Kumaraswamy Tekkunja
ಭಾನುಮತಿಯ ಪರಿವಾರ
ಭಾನುಮತಿಯ ಪರಿವಾರ
Publisher - ವೀರಲೋಕ ಬುಕ್ಸ್
Regular price
Rs. 140.00
Regular price
Rs. 140.00
Sale price
Rs. 140.00
Unit price
/
per
- Free Shipping Above ₹250
- Cash on Delivery (COD) Available
Pages - 118
Type - Paperback
ರಾವಣ ಪತ್ನಿಯ ಕುರಿತಾದ "ಮುಂಡೋದರಿ" ಕಾದಂಬರಿಯನ್ನು ಬರೆದ ನನಗೆ ದುರ್ಯೋಧನ ಪತ್ನಿ ಭಾನುಮುತಿಯ ಕುರಿತು ಬರೆಯಬೇಕೆಂಬ ಯೋಚನೆ ಸಹಜವಾಗಿಯೇ ಉಂಟಾಗಿತ್ತು, ಅದರ ಪರಿಣಾದುದೇ ಈ ಕೃತಿ "ಭಾನುಮತಿಯ ಪರಿವಾರ'. ಮಹಾಭಾರತ ಕೃತಿಯಲ್ಲಿ ಎಲ್ಲಿಯೂ ಭಾನುಮತಿ ಪ್ರಸ್ತಾಪ ಬಂದಂತೆ ಕಾಣುವುದಿಲ್ಲ, ಪಂಪ ಭಾರತದ "ಭಾನುಮತಿಯ ನೆತ್ತ" ಪ್ರಸಂಗವು ತುಂಬ ವಿಮರ್ಶೆಗೊಳಪಟ್ಟ ಪದ್ಯ. ಕಡೆಂಗೋಡ್ಳು ಶಂಕರ ಭಟ್ಟರ ಘೋಷಯಾತ್ರೆಯಲ್ಲಿಯೂ ಭಾನುದುತಿಯ ಚಿತ್ರಣ ಸಿಗುತ್ತದೆ. ಭಾನುಮತಿ ಸ್ವಯಂವರ ಎಂಬ ಯಕ್ಷಗಾನ ಪ್ರಸಂಗ ಇದೆಯಾದರೂ ಅದು ಅಷ್ಟು ಪ್ರಚಾರಕ್ಕೆ ಬರಲಿಲ್ಲ. ಕೆಲವು ಬಿಡಿ ಲೇಖನಗಳು ಅಪರೂಪಕ್ಕೊಮ್ಮೆ ಪ್ರಕಟವಾದದ್ದಿದೆ. ಇವಿಷ್ಟು ಹೊರತು ಪಡಿಸಿದರೆ ಕನ್ನಡದಲ್ಲಿ ಭಾನುಮತಿಯ ಕುರಿತಾದ ಸಾಹಿತ್ಯ ವಿರಳವೆಂದೇ ಹೇಳಬಹುದು. ಹಾಗಾಗಿ "ಭಾನುಮತಿ ಪರಿವಾರ" ಕಾದಂಬರಿ ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಒಂದು ಅಪರೂಪದ ಕೃತಿಯೆಂದೇ ಹೇಳಬಹುದು.
ಭಾನುಮತಿಯ ಪರಿವಾರ ಎಂಬುದು ಹಿಂದಿ ನಾಣ್ಣುಡಿ "ಭಾನುಮತಿ ಕಾ ಕುನ್‌ಬಾ" ಅನುವಾದ. ಪ್ರಸ್ತಾವನೆಯಲ್ಲಿ ತಿಳಿಸಿದಂತೆ ವಿಲೋಮ ವಸ್ತುಗಳ ಜೋಡಣೆಯಿಂದ ಕಟ್ಟಿಕೊಂಡ ಸಂಯುಕ್ತ ರೂಪವನ್ನು ವಿವರಿಸಲು ಈ ನಾಣ್ಣುಡಿಯ ಬಳಕೆಯಾಗುತ್ತದೆ. ಭಾನುಮತಿಯ ಸಂಸಾರವೂ ವಿಲೋಮ ಮನಸ್ಸುಗಳ ಕೂಟವೇ ಆಗಿದೆ. ಅದರ ಚಿತ್ರಣವೇ ಈ ಕಾದಂಬರಿಯ ಮುಖ್ಯ ಹೂರಣ. ಸ್ವಯಂವರದಿಂದ ತೊಡಗಿ ಮಹಾಭಾರತ ಯುದ್ಧಾ ನಂತರವೂ ಭಾನುಮತಿಯ ಬಾಳುವೆ ಆಕೆಯ ಇಚ್ಛೆಯಂತೆ ನಡೆಯಲಿಲ್ಲ. ದುರ್ಯೋಧನ ಮತ್ತವನ ಕೂಟದವರೊಂದಿಗಿನ ನಂಟು, ದುರ್ಯೋಧನನ ಆತ್ಮಸಖ ಕರ್ಣನ ಪತ್ನಿಯೊಂದಿಗಿನ ಆಕೆಯ ಸಂಬಂಧ, ದ್ರೌಪದಿಯೊಂದಿಗಿನ ಮುಖಾಮುಖಿ, ಅರಮನೆಯ ಬದುಕು, ಗಾಂಧಾರಿಯ ವ್ಯಕ್ತಿತ್ವ ಇವೆಲ್ಲವೂ ಸಾಕಷ್ಟು ವಿವರಗಳೊಂದಿಗೆ ಈ ಕಾದಂಬರಿಯಲ್ಲಿ ಚಿತ್ರಿಸಲ್ಪಟ್ಟಿದೆ. ವಿಶಿಷ್ಟ ನಿರೂಪಣಾ ಓದುಗರಿಗೆ ಮೆಚ್ಚುಗೆಯಾದೀತೆಂಬ ಭರವಸೆಯಿಂದ ಈ ಕೃತಿಯನ್ನು ಕನ್ನಡಮ್ಮನ ಮಡಿಲಿಗೆ ಸಮರ್ಪಿಸುತ್ತಿದ್ದೇನೆ.
-ಕುಮಾರಸ್ವಾಮಿ ತೆಕ್ಕುಂಜ

Share
Subscribe to our emails
Subscribe to our mailing list for insider news, product launches, and more.