Kum. Veerabhadrappa
ಬೇಲಿಯ ಹೂಗಳು
ಬೇಲಿಯ ಹೂಗಳು
Publisher - ಹೇಮಂತ ಸಾಹಿತ್ಯ
Regular price
Rs. 90.00
Regular price
Rs. 90.00
Sale price
Rs. 90.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರಾದ ಕುಂ. ವೀರಭದ್ರಪ್ಪನವರು ಕನ್ನಡ ಸಾರಸ್ವತಲೋಕಕ್ಕೆ “ಕುಂ.ವೀ.' ಎಂದೇ ಪರಿಚಿತರು. ಇವರು ಕಾವ್ಯ, ಸಣ್ಣಕಥೆ, ಜೀವನಚರಿತ್ರೆ, ವಿಮರ್ಶೆ, ಅನುವಾದ, ಗ್ರಂಥ ಸಂಪಾದನಾ ಪ್ರಕಾರಗಳಲ್ಲಿ ಕೈಯಾಡಿಸಿದ್ದರೂ ಇವರು ಕಾದಂಬರಿಕಾರರೆಂದೇ ಪ್ರಸಿದ್ಧರಾಗಿದ್ದಾರೆ. ಕಪ್ಪು, ಬೇಲಿ ಮತ್ತು ಹೊಲ, ಆಸ್ತಿ, ಶಾಮಣ್ಣ, ಕೆಂಡದ ಮಳೆ, ದ್ಯಾವಲಾಪುರ, ಸೋಲೋ, ಬೇಲಿಯ ಹೂವುಗಳು ಕಾದಂಬರಿಗಳು. ಇವರ ಕಥೆಗಳು ಅಷ್ಟೇ ಜನಪ್ರಿಯವಾಗಿವೆ. ಇವರ 'ಕಪ್ಪು' ಕಾದಂಬರಿ ಮತ್ತು ಶಾಮಣ್ಣ ಕಾದಂಬರಿಗಳಿಗೆ ರಾಜ್ಯ_ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ. ಇತ್ತೀಚೆಗೆ ಇವರ 'ಅರಮನೆ' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ. ಇವರ ಮನಮೆಚ್ಚಿದ ಹುಡುಗಿ, ಕೆಂಡದ ಮಳೆ, ಕೊಟ್ರೇಶಿ ಕನಸು, ದೊರೆ, ಬೇಲಿ ಮತ್ತು ಹೊಲ ಚಲನಚಿತ್ರಗಳಾಗಿವೆ. 'ಕುಂವೀ'ಯವರ ಸಾಹಿತ್ಯದಲ್ಲಿ ಗ್ರಾಮೀಣ ಚಿತ್ರಣ ಗಾಢವಾಗಿದೆ. ಕನ್ನಡ ಭಾಷೆಯ ಸೊಗಸು, ಸೊಗಡು ಅವರ ಕೃತಿಗಳಲ್ಲಿ ಮಿಂಚುತ್ತದೆ. ಇತ್ತೀಚೆಗೆ ಅವರು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ಸಂಪೂರ್ಣ ಸಾಹಿತ್ಯ ಸೇವೆಗೆ ಬದುಕು ಅಣಿಗೊಳಿಸಿದ್ದಾರೆ.
-ಪ್ರಕಾಶಕರು
-ಪ್ರಕಾಶಕರು
Share
Subscribe to our emails
Subscribe to our mailing list for insider news, product launches, and more.