Yashaswini S. N.
ಚಿಣ್ಣರ ಗೋಲಿ ಆಟ
ಚಿಣ್ಣರ ಗೋಲಿ ಆಟ
ಪ್ರಕಾಶಕರು - ಹರಿವು ಬುಕ್ಸ್
- Free Shipping Above ₹200
- Cash on Delivery (COD) Available
Pages - 16
Type - Paperback
ಮೂಲತಃ ದಾವಣಗೆರೆ ಜಿಲ್ಲೆಯವರಾದ ಯಶಸ್ವಿನಿ ಎಸ್ ಎನ್ ಈಗ ಬೆಂಗಳೂರಿನ ನಿವಾಸಿ. ಮೈಸೂರು ವಿಶ್ವವಿದ್ಯಾಲಯದ ಬಿ ಎ ಜರ್ನಲಿಸಂ ಪದವೀಧರೆಯಾದ ಇವರು ಮೈಸೂರಿನಲ್ಲಿ ಒಂದು ವರ್ಷ 'ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ರಿಪೋರ್ಟರ್ ಆಗಿ ಹಾಗೂ ಟಿಸಿಎಸ್ ನಲ್ಲಿ ಬಿಸಿನೆಸ್ ಪ್ರಪೋಸಲ್ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಮಗಳ “ಅಮ್ಮ, ಹೊಸ ಕತೆ” ಎಂಬ ಬೇಡಿಕೆಗೆ ‘ಚಿನ್ನಿಯ ರಜಾಯಿ’ ಹಾಗೂ ‘ಅಳಿಲು ಸೇವೆ’ ಎಂಬ ಎರಡು ಮುದ್ದಾದ ಮಕ್ಕಳ ಪುಸ್ತಕಗಳನ್ನು ಬರೆದ ಇವರು ಈಗ ಬಾಲ್ಯದ ದಿನಗಳಲ್ಲಿ ಎಲ್ಲರೂ ಆಡಿದ ಆಟವಾದ ಗೋಲಿ ಕುರಿತಾಗಿ ಬರೆದ ಮಕ್ಕಳ ಕತೆಯೇ ‘ಚಿಣ್ಣರ ಗೋಲಿ ಆಟ’. ಈ ಚಂದದ ಚಿಣ್ಣರ ಪುಸ್ತಕದ ಪ್ರತೀ ಪುಟದಲ್ಲೂ ಲಿಪ್ತಿ ರಾವ್ ಅವರು ಬಿಡಿಸಿದ ಬಣ್ಣಬಣ್ಣದ ಚಿತ್ರಗಳು ಮಕ್ಕಳನ್ನು ಮೋಡಿ ಮಾಡುವುದರಲ್ಲಿ ಎರಡು ಮಾತಿಲ್ಲ.
ಈಗಿನ ನಮ್ಮ ಮಾಡ್ರನೈಜ್ಡ್ ಮತ್ತು ಹೈಫೈ ಲೈಫ್ನಲ್ಲಿ ನಮ್ಮ ಮಕ್ಕಳಿಗೂ ಸಹ ಮಾಡ್ರನೈಜ್ಡ್ ಆಟಗಳನ್ನು ಇಂಟ್ರ್ ಡ್ಯುಜ್ ಮಾಡಿದ್ದೇವೇ ಯಶಸ್ವಿನಿಯವರ ಚಿಣ್ಣರ ಗೋಲಿ ಆಟ ಪುಸ್ತಕವೂ Back to roots ಅನೋದನ್ನ ನೆನಪಿಸುತ್ತದೆ. Publisher Sir/Madam ಬುಕ್ ಓದಿ ಮಕ್ಕಳು ಗೋಲಿಯನ್ನು ಕೇಳುತ್ತಿದ್ದಾರೆ ಪ್ಲೀಸ್ ಗೋಲಿಗಳನ್ನು ಕಳಿಸಿಕೊಡಿ😀
ಪುಸ್ತಕವು "ಗೋಲಿ" ಎಂಬ ಭಾರತೀಯ ಆಟದ ಬಗ್ಗೆ ಇದೆ. ಇತ್ತೀಚಿನ ದಿನಗಳಲ್ಲಿ ಇದನ್ನು ಅಪರೂಪವಾಗಿ ಆಡಲಾಗುತ್ತದೆ. ಈ ಪುಸ್ತಕವು ಗೋಲಿ ಆಟವನ್ನು ಪರಿಚಯಿಸಿದೆ ಮತ್ತು ಕತೆ ಓದಿದ ನಂತರ ಗೋಲಿ ಆಟವನ್ನು ಆಡಬೇಕೆಂಬ ಮನಸ್ಸಾಗುತ್ತದೆ. ಲಿಪ್ತಿ ರಾವ್ ಅವರ ಚಿತ್ರಗಳು ಬಣ್ಣದಿಂದ ಕೂಡಿದ್ದು ತುಂಬಾ ಆಕರ್ಷಕವಾಗಿದೆ.
ವೈಭವ್ ಸತೀಶ್
7 ನೇ ತರಗತಿ
ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್
ಬೆಂಗಳೂರು
Very good book about the lost game and also entertaining for kids.
Subscribe to our emails
Subscribe to our mailing list for insider news, product launches, and more.