Skip to product information
1 of 1

Mahabhaleshwar Rao

ಭಾರತೀಯ ಜನಪದ ಕತೆಗಳು

ಭಾರತೀಯ ಜನಪದ ಕತೆಗಳು

Publisher - ನ್ಯಾಶನಲ್ ಬುಕ್ ಟ್ರಸ್ಟ್

Regular price Rs. 145.00
Regular price Rs. 145.00 Sale price Rs. 145.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 300

Type - Paperback

ಶತಶತಮಾನಗಳಿಂದ ಭಾರತದ ಜನವರ್ಗದ ಕಲ್ಪನಾ ಶಕ್ತಿಯನ್ನು ಪ್ರಚೋದಿಸಿದ ಬಾಯ್ಕಾತಿನ ಕತೆಗಳ ಸಂಕಲನವೇ ಭಾರತೀಯ ಜನಪದ ಕತೆಗಳು, ಈ ಉಪಖಂಡದ ಇಪತ್ತೆರಡು ಭಾಷೆಗಳಿಂದ ಆಯ್ದ ಕತೆಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ. ಈ ಕತೆಗಳು ನಮ್ಮ ಮನಸ್ಸನ್ನು ಚುಚ್ಚಿ ನೋಯಿಸುವಂತೆಯೇ ನಗಿಸುತ್ತವೆ. ಸೂಚ್ಯವಾಗಿ ಮಾತನಾಡುತ್ತವೆ. ನೇರವಾಗಿ ಹಳಿಯುತ್ತವೆ. ನಿಗೂಢವಾಗಿರುವಂತೆಯೇ ರಮ್ಯವಾಗಿಯೂ ಇವೆ. ಒಂದರ ವಿರುದ್ಧ ಇನ್ನೊಂದು ಸಂಚು ಹೂಡುವ ಪ್ರಾಣಿಗಳು, ಚತುರ ವಿದೂಷಕರು, ಮೋಡಿ ಮಾಡುವ ಕತೆಗಾರರು, ವಿವೇಕಿಗಳಾದ ಮಂತ್ರಿಗಳು, ಮೂರ್ಖ ರಾಜರು, ಠಕ್ಕರು, ಮುಟ್ಟಾಳರು, ಅಕಾರಣ ಬಹಿಷ್ಕಾರಕ್ಕೆ ಒಳಗಾಗಿ ಕೊನೆಗೆ ಪುನರ್ಮಿಲನ ಹೊಂದುವ ರಾಜಕುಮಾರ-ರಾಜಕುಮಾರಿಯರು, ಭಿಕ್ಷುಕರ ಅಥವಾ ಪ್ರಾಣಿಗಳ ರೂಪಧಾರಣ ಮಾಡುವ ದೇವರುಗಳು ಇವರೆಲ್ಲ ಅದ್ಭುತವಾದ ಹಾಗೂ ಆಶ್ಚರ್ಯಜನಕವಾದ ಈ ಕಥಾಲೋಕದಲ್ಲಿದ್ದಾರೆ. ಇಲ್ಲಿನ ಎಲ್ಲ ಕತೆಗಳು ಜನಜೀವನದಿಂದ ಜೀವಧಾತುವನ್ನು ಪಡೆದಿವೆ. ಜನರ ನಿತ್ಯ ಜೀವನದಲ್ಲಿ ಭದ್ರವಾಗಿ ಬೇರುಬಿಟ್ಟಿವೆ. ಡಾ. ಎ.ಕೆ. ರಾಮಾನುಜನ್ ಅವರು ಕೊಟ್ಟಿರುವ ಖಚಿತವಾದ ಪ್ರಸ್ತಾವನೆ ಹಾಗೂ ಸುಸಂಬದ್ಧ ಟಿಪ್ಪಣಿಗಳಿಂದಾಗಿ ಈ ಗ್ರಂಥದ ಗುಣಮೌಲ್ಯ ವರ್ಧಿಸಿದೆ. ಭಾರತದ ಜಾನಪದ ಪರಂಪರೆಯ ಸಮೃದ್ಧಿ ಹಾಗೂ ಸಾಮರ್ಥ್ಯದ ಪರಿಚಯ ಮಾಡಿಕೊಳ್ಳ ಬಯಸುವವರಿಗೆ, ಜಿಜ್ಞಾಸುಗಳಿಗೆ, ಆಸಕ್ತರಿಗೆ ಇದೊಂದು ಅನಿವಾರ್ಯ. ಅಮೂಲ್ಯ ಮಾರ್ಗದರ್ಶಿ.
ಕವಿ, ಕತೆಗಾರ, ಕಾದಂಬರಿಕಾರ, ಭಾಷಾಂತರಕಾರ, ಭಾಷಾತಜ್ಞ, ಜಾನಪದ ವಿದ್ವಾಂಸ ಶ್ರೀ ಅತ್ತಿಪಟ್ ಕೃಷ್ಣಸ್ವಾಮಿ ಅಯ್ಯಂಗಾರ್ ರಾಮಾನುಜನ್ (1920-003) ಜನಿಸಿದ್ದು ಮೈಸೂರಿನಲ್ಲಿ, ಅವರಿಗೆ ಮೆಕ್‌ಆರ್ಥ‌ರ್ ಫೆಲೋಶಿಪ್ (ಜೀನಿಯಸ್), ಫುಲ್‌ಬ್ರೈಟ್‌ ಶಿಷ್ಯವೇತನ, ಪದ್ಮಶ್ರೀ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಹಲವಾರು ಫೆಲೋಶಿಪ್‌ಗಳು, ಅನುದಾನಗಳು ಹಾಗೂ ಪ್ರಶಸ್ತಿಗಳು ದೊರೆತಿವೆ. ಅವರ ಕವನಗಳು, ಅನುವಾದಗಳು ಮತ್ತು ಪ್ರೌಢಪ್ರಬಂಧಗಳು ಜಗತ್ತಿನ ವಿವಿಧ ನಿಯತಕಾಲಿಕಗಳಲ್ಲಿ ಬೆಳಕು ಕಂಡಿವೆ. ಹೊಕ್ಕುಳಲ್ಲಿ ಹೂವಿಲ್ಲ, ಕುಂಟೋಬಿಲ್ಲೆ, ಅಣ್ಣಯ್ಯನ ಮಾನವಶಾಸ್ತ್ರ ಮತ್ತೊಬ್ಬನ ಆತ್ಮಚರಿತ್ರೆ, ಸಂಸ್ಕಾರ (ಅನುವಾದ), ಸ್ಪೀಕಿಂಗ್ ಆಫ್ ಶಿವ (ವಚನಗಳ ಅನುವಾದ) ಅವರ ಕೆಲವು ಮಹತ್ತ್ವದ ಪ್ರಕಟಣೆಗಳು. ಅವರು ಸೌತ್ ಏಷ್ಯನ್ ಲ್ಯಾಂಗ್ವೇಜಸ್ ಅಂಡ್ ಸಿವಿಲಿಜೇಶನ್ಸ್‌ನ ವಿಲಿಯಂ ಇ ಕಾಲ್ವಿನ್ ಪ್ರೊಫೆಸರ್ ಆಗಿ, ಭಾಷಾ ವಿಜ್ಞಾನದ ಪ್ರಾಧ್ಯಾಪಕರಾಗಿ, ಚಿಕಾಗೋ ವಿಶ್ವವಿದ್ಯಾನಿಲಯದ ಸಮಾಜ ಚಿಂತನ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಸಿದ್ಧ ಲೇಖಕ ಡಾ. ಮಹಾಬಲೇಶ್ವರ ರಾವ್‌ ಈ ಪುಸ್ತಕವನ್ನು ಇಂಗ್ಲಿಷ್‌ನಿಂದ ಅನುವಾದಿಸಿದ್ದಾರೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)