Skip to product information
1 of 2

Abhilash

ಬಿಫೋರ್ ಯು ಫಾಲ್

ಬಿಫೋರ್ ಯು ಫಾಲ್

Publisher -

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 130

Type - Paperback

ಬರವಣಿಗೆ ಎಂಬುದು ಒಂದು ಕಲೆ (an art), ಇದು ಎಲ್ಲರಿಗೂ ಸಿದ್ಧಿಸದು. ಅಂತಹದ್ದರಲ್ಲಿ ಈ ಕಲೆಯನ್ನು ಕರಗತ ಮಾಡಿಕೊಂಡ ಗ್ರಾಮೀಣ ಪ್ರತಿಭೆ ಅಭಿಲಾಷ್ 'ಜೀವ ಮತ್ತು ಜೀವನಕ್ಕೆ' ಒಂದು ಪುಟ್ಟ ಮಾರ್ಗದರ್ಶಿ ಸೂತ್ರದ ಕೃತಿಯನ್ನು ರಚಿಸಿದ್ದು ಪ್ರಶಂಸನೀಯ, ಪುಟ್ಟ ಪುಟ್ಟ ಅನುಭವ ಮತ್ತು ಕಥೆಗಳ ರೂಪದ ಈ ಕೃತಿ 'ಚಿಕ್ಕದು ಸುಂದರವಾದುದು' (small is beautiful) ಎಂಬ ರೂಪದಲ್ಲಿದೆ. ಪ್ರತಿಯೊಂದು ಮನಸು ಮತ್ತು ವಯಸ್ಸಿಗೆ ಸರಿಹೊಂದುವ ರೀತಿಯಲ್ಲಿ ತಿಳಿಯಾದ ಭಾಷೆ ಮತ್ತು ಆಕರ್ಶಕ ನಿರೂಪಣಾ ಶೈಲಿಯಲ್ಲಿ ರೂಪುಗೊಂಡಿರುವುದು ಈ ಪುಟ್ಟ ಕೃತಿಯ ಹೆಗ್ಗಳಿಕೆ. 'ಜಾಗತೀಕರಣ' ಎಂಬ ಬಿರುಗಾಳಿಯ ಈ ಪೈಪೋಟಿಯುಕ್ತ ಯುಗದಲ್ಲಿ ಹಣಕಾಸಿನ ನಿರ್ವಹಣೆ ಸವಾಲಿನಂತಹುದು. ಪ್ರತೀ ವ್ಯಕ್ತಿಯ ಅಳಿವು ಅಥವಾ ಉಳಿವು ಅವರವರ ನಿರ್ಧಾರಗಳನ್ನು ಅವಲಂಬಿಸಿರುತ್ತವೆ. 'ಯೋಚಿಸಿ ಮುಂದಡಿಯಿಡು ಮತ್ತು ಸರಿಯಾಗಿ ಯೋಜಿಸು' ಎಂಬುದು ಈ ಕೃತಿಯ ತಿರುಳು, ಈ ಕೃತಿಯು ಎಲ್ಲಾ ವಯಸ್ಸಿನವರಿಗೂ ಉಪಯುಕ್ತ. ಅದರಲ್ಲೂ ಭವಿಷ್ಯವನ್ನು ಅರಸಿ ಅಂಬೆಗಾಲನ್ನಿಡುತ್ತಾ, ಕೆಲವೊಮ್ಮೆ ಓಡುತ್ತಾ, ಕೆಲವೊಮ್ಮೆ ಮುಗ್ಗರಿಸುತ್ತಾ ಹಾಗೂ ಮಗದೊಮ್ಮೆ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾ ಸಾಗುತ್ತಿರುವ ಇಂದಿನ ಯುವ ಕಣ್ಮಣಿಗಳಿಗೆ ತಮ್ಮ ಭವಿಷ್ಯದ ದಿನಗಳನ್ನು ಸರಿಯಾಗಿ ಯೋಜಿಸಲು ಈ ಕೃತಿ ಅತ್ಯುಪಯುಕ್ತ, ಇಂತಹಾ ಅದ್ವಿತೀಯ ಮತ್ತು ಮಹತ್ವಾಕಾಂಕ್ಷಿ ಕೃತಿಯನ್ನು ಎಳೆವಯಸ್ಸಿನಲ್ಲೇ ರಚಿಸಿದ 'ಅಭಿ' ನಿಜಕ್ಕೂ ಅಭಿನಂದನಾರ್ಹ.

ಡಾ. ಎಚ್.ಆರ್ ಕೃಷ್ಣಮೂರ್ತಿ (ಎಚ್ಚಾರ್ಕೆ)

ವಿಶ್ರಾಂತ ಪಾಂಶುಪಾಲರು

ಖ್ಯಾತ ಅರ್ಥಶಾಸ್ತ್ರ ಬರಹಗಾರರು

ನ್ಯಾಷನಲ್ ಕಾಲೇಜು, ಬಸವನಗುಡಿ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)