Dr. K. N. Ganeshaiah
ಭಿನ್ನೋಟ
ಭಿನ್ನೋಟ
Publisher - ಅಂಕಿತ ಪುಸ್ತಕ
- Free Shipping Above ₹350
- Cash on Delivery (COD) Available
Pages - 176
Type - Paperback
Couldn't load pickup availability
ನಾವೇಕೆ ನಗುತ್ತೇವೆ. ಅಳುತ್ತೇವೆ, ದುಃಖಿಸುತ್ತೇವೆ, ಸಂತೋಷಪಡುತ್ತೇವೆ?
ಅತಿಯಾದ ಸುಖ ಮತ್ತು ದುಃಖ ಎರಡೂ ಒಂದೇ ರೀತಿಯ ಭಾವನೆಗಳೆ? ನಮ್ಮ ಬದುಕಿನ ಇಂತಹ ನೂರಾರು ನಡೆಗಳನ್ನು, ಅಭ್ಯಾಸಗಳನ್ನು, ಜೀವನ ರೀತಿನೀತಿಗಳನ್ನು ಇವು ಏಕೆ ಹೀಗೆ ಎಂದು ಪ್ರಶ್ನಿಸದೆಯೆ ನಾವು ಇಡೀ ಜೀವನ ಕಳೆದು ಬಿಡುತ್ತೇವೆ - ಅವಿಲ್ಲದೆಯೆ ಬದುಕು ಸಾಗಲು ಸಾಧ್ಯವಿಲ್ಲವೆ? ಎನ್ನುವುದನ್ನೂ ಪ್ರಶ್ನಿಸದೆ. ನಮ್ಮ ಮನಸ್ಸನ್ನೂ ಸೆರೆಯಾಗಿಸಿಕೊಳ್ಳುವಷ್ಟು ಶಕ್ತಿಯುತವಾದ ನಡೆನುಡಿಗಳನ್ನು ಅರ್ಥ ಮಾಡಿಕೊಳ್ಳದೆಯೇ ಈ ಪ್ರಪಂಚ ತೊರೆದು ಹೋಗುತ್ತೇವೆ ಎನ್ನುವ ಸತ್ಯ ಘೋರ ಶಾಪ ಅನಿಸುತ್ತದೆ. ಆ ಶಾಪಕ್ಕೆ ನಿವಾರಣೆ ಇದೆಯೆ? ಈ ಅಜ್ಞಾನದ ಕತ್ತಲೊಳಗೆ ನುಗ್ಗಿ ಹುಡುಕಾಡಬಹುದೆ?
'ಭಿನ್ನೋಟ' ಅಂತಹದ್ದೊಂದು ಪ್ರಯತ್ನ. 'ಭಿನ್ನೋಟ'ದಲ್ಲಿ, ನಾವು ಅತೀ ಸಹಜ ಎಂದುಕೊಂಡಿರುವ, ನಮ್ಮ ಗಮನವನ್ನೇ ಸೆಳೆಯದ, ನಮ್ಮಲ್ಲಿಯೇ ಅಂತರ್ಗತ ವಾಗಿರುವ, ಜೀವನದ ಹಲವು ನಡೆ ನುಡಿಗಳ ಮೂಲವನ್ನು ಹುಡುಕುವ ಪ್ರಯತ್ನ ಮಾಡಲಾಗಿದೆ ಅವನ್ನು ಅರಿತುಕೊಳ್ಳುವುದರಿಂದ ನಮ್ಮ ಜೀವನ ಬದಲಾಗುತ್ತದೆ ಎಂಬ ಹಿರಿದಾದ ಆಕಾಂಕ್ಷೆಯಿಂದಲ್ಲ; ನಮ್ಮ ವರ್ತನೆಯ ಮೂಲವನ್ನು ಅರಿಯುವುದರಿಂದ ನಮ್ಮನ್ನು ನಾವೇ ನಂಬಿಕೆಯಿಂದ. ಅರಿತುಕೊಳ್ಳಬಹುದು ಎಂಬ ನಂಬಿಕೆಯಿಂದ.
ಭಿನ್ನ ರೀತಿಯ ಈ ಲೇಖನಗಳು ನಮ್ಮಲ್ಲಿ ಸಾಕಷ್ಟು ಅಚ್ಚರಿ ವಿಚಾರವನ್ನು ಉಂಟುಮಾಡುತ್ತವೆ.
Share


Subscribe to our emails
Subscribe to our mailing list for insider news, product launches, and more.