Translated By Gangadharayya
ಬುನಿನ್ ಕಥೆಗಳು
ಬುನಿನ್ ಕಥೆಗಳು
Publisher -
Regular price
Rs. 200.00
Regular price
Rs. 200.00
Sale price
Rs. 200.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಇವಾನ್ ಬುನಿನ್ ರಷ್ಯಾಕ್ಕೆ ಸಾಹಿತ್ಯಕ್ಕಾಗಿ ಮೊದಲ ನೊಬೆಲ್ ಬಹುಮಾನವನ್ನು ತಂದು ಕೊಟ್ಟವನು.
ತನ್ನ ವಿಶಿಷ್ಟವಾದ ಗ್ರಹಿಕ ಮತ್ತು ಗದ್ಯದ ದ್ರವ್ಯ ಅದರ ನಾವಿನ್ಯತೆ ಮತ್ತು ವೈಶಿಷ್ಟ್ಯತೆಗಲಿಂದಾಗಿ ಬುನಿನ್ ಅವನ ಸಮಕಾಲೀನ ಲೇಖಕರ ನಡುವೆ ಅಕ್ಷರ ಲೋಕದಲ್ಲಿ ತನ್ನದೇ ದಾರಿ ತುಳಿದವನು. ಕಾವ್ಯಾತ್ಮಕ ನಿರೂಪಣೆ ಹಾಗೂ ಅದರೊಳಗೆ ಅನಾವರಣಗೊಳ್ಳುತ್ತಾ ಹೋಗುವ ಥರಾವರಿ ಪರಿಮಳಗಳು, ಬಣ್ಣಗಳು ಹಾಗೂ ಸದ್ದುಗಳು, ಕಾಡುಮೇಡು ಮತ್ತು ಅಣ್ಣನ ಗಿಡಮರ, ಪ್ರಾಣಿಪಕ್ಷಿ, ಹಳ್ಳಕೊಳ್ಳ, ಅಲ್ಲಿನ ಮಳೆ, ಸುಲಿಯುವ ಹಿಮ, ಬೀಸುವ ಚಳಿಗಾಲಿ, ಮೂಡುವ ಮತ್ತು ಮುಳುಗುವ ಸೂರ್ಯ ಚಂದ್ರ. ಬೆಳೆದ ಬೆಳೆಗಳು, ತೂಗುವ ತೆನೆಗಳು, ಕಣಗಾಲದ ಬದುಕು, ಬೇಟೆಗಾರನ ಸುತ್ತಾಟಗಳು, ಆ ಹೊತ್ತಿನ ರೋಮಾಂಚನಗಳು, ಹೀಗೆ ಅವನು ಕಂಡದ್ದನ್ನು ಅಥವಾ ಚಿತ್ರಿಸಿದ್ದನ್ನೆಲ್ಲಾ ಸೀದಾ ಓದುಗನ ಎದೆಯೊಳಗೇ ನಡೆದುಕೊಡುವಂತೆ, ನೇರವಾಗಿ ಕಣ್ಣಿಗೆ ಕಟ್ಟುವಂತೆ, ಓದುಗನೊಳಗೆ ಅನುರಣಿಸುವಂತೆ ಮಾಡುವ ಅದರೊಳಗೆ ಮುಳುಗಿ ಹೋದಂಥ ಅನುಭವವನ್ನು ನೀಡಬಲ್ಲ ಸರಿಸಾಟಿಯಿಲ್ಲದಂಥ ನಿರೂಪಣಾ ತಂತ್ರ ಇಂದ್ರಿಯ ವರ್ಣನಾತ್ಮಕತೆ ಬುನಿನ್ದು.ಇಂಥ ಇಂದ್ರಿಯ ಜನ್ಯ ವರ್ಣನಾತ್ಮಕತೆ ಶೈಲಿಗೆ ಕಾವ್ಯಾತ್ಮಕ ಸಾಂದ್ರತೆಯನ್ನು ತಂದುಕೊಟ್ಟದೆ. ಇಲ್ಲಿನ ಕಥೆಗಳೂ ಬುನಿನ್ನನ ಅಂಥ ಮಾಂತ್ರಿಕ ಸ್ಪರ್ಶದಿಂದ ಮಿಂದೆದ್ದಿವೆ.
ಇಲ್ಲಿರುವುದು ಮಣ್ಣಿನ ಕಣ್ಣಿನ ನೋಟ, ಅದಮ್ಯ ತಾಯ್ತನದ ಹಂಬಲ, ಇಲ್ಲ ಪ್ರೀತಿಯ ಮಿಂಚುಗಳಿವೆ. ವಿರಹದ ಕಾರ್ಮೋಡಗಳವೆ, ತೋರಿಕೆಯ ಡೌಲುಗಳವೆ. ಅಂಥದ್ದರ ಬಗ್ಗೆ ವಿಷಾದಗಳಿವೆ, ಇವುಗಳೊಂದಿಗೆ ನೆನಪಿನಂಚಿಗೆ ಜಾರಿ ಹೋಗುತ್ತಿದ್ದ ಕಾಲಘಟ್ಟವೊಂದು ಮತ್ತೆ ಮರುಸೃಷ್ಟಿಗೊಂಡು ಅದು ವಾಸ್ತವದಲ್ಲಿ ಅರಳುವ ಪರಿಯಲ್ಲಿರುವ ಸೊಗಸಿನಿಂದಾಗಿ ಈ ಕಥೆಗಳೊಳಗಿನ ಬದುಕು ಅಳಿಸಲಾಗದ ಅಕ್ಷರ ಲೋಕಕ್ಕೆ ಜಮೆಯಾಗಿದೆ.
-ಎಸ್.ಗಂಗಾಧರಯ್ಯ

Share
Subscribe to our emails
Subscribe to our mailing list for insider news, product launches, and more.