Dr. Naga H. Hubli
ಭೂತನಾಥ
ಭೂತನಾಥ
Publisher - ರವೀಂದ್ರ ಪುಸ್ತಕಾಲಯ
Regular price
Rs. 700.00
Regular price
Rs. 700.00
Sale price
Rs. 700.00
Unit price
/
per
- Free Shipping Above ₹250
- Cash on Delivery (COD) Available
Pages -
Type -
'ಚಂದ್ರಕಾಂತಾ' ಮತ್ತು 'ಚಂದ್ರಕಾಂತಾ ಸಂತತಿ' ಸರಣಿಯ ಕಾದಂಬರಿಗಳ ಮೂಲಕ ಹಿಂದಿ ಸಾಹಿತ್ಯಪ್ರಿಯರಲ್ಲಿ ಹೊಸ ಸಂಚಲನವನ್ನು ಮತ್ತು ರೋಮಾಂಚನವನ್ನು ಸೃಷ್ಟಿಮಾಡಿದವರು ಬಾಬೂ ದೇವಕೀನಂದನ ಖತ್ರೀ. ಅವರ ಈ ಸರಣಿಯ ಕಾದಂಬರಿಗಳಲ್ಲಿ ಪ್ರಮುಖ ಪಾತ್ರವಾಗಿರುವ 'ಭೂತನಾಥ'ನು ತನ್ನ ಆತ್ಮಚರಿತ್ರೆಯನ್ನು ಬರೆದು ರಾಜರ ಆಹ್ವಾನಕ್ಕೆ ಸಲ್ಲಿಸುವ ಕುರಿತಾಗಿ ಭರವಸೆಯನ್ನು ನೀಡುತ್ತಾನೆ ಎಂದು 'ಚಂದ್ರಕಾಂತಾ ಸಂತತಿ'ಯಲ್ಲಿ ತಿಳಿಸಲಾಗಿದೆ. ಲೇಖಕರ ಮನಸ್ಸಿನಲ್ಲಿ ಭೂತನಾಥನ ಆತ್ಮಚರಿತ್ರೆಯನ್ನು ಬರೆಯುವ ಯೋಚನೆಯೊಂದು ಮೂಡಿದೆ ಎನ್ನುವುದು ಈ ಮಾತಿನಿಂದಲೇ ಸ್ಪಷ್ಟವಾಗುತ್ತದೆ. ಅದರಲ್ಲಿ ಆಶ್ಚರ್ಯಕರ ಸಂಗತಿಯೇನೂ ಇಲ್ಲ, ಏಕೆಂದರೆ, ಭೂತನಾಥ ಅಥವಾ ಗದಾಧರ ಸಿಂಗ್ ನ ವ್ಯಕ್ತಿತ್ವವೇ ಬಹಳ ವಿಶಿಷ್ಟವಾದುದು, ಆತ್ಮಚರಿತ್ರೆ ಬರೆದುಕೊಳ್ಳುವುದಕ್ಕೆ ಯೋಗ್ಯವಾದುದು. ಆತನೊಬ್ಬ ವಿಲಕ್ಷಣ ಸ್ವಭಾವದ ವ್ಯಕ್ತಿ ಒಬ್ಬ ಮಾಯಾವಿ, ಕುತಂತ್ರಿ ಆತ ಎಲ್ಲರನ್ನೂ ನಂಬಿಸುತ್ತಾನೆ. ಅದರ ಜೊತೆಯಲ್ಲಿ ತಾನೂ ಕೂಡ ಮೋಸ ಹೋಗುತ್ತಾನೆ; ವರ್ಣನೆಗೆ ನಿಲುಕದಂತಹ ಆನೇಕ ಯೋಜನೆಗಳನ್ನು
ರೂಪಿಸುತ್ತಾನೆ; ಯಶಸ್ಸನ್ನೂ ಗಳಿಸುತ್ತಾನೆ; ಎಲ್ಲಕ್ಕಿಂತ ಮುಖ್ಯವಾಗಿ ಯಾರ ಕಲ್ಪನೆಗೂ ನಿಲುಕದ ವ್ಯಕ್ತಿಯಾಗಿಯೇ ಉಳಿದುಬಿಡುತ್ತಾನೆ.
'ಚಂದ್ರಕಾಂತಾ ಮತ್ತು ಚಂದ್ರಕಾಂತಾ ಸಂತತಿ' ಸರಣಿಯೊಂದಿಗೆ ಸಂಬಂಧವನ್ನು ಹೊಂದಿರುವ ಈ ಕೃತಿಯು ಆ ಕಾದಂಬರಿಯಲ್ಲಿರುವ ಅಥವಾ ಅದಕ್ಕಿಂತಲೂ ಅಧಿಕ ಕುತೂಹಲವನ್ನು ಉಳಿಸಿಕೊಂಡೇ ಮುಂದುವರಿಯುತ್ತದೆ.
1861ರಲ್ಲಿ ಮುಜಪ್ಪರಪುರದಲ್ಲಿ ಜನಿಸಿ, ಹಿಂದಿ, ಸಂಸ್ಕೃತ, ಪಾರಸಿ, ಉರ್ದು, ಇಂಗ್ಲೀಷ್ ಮುಂತಾದ ಭಾಷೆಗಳಲ್ಲಿ ಪ್ರಾವೀಣ್ಯತೆಯನ್ನು ಪಡೆದು, ಶಕ್ತಿಯ ಉಪಾಸಕರಾಗಿಯೂ ತಮ್ಮನ್ನು ಗುರುತಿಸಿಕೊಂಡ ಹಿಂದಿಯ ಶ್ರೇಷ್ಠ ಕಾದಂಬರಿಕಾರ ದೇವಕೀನಂದನ ಖತ್ರೀಯವರ 'ಚಂದ್ರಕಾಂತಾ' ಕಾದಂಬರಿಯು ಆದೆಷ್ಟು ಜನಪ್ರಿಯವಾಯಿತು ಎನ್ನುವುದು ಇಡೀ ದೇಶಕ್ಕೆ ಗೊತ್ತು ಅವರ ಕಾದಂಬರಿಯನ್ನು ಓದುವುದಕ್ಕಾಗಿಯೇ ಹಲವರು ಹಿಂದಿಯನ್ನು ಕಲಿತರು' ಎಂದರೆ ಅವರ ಸಾಹಿತ್ಯದ ಶ್ರೇಷ್ಠತೆ ಅರ್ಥವಾಗುತ್ತದೆ. 'ಚಂದಕಾಂತಾ'ದ ಯಶಸ್ಸಿನ ನಂತರ ಅವರು ಅದೇ ಕತೆಯನ್ನು ಮುಂದುವರಿಸಿಕೊಂಡು ಆರು ಸಂಪುಟಗಳಲ್ಲಿ 'ಚಂದ್ರಕಾಂತಾ ಸಂತತಿ' ಕಾದಂಬರಿಯನ್ನು ಸರಣಿಯಲ್ಲಿ ಪ್ರಕಟಿಸಿದರು ಮತ್ತು ಅವು ಕೂಡ ಸಾಕಷ್ಟು ಪ್ರಸಿದ್ಧಿಯನ್ನು ಪಡೆದವು, 'ಚಂದ್ರಕಾಂತಾ ಸಂತತಿ ಪರಂಪರೆಯನ್ನೇ ಮುಂದುವರಿಸಿಕೊಂಡು ಅವರು ಆ ಕಾದಂಬರಿಯ ಪ್ರಮುಖ ಪಾತ್ರವಾದ ಭೂತನಾಥನನ್ನು ಕಥಾನಾಯಕನಾಗಿಸಿಕೊಂಡು 'ಭೂತನಾಥ' ಹೆಸರಿನಲ್ಲಿಯೇ ಈ ಬೃಹತ್ ಕಾದಂಬರಿಯನ್ನು ರಚಿಸಿದ್ದಾರೆ. ಇದು ಭೂತನಾಥನ ಆತ್ಮಚರಿತ್ರೆ ಎನ್ನುವ ಮಾತನ್ನು ಸ್ವತಃ ಲೇಖಕರೇ ಹೇಳಿಕೊಂಡಿದ್ದಾರೆ; 'ಚಂದ್ರಕಾಂತಾ ಸಂತತಿ'ಯ ಅಂತಿಮ ಭಾಗದಲ್ಲಿ ಸ್ಪಷ್ಟವಾಗಿ ಈ ಸಂಗತಿಯನ್ನು ಉಲ್ಲೇಖಿಸಿದ್ದಾರೆ.
'ಚಂದ್ರಕಾಂತಾ ಸಂತತಿ'ಯು ಹೇಗೆ ಅವರ ಹಿಂದಿನ ಕಾದಂಬರಿ 'ಚಂದ್ರಕಾಂತಾ'ದ ವಿಸ್ತ್ರತ ರೂಪವಾಗಿದೆಯೋ ಅದೇ ರೀತಿಯಲ್ಲಿ 'ಭೂತನಾಥ' ಕಾದಂಬರಿಯು ಚಂದ್ರಕಾಂತಾ ಸಂತತಿ'ಯ ಮುಂದುವರಿದ ಭಾಗವಾಗಿ ಕಾಣಿಸಿಕೊಳ್ಳುತ್ತದೆ; ಬೃಹತ್ ಸೃಷ್ಟಿಯಾಗಿ ಸಾಕ್ಷಿಕರಿಸುತ್ತದೆ. ಏಕೆಂದರೆ ಈ ಕಾದಂಬರಿಯು ಚಂದ್ರಕಾಂತಾ ಸಂತತಿಯ ಆರು ಭಾಗಗಳಲ್ಲಿ ಹಂಚಿಹೋಗಿರುವ ಒಟ್ಟೂ ಕತೆಗಿಂತಲೂ ವಿಸ್ತಾರವಾಗಿ ಕಂಡುಬರುತ್ತದೆ; ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇದು ಏಳು ಭಾಗಗಳಲ್ಲಿ ಹೇಳಬಹುದಾದಷ್ಟು ವಿಸ್ತಾರವಾಗಿದೆ
ಬಾಬೂ ದೇವಕೀನಂದನ ಖತ್ರೀಯವರು ಈ ಬೃಹತ್ ಕಾದಂಬರಿಯನ್ನು ರಚಿಸುವ ಮೂಲಕ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ; ಮಾತ್ರವಲ್ಲ ತಮ್ಮದೇ ಕಲ್ಪನೆಯ 'ಚಂದ್ರಕಾಂತಾ' ಹಾಗೂ 'ಚಂದ್ರಕಾಂತಾ ಸಂತತಿ ಕಾದಂಬರಿಯಲ್ಲಿನ ಮಹತ್ವದ ಪಾತ್ರವಾದ ಭೂತನಾಥನಿಗೆ ಆತನ ವಿಚಿತ್ರ ಹಾಗೂ ಚಾಣಾಕ್ಷ ಮನಸ್ಥಿತಿಗೆ ಸ್ಪಷ್ಟವಾದ ರೂಪವನ್ನು ನೀಡಿದ್ದಾರೆ. ಅಷ್ಟೆ ಅಲ್ಲ, 'ಚಂದ್ರಕಾಂತಾ ಸಂತತಿ'ಯಲ್ಲಿ ಓಡುಗರಿಗೆ ನೀಡಿದ್ದ ಭರವಸೆಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ತನ್ನ ಧ್ವನಿಕ ಕಥಾವಸ್ತುವಾದ ಚಂದ್ರಕಾಂತಾನಿಗೆ ಸುಂದರವಾದ ಅಂತ್ಯವನ್ನೂ ನೀಡಿದ್ದಾರೆ.
ಪ್ರತಿಯೊಂದು ಹಂತದಲ್ಲಿಯೂ ರೋಚಕತೆಯನ್ನು, ಕುತೂಹಲವನ್ನು ಉಳಿಸಿಕೊಳ್ಳುತ್ತ, ಓದುಗರ ಮನಸ್ಸಿಗೆ ಲಗ್ಗೆ ಹಾಕುವ ಖತ್ರೀಯವರ ನಿರೂಪಣಾ ಶೈಲಿಯನ್ನು ಯಥಾವತ್ತಾಗಿ ಕಾಪಾಡಿಕೊಂಡು ಈ ಬೃಹತ್ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ, ವೃತ್ತಿಯಿಂದ ಪ್ರಾಧ್ಯಾಪಕರಾಗಿರುವ, ಕನ್ನಡಕ್ಕೆ ಕೆಲವು ಅಮೂಲ್ಯ ಕೃತಿಗಳನ್ನು ನೀಡಿರುವ ಡಾ. ನಾಗ ಎಚ್. ಹುಬ್ಳಿ.
-ಪ್ರಕಾಶಕರು

Share
Subscribe to our emails
Subscribe to our mailing list for insider news, product launches, and more.