Lakshmeesha Tholpadi
ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ...
ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ...
Publisher - ಅಭಿನವ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 180
Type - Paperback
ದರ್ಶನ' ಎಂದರೆ ನೋಡೋದು. ಕಾಣ್ಕೆ. ಆದುದರಿಂದಲೇ ನೋಡಿದ್ದೆಲ್ಲ ದರ್ಶನವಲ್ಲ. ಹಾಗೆಂದು ನೋಡದೆ ದರ್ಶನವೇ ಇಲ್ಲ. ಒಮ್ಮೆ ನೋಡಿದ್ದನ್ನೇ ಇನ್ನೊಂದು ಬಗೆಯಿಂದ ನೋಡೋದು ದರ್ಶನ. ಇದೇನೂ ವಿಶಿಷ್ಟ ಸಂಗತಿಯಲ್ಲ. ಅಲೌಕಿಕ ಸಂಗತಿಯಲ್ಲ. ಇನ್ನೊಮ್ಮೆ ನೋಡೋಣ ಅನ್ನಿಸ್ತದೆ ಎನ್ನೋದು ಇಲ್ಲಿನದೇ ಅನುಭವ. 'ಇನ್ನೊಮ್ಮೆ' ಎನ್ನೋದು ಪ್ರಕೃತಿಯ ನುಡಿಗಟ್ಟು. ಆದರೆ ಹಾಗೆ. ನೋಡಿದ್ದನ್ನೇ ನೋಡೋದು ದರ್ಶನವಲ್ಲ. ಅದು ಮೊದಲ ಸಲ ನೋಡಿದ್ದರ ಮುಂದುವರಿಕೆ ಅಷ್ಟೆ. ಮೊದಲಿನದೇ ಜಾಡು. ಪುನರಾವೃತ್ತಿ. ಅದು ಬೆಳೆಯುತ್ತಾ ಹೋಗುವ ಲಾಲಸೆ. ಹಸಿವು.
ಯಾರೂ ನಮ್ಮನ್ನು ಅರ್ಥಮಾಡಿಕೊಳ್ಳುವವರಿಲ್ಲ ಎಂದು ಅಲವತ್ತುಕೊಳ್ಳುತ್ತೇವಲ್ಲ, ಅರ್ಥಮಾಡಿಕೊಳ್ಳುವವರಿದ್ದರೆ(ಸರಿಯಾಗಿ)ಪಾಡು ಹೀಗಾಗುತ್ತದೆ. ನೋಡಿ! ನಮ್ಮನ್ನು ಇನ್ನೊಬ್ಬರು ಅರ್ಥಮಾಡಿಕೊಳ್ಳಬೇಕೆಂದು ನಾವು ಹಂಬಲಿಸುವುದೂ ನಾವು ಹೇಗೆ ಇದ್ದೆವೋ ಹಾಗೆ ಅರ್ಥಮಾಡಿಕೊಳ್ಳಬೇಕೆಂದಲ್ಲ. ಇನ್ನೊಬ್ಬರು ನಮ್ಮನ್ನು ಹೇಗೆ ತಿಳಿಯಬೇಕೆಂದು ಅಷ್ಟೆ. ಇಲ್ಲಿರೋದು ಸ್ವಾರ್ಥ. ಗುಟ್ಟೆಂದರೆ, ನಮ್ಮ ಮನಸ್ಸು ನಮಗೆಷ್ಟು ಗೊತ್ತೋ ಇನ್ನೊಬ್ಬರ ಮನಸ್ಪೂ ನಮಗೆ ಅಷ್ಟೇ- ಅಷ್ಟುಮಟ್ಟಿಗೆ ಮಾತ್ರ ಗೊತ್ತು. ಒಂದು ಗುಲಗಂಜಿ ತೂಕ ಹೆಚ್ಚಿಲ್ಲ. ಕಡಿಮೆ ಇಲ್ಲ ಆದುದರಿಂದಲೇ ಮತ್ತೊಬ್ಬ ಅರ್ಥವಾದ ಎಂದರೆ ನಮಗೆ ನಾವೇ ಅರ್ಥವಾದಂತೆ. ಇನ್ನೊಬ್ಬರ ಸಿಟ್ಟು ಸೆಡವು, ಬೇಸರ, ಮತ್ಸರ, ದ್ವೇಷ-ಇವೆಲ್ಲ ನಮಗೆ ಸಿಕ್ಕೋದು ಅವೆಲ್ಲ ನಮ್ಮಲ್ಲಿ ಇರೋದರಿಂದಲೇ...
ಸತ್ಯವನ್ನು ಸ್ವ-ತಂತ್ರ ಎನ್ನುತ್ತಾರೆ. ಅದರ ಸ್ವಾತಂತ್ರ್ಯ. ಅದು ನಮ್ಮನ್ನು ನಂಬಿದ್ದರಲ್ಲಿದೆ: ಎನ್ನಿಸುತ್ತದೆ. ನಾವು ಸ್ವಾತಂತ್ರ್ಯದ ಬಗೆಗೂ ಪ್ರಾಯಶಃ ತಪ್ಪು ತಿಳಿದಿದ್ದೇವೆ. ನಮ್ಮಲ್ಲಿ ನಮಗೆ ನಂಬಿಕೆ ಇರುವುದೆ ಸ್ವ-ತಂತ್ರ ಮನೋಧರ್ಮ ಎಂದುಕೊಂಡಿದ್ದೇವೆ. ಗುರುಗಳ ಬಾಳಿನಲ್ಲಿ ನಾನು ಕಂಡ ಸತ್ಯವೆಂದರೆ, ನಿಜಕ್ಕೂ ಸ್ವತಂತ್ರನಾದವನು ಮಾತ್ರ ಇನ್ನೊಬ್ಬನನ್ನು ಪರಿಪೂರ್ಣವಾಗಿ ನಂಬಬಲ್ಲ ಎಂದು: ನಿಜವಾಗಿ ನಂಬಬಲ್ಲ ಎಂದು...
Share
Subscribe to our emails
Subscribe to our mailing list for insider news, product launches, and more.