೈ ಹಿಡಿದು ರಸ್ತೆ ದಾಟಿಸಿ, ನೆಮ್ಮದಿಯಾಗಿ ಟಾಟಾ ಮಾಡಿ ಕಳುಹಿಸಿದ್ದೇ ಆದಲ್ಲಿ ಅವರು ಬದುಕಿನಲ್ಲಿ ಗೆಲ್ಲುವುದರಲ್ಲಿ ಸಂಶಯವಿಲ್ಲ.

ಟೀನೇಜ್‌ನಲ್ಲಾಗುವ ಸಹಜ ಬದಲಾವಣೆಗಳು ಹಾಗೂ ಮೆದುಳಿನ ಕಾರ್ಯ ವೈಖರಿಯ ಕುರಿತು ಹೆತ್ತವರಿಗೆ ಅವಶ್ಯಕ ಮಾಹಿತಿ ನೀಡಿ, ನಾಡಿನ ಪ್ರತೀ ಮನೆಯ ಮಗು ಕಿಶೋರದ ಕವಲು ಹಾದಿಯನ್ನು ಸುಗಮವಾಗಿ ದಾಟಲಿ ಎನ್ನುವ ಹಾರೈಕೆ ಈ ಪುಸ್ತಕದ್ದು.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)