Skip to product information
1 of 1

Translated by D. R. Mirji

ಭಾರತದ ಐತಿಹಾಸಿಕ ವ್ಯಕ್ತಿ ಚಿತ್ರಗಳು

ಭಾರತದ ಐತಿಹಾಸಿಕ ವ್ಯಕ್ತಿ ಚಿತ್ರಗಳು

Publisher - ಐಬಿಹೆಚ್ ಪ್ರಕಾಶನ

Regular price Rs. 190.00
Regular price Rs. 190.00 Sale price Rs. 190.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type - Paperback

ಚಂದ್ರಗುಪ್ತ ಮೌರ್ಯನಿಂದ ಹಿಡಿದು ತೀರ ಇತ್ತೀಚಿಗಿನವರೆಗೆ ಎನ್ನಬಹುದಾದ ಬ್ರಿಟಿಷ್ ಭಾರತದ ಕೊನೆ ಕೊನೆಯವರೆಗಿನ ಸುದೀರ್ಘ ಇತಿಹಾಸದಲ್ಲಿ ಹದಿನೈದು ಪ್ರಮುಖ ವ್ಯಕ್ತಿಗಳನ್ನಾಯ್ಡು ಅವರ ವಿಶಿಷ್ಟ ಕೊಡುಗೆಗಳ ಮೂಲ್ಯಾಂಕನ ಮಾಡುವ ಪ್ರಯತ್ನವೊಂದು ಇಲ್ಲಿದೆ. ಮೂಲತಃ ಇದೊಂದು ಸಂಪಾದಿತ ಕೃತಿ. ಆದುದರಿಂದ ಸ್ವಾಭಾವಿಕವಾಗಿಯೇ ಅವರನ್ನು ಆಯ್ಕೆ ಮಾಡಿದವರು ಬೇರೆ ಬೇರೆಯಾಗಿದ್ದು, ಅವರ ಮೂಲ್ಯಾಂಕನದ ಮಾನದಂಡಗಳೂ ಬೇರೆ ಬೇರೆಯಾಗಿವೆ. ಐತಿಹಾಸಿಕ ಘಟನೆಗಳಿಗಿಂತಲೂ ಹೆಚ್ಚಾಗಿ ಅವರ ಒತ್ತು ವ್ಯಕ್ತಿಗಳ ವ್ಯಕ್ತಿತ್ವದ ಮೇಲೆಯೇ ಇರುವಂತೆ ತೋರುತ್ತದೆ. ಆದರೂ ಅವರ ಹಿರಿಮೆಯನ್ನು ಗುರುತಿಸುವಲ್ಲಿ ವೈವಿಧ್ಯತೆ ಇದೆ. ಇಲ್ಲಿ ಸಾಮ್ರಾಜ್ಯವನ್ನು ಕಟ್ಟಿ ಅದನ್ನು ಭಾರತದ ಗಡಿಯಾಚೆಗೂ ವಿಸ್ತರಿಸಿದ ಚಂದ್ರಗುಪ್ತ ಮೌರ್ಯರಂಥವರಿದ್ದಾರೆ. ಮರಾಠಾ ಸಾಮ್ರಾಜ್ಯದ ರೂವಾರಿ ಶಿವಾಜಿ ಇದ್ದಾನೆ, ಚಿತ್ರಕಲೆ ಮತ್ತು ವಾಸ್ತುಶಿಲ್ಪಗಳನ್ನು ಪ್ರೋತ್ಸಾಹಿಸಿ ಶ್ರೇಷ್ಠ ಕಲಾಕೃತಿಗಳನ್ನು ನಿರ್ಮಿಸಿದ ಜಹಾಂಗೀರ್ ಮತ್ತು ಶಾಜಹಾನ್ ಇದ್ದಾರೆ. ಮತಾಂಧ ಔರಂಗಜೇಬನಿಗೂ ಇಲ್ಲಿ ಸ್ಥಾನ ಕಲ್ಪಿಸಲಾಗಿದೆ. ತನ್ನ ದೇಶ, ಮತ, ಸಂಸ್ಕೃತಿಗಾಗಿ ತನ್ನ ಇಡೀ ಆಯುಷ್ಯವನ್ನೇ ಕಷ್ಟದಲ್ಲಿ ಸವೆಸಿದ ಕೆಚ್ಚೆದೆಯ ಮಹಾರಾಣಾ ಪ್ರತಾಪ್ ಇದ್ದಾನೆ. ಬ್ರಿಟಿಷ್ ಸರಕಾರದ ನಿಷ್ಠಾವಂತ ದೇಶಿ ಅರಸನಾಗಿಯೂ ತನ್ನ ಪ್ರಜೆಗಳ ಹಿತಕ್ಕಾಗಿ ಅಗಾಧ ಕೆಲಸ ಮಾಡಿದ ಬಿಕಾನೇರಿನ ಅರಸು ಮಹಾರಾಜ ಗಂಗಾಸಿಂಗ್ ಇದ್ದಾನೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)