Dr. Gururaja Karajagi
ಬೆರಗಿನ ಬೆಳಕು - 3
ಬೆರಗಿನ ಬೆಳಕು - 3
Publisher - ವಸಂತ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 206
Type - Paperback
ಹಸ್ತಕ್ಕೆ ಬರೆ ನಕ್ಕೆ: ಓದುತ್ತ ಓದುತ್ತ
ಮಸ್ತಕಕ್ಕಿಟ್ಟು ಗಂಭೀರವಾದೆ ವಿಸ್ತರದ ದರ್ಶನಕೆ ತುತ್ತತುದಿಯಲಿ ನಿನ್ನ
ಪುಸ್ತಕಕೆ ಕೈಮುಗಿದೆ – ಮಂಕುತಿಮ್ಮ||
-ರಾಷ್ಟ್ರಕವಿ ಶ್ರೀಮಾನ್ ಕುವೆಂಪು
ಮನುಷ್ಯನ ಬದುಕಿನ ಎಲ್ಲ ಭಾವನೆಗಳಿಗೆ, ಸಮಸ್ಯೆಗಳಿಗೆ, ಚಿಂತನೆಗಳಿಗೆ ಸಂವಾದಿಯಾದ ಪದ್ಯ ಕಗ್ಗದಲ್ಲಿ ಇದ್ದೇ ಇದೆ. ನೀವು ಯಾವುದೇ ಮನಸ್ಥಿತಿಯಲ್ಲಿದ್ದರೂ, ಅದಕ್ಕೆ ಧ್ವನಿಪೂರ್ಣವಾದ ಚೌಪದಿಯೊಂದು ಅಲ್ಲಿ ಕಾಣುತ್ತದೆ. 945 ಚೌಪದಿಗಳ ಈ ಕೃತಿ ಒಂದು ರೀತಿಯಲ್ಲಿ ಆಕಾಶವಿದ್ದಂತೆ. ಆಕಾಶದಲ್ಲಿ ಏನಿಲ್ಲ? ಉರಿಯುವ ಸೂರ್ಯನಿದ್ದಾನೆ, ತಂಪನ್ನೆರೆಯುವ ಚಂದ್ರನಿದ್ದಾನೆ, ಕಣ್ಣು ಮಿಟುಕಿಸಿ ನಗುವ ತಾರೆಗಳಿವೆ. ಯಾವುದೂ ಇಲ್ಲದಾಗ ಭಯ ಹುಟ್ಟಿಸುವ ಕಗ್ಗತ್ತಲೆಯಿದೆ, ಧೂಮಕೇತುಗಳು, ಗ್ರಹಗಳು, ನೀಹಾರಿಕೆಗಳು, ಗ್ರಹವೊಂದು ಒಡೆದು ಚಿಮ್ಮಿದ ಕಲ್ಲುಗಳ ರಾಶಿಯ ಬಳೆಗಳು, ಎಲ್ಲ ತುಂಬಿವೆ. ಮುದ ನೀಡುವ, ಸಂತೈಸುವ, ಭಯಹುಟ್ಟಿಸುವ, ಕಾಪಿಡುವ ಸಕಲ ವಸ್ತುಗಳೂ ಅಲ್ಲಿವೆ. ಅಂತೆಯೇ, 'ಮಂಕುತಿಮ್ಮನ ಕಗ್ಗ' ದಲ್ಲಿ ನಿಮ್ಮ ಭಾವಿತಕ್ಕೊಪ್ಪುವ, ಮುದನೀಡುವ, ಚಿಂತನೆಗೆ ಹಚ್ಚುವ, ನಿರಾಸೆಯನ್ನು ತೊಡೆವ ಚೌಪದಿಗಳಿವೆ. ಹಾಗೆಂದೇ ಅದನ್ನು 'ಕನ್ನಡದ ಭಗವದ್ಗೀತೆ' ಎಂದು ಜನಸಮುದಾಯ ಒಪ್ಪಿಕೊಂಡಿದೆ.
Share
Subscribe to our emails
Subscribe to our mailing list for insider news, product launches, and more.