Goruru Ramaswamy Iyengar
ಬೆಟ್ಟದ ಮನೆಯಲ್ಲಿ
ಬೆಟ್ಟದ ಮನೆಯಲ್ಲಿ
Publisher - ಐಬಿಹೆಚ್ ಪ್ರಕಾಶನ
- Free Shipping Above ₹250
- Cash on Delivery (COD) Available
Pages -
Type -
ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳು
ನೆನ್ನೆ ರಾತ್ರಿ ನಿದ್ದೆ ಬರದುದರಿಂದ ಸುಮಾರು ಹನ್ನೆರಡು ಗಂಟೆಗೆ ದೀಪ ಹತ್ತಿಸಿಕೊಂಡು ಗರುಡಗಂಬದ ದಾಸಯ್ಯ ಓದಲು ಪ್ರಾರಂಭಿಸಿದೆ. ನಿದ್ರೆಬರದಾಗ ಇದು ನನ್ನ ಪದ್ಧತಿ, ಆಚಾರಕೆಟ್ಟರೂ ಆಕಾರ ಕೆಡಬಾರದೆಂಬುದನ್ನು ಓದುತ್ತಾ ತಡೆಯಲಾರದ ನಗು ಬಂತು. ಗಟ್ಟಿಯಾಗಿ ನಗುತ್ತಲೇ ಇದ್ದು ಬಿಟ್ಟೆ. ನಮ್ಮ ಹುಡುಗರು ಗಾಬರಿಯಿಂದ ಎದ್ದು ನೋಡಿದರು. ವಿಷಯ ತಿಳಿದನಂತರ ಅವರೂ ನಗತೊಡಗಿದರು.
- ಡಾ. ಡಿ.ವಿ. ಗುಂಡಪ್ಪ
“ಒಬ್ಬ ಅರಸುಗಳೇ, ಹಜಾಮರೇ, ತುರುಕರೇ, ದಾಸಯ್ಯಗಳೇ, ಬಯಲಾಟದವರೇ, ಸುಬೇದಾರರೇ, ಶ್ಯಾನುಭೋಗರೇ, ಹೊಲೆಯರೇ-ಇವರೆಲ್ಲರನ್ನೂ ಒಂದು ಮಾಲೆಯಲ್ಲಿ ಪೋಣಿಸಿದ ವಿಕಟ ಕವಿತ್ವವು ಪ್ರಶಂಸನೀಯವೆಂದು ಯಾರು ಹೇಳಲಿಕ್ಕಿಲ್ಲ? ಹಾಸ್ಯವು ಸಾಮ್ಯವಾದಿ, ವ್ಯಂಗ್ಯ ಸರಣಿಯ ಗಾದೆಯ ಮಾತಿನ ಲೇಹ್ಯಗಳು; ಕಟಕಿಯ ಮಾತಿನ ತಿರುಪಿನ ಕಷಾಯಗಳು, ಹಾಸ್ಯಗರ್ಭಿತ ಉಪಮೆ ದೃಷ್ಟಾಂತಗಳ ವಾಚಕ ರೇಚಕಗಳು-ಇವೆಲ್ಲವು ಸಾಮಾಜಿಕ ರುಗ್ಣತೆಯನ್ನು ಕಳೆಯುವ ಇವರ ಹಾಸ್ಯ-ವೈದ್ಯಕದಲ್ಲಿ ಉಚಿತ ಪ್ರಯೋಜನಕಾರಿಯಾದುದನ್ನು ಕಂಡು ಹೀಗೆಯೇ ಈ ಕಲೆಯು ನಮ್ಮ ಜನಮನದ ಕೊಳೆಯನ್ನು ಕಳೆದು ಬೆಳಗುವಂತಿರಲಿ ಎಂದು ಹರಸುವಂತಾಗುವುದು..
- ದ.ರಾ. ಬೇಂದ್ರೆ
ಗೊರೂರು ರಾಮಸ್ವಾಮಯ್ಯಂಗಾರರು ಬಹಳ ಒಳ್ಳೆಯ ಲೇಖಕರು. ನಾನು ಇವರ ಅನೇಕ ಕಥೆ ಕಾದಂಬರಿಗಳನ್ನು ಓದಿದ್ದೇನೆ. ಅವು ಜಗತ್ತಿನ ಅತ್ಯುತ್ತಮ ಸಾಹಿತ್ಯ ಪಂಕ್ತಿಗೆ ಸೇರಲು ಅರ್ಹವಾಗಿವೆ. ಇವರ ಹಾಸ್ಯ ಬಹಳ ಮೇಲ್ತರಗತಿಯದು, ಸುಸಂಸ್ಕೃತವಾದುದು, ಅಪರೂಪವಾದುದು, ನಗೆಯನ್ನು ಮರೆತಿರುವ ನಮ್ಮ ಜನಕ್ಕೆ ಇವರ ಗ್ರಂಥಗಳು ನಗುವನ್ನು ಕಲಿಸಿವೆ.
ಮೈಸೂರು ಸಂಸ್ಥಾನದ ಮಾಜಿ ಮುಖ್ಯಮಂತ್ರಿ
ಶ್ರೀ ಕೆಂಗಲ್ ಹನುಮಂತಯ್ಯನವರು
Share
Subscribe to our emails
Subscribe to our mailing list for insider news, product launches, and more.