Shreedhara Gasti
ಚಂದ್ರ ಲೇಔಟ್
ಚಂದ್ರ ಲೇಔಟ್
Publisher - ವೀರಲೋಕ ಬುಕ್ಸ್
- Free Shipping Above ₹250
- Cash on Delivery (COD) Available
Pages - 108
Type - Paperback
ಗ್ರಾಮೀಣ ಪ್ರದೇಶಗಳೂ ಸೇರಿದಂತೆ ಹಲವೆಡೆ ಇರುವ ಶೋಷಣೆ, ಮೂಢನಂಬಿಕೆ ಮತ್ತು ಜಾತೀಯತೆ, ಕೌಟುಂಬಿಕ ಸಂಘರ್ಷಗಳು, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಭ್ರಷ್ಟ ವ್ಯವಸ್ಥೆಯ ಚಿತ್ರಣಗಳ ಕಥೆಗಳು ಪ್ರಸ್ತುತ ಸಂದರ್ಭಗಳಿಗೆ ಹಿಡಿದ ಕೈಗನ್ನಡಿಯಾಗಿವೆ. ಬೆಳಗಾವಿ, ಧಾರವಾಡ ಪ್ರದೇಶದ ಭಾಷೆಯನ್ನು ಬಳಸುವ ಶ್ರೀಧರ ಗಸ್ತಿಯವರು ತಮ್ಮ ದಟ್ಟ ಗ್ರಾಮೀಣ ಅನುಭವಗಳನ್ನು ಅಭಿವ್ಯಕ್ತಿಗೆ ಹೊಂದಿಸುವ ಪ್ರಯತ್ನದಲ್ಲಿ ಅವರು ಇನ್ನಷ್ಟು ಮಹಾತ್ವಾಕಾಂಕ್ಷೆ ಹೊಂದಬೇಕೆಂದು ನಾನು ಅವರಲ್ಲಿ ಕೇಳಿಕೊಳ್ಳುತ್ತೇನೆ. ಕತೆಗಳನ್ನು ನಿರ್ವಹಿಸಬೇಕಾದ ತಂತ್ರಗಾರಿಕೆಯನ್ನು ಭಾಷೆಗೆ ಜೀವಂತಿಕೆ ತರುವ ನಾವಿನ್ಯತೆಯನ್ನೂ ಅವರು ಇನ್ನಷ್ಟು ವಿಸ್ತರಿಸಿಕೊಂಡಾಗ ಕತೆಗಳಿಗೆ ಹಲವು ಮುಖಗಳು ದಕ್ಕುತ್ತವೆ. ಅಂತಹ ಕಲಿಕೆಯನ್ನು ಎಲ್ಲ ಹೊಸ ಲೇಖಕರು ತಪ್ಪದೇ ಮಾಡಬೇಕಾಗುತ್ತದೆ. ತಮ್ಮ ಪ್ರಥಮ ಕಥಾಸಂಕಲನಕ್ಕೆ ನನ್ನ ಒಂದೆರಡು ಮಾತುಗಳು ಇರಲೆಂದು ಅವರು ಬಯಸಿದ್ದಕ್ಕೆ ನನ್ನ ಪ್ರೀತಿಯನ್ನು ತಿಳಿಸುತ್ತ, 'ಚಂದ್ರಾ ಲೇಔಟ್' ಎನ್ನುವ ಈ ಕಥಾಬಡಾವಣೆಯಲ್ಲಿ ಓದುಗರು ಅಡ್ಡಾಡಲಿ ಎಂದು ಹಾರೈಸುತ್ತೇನೆ. ಪ್ರತಿಯೊಬ್ಬ ಲೇಖಕರಿಗೆ ತಮ್ಮ ಹೊಸ ಕೃತಿಯೊಂದು ಬರುವುದು ತುಂಬ ಖುಷಿಯ ಸಂಗತಿ. ಅಂತಹ ಖುಷಿ, ಸಂತೋಷದಲ್ಲಿರುವ ಶ್ರೀಧರ ಗಸ್ತಿ ಅವರಿಗೆ ನನ್ನ ಅಭಿನಂದನೆಗಳು ಸಲ್ಲುತ್ತವೆ.
-ಡಾ. ಬಸು ಬೇವಿನಗಿಡದ
Share
Subscribe to our emails
Subscribe to our mailing list for insider news, product launches, and more.