Skip to product information
1 of 1

Mahabhaleshwar Rao

ಭಾರತೀಯ ಚಿತ್ರಕಲೆ

ಭಾರತೀಯ ಚಿತ್ರಕಲೆ

Publisher - ನ್ಯಾಶನಲ್ ಬುಕ್ ಟ್ರಸ್ಟ್

Regular price Rs. 125.00
Regular price Rs. 125.00 Sale price Rs. 125.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 118

Type - Paperback

ಪುರಾತನ ಕಾಲದಿಂದ ಇಂದಿನವರೆಗೆ ಭಾರತೀಯ ಚಿತ್ರಕಲೆಯ ಇತಿಹಾಸ ರೋಮಾಂಚನ ಕಾರಿಯಾದುದಾಗಿದೆ. ಆದರೆ ಈ ಬೃಹತ್ ಇತಿಹಾಸವನ್ನು ಕೆಲವೇ ಪಟಗಳ ನಡುವೆ ಅಡಕವಾಗುವಂತೆ ರೂಪಿಸುವುದು ಸಾಧ್ಯವಿಲ್ಲ. ಆದಾಗ್ಯೂ ಭಾರತೀಯ ಚಿತ್ರಕಲೆಯ ಕಥೆಯನ್ನು ಸಾಧ್ಯವಾದಷ್ಟು ವಿವರವಾಗಿ ಲೇಖಕರು ಇಲ್ಲಿ ಪರಿಚಯ ಮಾಡಿಕೊಟ್ಟಿದ್ದಾರೆ.

ಪದ್ಮಭೂಷಣ ದಿ। ಸಿ, ಶಿವರಾಮಮೂರ್ತಿ ಅವರು ಬ್ರಿಟನ್ನಿನ ರಾಯಲ್ ಏಷ್ಯಾಟಿಕ್ ಸೊಸೈಟಿಯ ಗೌರವ ಸದಸ್ಯರಾಗಿದ್ದರು. ಅವರು ಸ್ವತಃ ಒಬ್ಬ ಪ್ರತಿಭಾನ್ವಿತ ಶಿಲ್ಪಿ ಮತ್ತು ಚಿತ್ರಕಾರರಾಗಿದ್ದರು. ಸಂಸ್ಕೃತ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಮದರಾಸಿನ ಪುರಾತತ್ವ ಇಲಾಖೆಯಲ್ಲಿ ಕ್ಯುರೇಟರ್ ಆಗಿದ್ದರು. ಕೊಲ್ಕತ್ತಾದ ಇಂಡಿಯನ್ ಮ್ಯೂಸಿಯಂನಲ್ಲಿ ಪುರಾತತ್ವ ವಿಭಾಗದ ಸೂಪರಿಂಟೆಂಡೆಂಟರಾಗಿ ಸೇವೆ ಸಲ್ಲಿಸಿ, ಹೊಸ ದೆಹಲಿಯ ನ್ಯಾಷನಲ್ ಮ್ಯೂಸಿಯಂನಲ್ಲಿ ನಿರ್ದೇಶಕರಾಗಿ ನಿವೃತ್ತರಾದರು. ಆನಂತರ ಮ್ಯೂಸಿಯಂ ಬಗ್ಗೆ ಭಾರತ ಸರಕಾರದ ಗೌರವ ಸಲಹಾಕಾರರಾಗಿ ಮತ್ತು ಆ‌ರ್ಟ್ ಪರ್ಚೇಸ್ ಕಮಿಟಿಯ ಅಧ್ಯಕ್ಷರಾಗಿ ಕೆಲಸ ಮಾಡಿದರು. 1983ರಲ್ಲಿ ಅವರು ನಿಧನರಾಗುವವರೆಗೆ ಈ ಹುದ್ದೆಗಳಲ್ಲಿ ನೇಮಕಗೊಂಡಿದ್ದರು.

ಭಾರತೀಯ ಲಲಿತಕಲೆಗಳಲ್ಲಿ ಅತ್ಯಂತ ಮುಖ್ಯವಾದುದೆಂದು ಪರಿಗಣಿಸಲಾದ Nataraja in Art, Thought and Literature ಎಂಬ ಗ್ರಂಥವನ್ನು ಅವರು ರಚಿಸಿದ್ದಾರೆ. Amaravati Sculptures in the Madras Museum, South Indian Painting, South Indian Bronzes, 5000 years of Indian Art ಇವುಗಳು ಅವರ ರಚನೆಗಳಲ್ಲಿ ಮುಖ್ಯವಾದುವು.

ಶ್ರೀ ಪಿ.ಆರ್. ತಿಪ್ಪೇಸ್ವಾಮಿಯವರು ಈ ಪುಸ್ತಕವನ್ನು ಅನುವಾದಿಸಿದ್ದಾರೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)