Ja. Na. Tejashree
Publisher -
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ತೇಜಶ್ರೀ ನನ್ನ ಓರಗೆಯ ಬರಹಗಾರ್ತಿ. ನಾನು ಮೆಚ್ಚುಗೆಯಿಂದ, ಅಸೂಯೆಯಿಂದ ನೋಡುವ ಕವಯಿತ್ರಿ ಈಗ ಕಥೆಗಳ ಮೂಲಕ ಓದುಗರೆದುರು ಹೊಸ ಪೋಷಾಕಿನಲ್ಲಿ ಪ್ರಕಟಗೊಳ್ಳುತ್ತಿರುವ ಅವರು 'ಬೆಳ್ಳಿಮೈ ಹುಳ'ದ ಮೂಲಕ - ಹೊಸ ಪ್ರಭೆಗಾಗಿ ಹಂಬಲಿಸುತ್ತಿರುವ ಕನ್ನಡ ಕಥಾಲೋಕಕ್ಕೆ ಹೊಸ ರಂಗೊಂದನ್ನು ಕೂಡಿಸಿದ್ದಾರೆ. ಓದುಗರಿಗಿಂತಲೂ ಬರೆಯುವವರೇ ಹೆಚ್ಚಿನ ಸಂಖ್ಯೆಯಲ್ಲಿರುವಂತೆ ಮೇಲ್ನೋಟಕ್ಕೆ ಕಾಣಿಸುವ ಕನ್ನಡ ಸಾಹಿತ್ಯ ಸಂದರ್ಭ ಸಂಖ್ಯಾದೃಷ್ಟಿಯಿಂದ ಸಮೃದ್ಧವಾಗಿದ್ದರೂ, ಆ ಉತ್ಸಾಹ ಬರವಣಿಗೆಯ ಅಸಲು ಕಸುಬುದಾರಿಕೆಯಲ್ಲಿ ಕಾಣಿಸದಿರುವುದು 'ಸಾಹಿತ್ಯದ ಉತ್ತಮಿಕೆ'ಯ ಬಗ್ಗೆ ಕಾಳಜಿಯುಳ್ಳವರನ್ನು ಆತಂಕಕ್ಕೀಡುಮಾಡುವಂತಹದ್ದು. ಇಂಥ ಸಂಕ್ರಮಣದ ಸಂದರ್ಭದಲ್ಲಿ ಪ್ರಕಟಗೊಂಡಿರುವ ತೇಜಶ್ರೀಯವರ ಕಥೆಗಳ ಶಿಲ್ಪದ ಅಚ್ಚುಕಟ್ಟುತನ ಮತ್ತು ಭಾಷೆಯ ಕುಸುರಿತನ, ಸೂಕ್ಷ್ಮ ಭಾವಲೋಕದೊಂದಿಗೆ ಮಿಳಿತಗೊಂಡಿರುವುದು ನನ್ನಂಥ ಓದುಗರಲ್ಲಿ ಸಂಭ್ರಮ ಹುಟ್ಟಿಸುವಂತಹದ್ದು,
ತಾನು ಹೇಳುವುದು ಓದುಗರಿಗೆ ಸುಲಭವಾಗಿ ಸಂವಹನಗೊಳ್ಳಬೇಕೆಂದು ಬಯಸುವ ಬಹುತೇಕ ಬರಹಗಾರರು, ಆ ಪ್ರಯತ್ನದಲ್ಲಿ ಜನಪ್ರಿಯತೆಯ ಸಿದ್ಧದಾರಿಯನ್ನು ಅನುಸರಿಸುತ್ತಾರೆ. ಕೆಲವು ಬರಹಗಾರರಷ್ಟೇ ತಮ್ಮದೇ ದಾರಿಯ ಹುಡುಕಾಟ ನಡೆಸುತ್ತ ಆ ಮಾರ್ಗದಲ್ಲಿ ಓದುಗರನ್ನೂ ಕರೆದೊಯ್ಯಲು ಪ್ರಯತ್ನಿಸುತ್ತಾರೆ. ಎರಡನೆಯ ಮಾರ್ಗವನ್ನು ಅನುಸರಿಸಲು ಬರಹಗಾರನಿಗೆ ತನ್ನ ಬರವಣಿಗೆಯ ಬಗ್ಗೆ ಅಪಾರ ಆತ್ಮವಿಶ್ವಾಸ ಬೇಕು. ಅಂಥ ಸಕಾರಣ ಆತ್ಮವಿಶ್ವಾಸವನ್ನು ತೇಜಶ್ರೀ ಅವರ ಕವಿತೆ-ಕಥೆ ಎರಡರಲ್ಲೂ ಕಂಡಿದ್ದೇನೆ.
-ರಘುನಾಥ್ ಚ. ಹ.