Skip to product information
1 of 1

Chandrashekara Kambara

ಚಾಂದಬೀ ಸರಕಾರ

ಚಾಂದಬೀ ಸರಕಾರ

Publisher - ಅಂಕಿತ ಪುಸ್ತಕ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 124

Type - Paperback

ಡಾ. ಚಂದ್ರಶೇಖರ ಕಂಬಾರರು ನಂಬಿಕೆಯಲ್ಲಿ ಆಸ್ತಿಕರು. ಕೊನೆಗೂ ಈ ಲೋಕದಲ್ಲಿ ಕೇಡಿನ, ದುಷ್ಟಶಕ್ತಿಗಳ ವಿರುದ್ಧ ಸಾತ್ವಿಕ ಶಕ್ತಿ ಗೆಲ್ಲುತ್ತದೆ ಎಂಬುದು ಅವರ ಪೂರ್ಣ ವಿಶ್ವಾಸ, ಆದರೆ, ಈ ವಿಶ್ವಾಸ ಆಧುನಿಕ ಬದುಕಿನ ಸಂಕೀರ್ಣ ಅನುಭವ.. ಕಡುಕಿನ ಅಪರಿಮಿತ ಸಾಧ್ಯತೆಗಳಿಗೆ ಕುರುಡಾಗುವುದಿಲ್ಲ. ಸಾತ್ವಿಕ ಶಕ್ತಿಗಳ ಕೊನೆಯ ವಿಜಯದ ಮೆಟ್ಟಿಲೇರುವ ಮೊದಲು ಅನುಭವಿಸಬೇಕಾದ ಸೋಲುಗಳನ್ನು ಕಡೆಗಣಿಸುವುದಿಲ್ಲ. ಚರಿತ್ರೆ ಮತ್ತು ವರ್ತಮಾನದ ಮೌಲ್ಯಗಳ ಪರಸ್ಪರ ಸಂಘರ್ಷವನ್ನು ನಿರೂಪಿಸಲು ಡಾ. ಕಂಬಾರರು ಚಾಂದಲೀ ಸರಕಾರದ ಕಥೆಯಾಗಿ, ಮುಖ್ಯಮಂತ್ರಿಗಳಾಗಿದ್ದಾಗ ದೇವರಾಜ ಅರಸು ಅವರು ಭೂ ಮಸೂದೆ ಕಾಯಿದೆಯನ್ನು ಜಾರಿಗೆ ತಂದಾಗ ಉಂಟಾದ ಸಾಮಾಜಿಕ ಸ್ಥಿತ್ಯಂತರವನ್ನು ಬಳಸುತ್ತಾರೆ. ಬಲದೇವ ನಾಯಕ ಆ ತನಕ ಬೆಳೆದು ಬಂದ ಜಮೀನ್ದಾರಿ ಪದ್ಧತಿಯ ಕೊನೆಯ ಕೊಂಡಿ. ಪ್ರೇಯಸಿಯಂತೆ ಆತನ ಮನಗೆದ್ದು ಪತ್ನಿಯಾದವಳು ಚಾಂದಬೀ 'ಚಾಂದವಿ ಸರಕಾರ' ಕಾದಂಬರಿ, ಸಮಕಾಲೀನತೆಯ ಸವಾಲುಗಳನ್ನು ಬದಲಾಗುವ ಚರಿತ್ರೆಯ ಸಂಕ್ರಮಣ ಸ್ಥಿತಿಯಲ್ಲಿ ಶೋಧಿಸುತ್ತದೆ. ಭೂ ಮಸೂದೆಯ ಕಾಲದ ಅನುಭವದ ಬಗೆಗಿನ ಅಪರೂಪವಾದೊಂದು ಕಥಾನಕವಿದು.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)