Skip to product information
1 of 1

M. Chidananda Murthy

ಬಸವಣ್ಣನವರು

ಬಸವಣ್ಣನವರು

Publisher -

Regular price Rs. 75.00
Regular price Rs. 75.00 Sale price Rs. 75.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಕರ್ನಾಟಕದಲ್ಲಿ ಜನ್ಮ ತಾಳಿದ ಮಹಾನ್ ರತ್ನಗಳ ಪೈಕಿ ಬಸವಣ್ಣನವರು ಪ್ರಮುಖರಾಗಿದ್ದಾರೆ. 12ನೇ ಶತಮಾನದಲ್ಲಿ ಜನಿಸಿದ ಅವರು ಆ ಶತಮಾನದ ಧೀಮಂತ ಧಾರ್ಮಿಕ ಹೋರಾಟಗಾರರಾಗಿ ಬೆಳಗಿದರು. ಜೀವನದಲ್ಲಿ ಬಳಲಿದ್ದ ಶ್ರೀಸಾಮಾನ್ಯನಿಗೆ ದಾರಿದೀಪವಾಗಿ ಅವನ ಪಾರಮಾರ್ಥಿಕ ಜೀವನದ ದಾರಿಯನ್ನು ಸುಗಮ ಮಾಡಿಸಿದರು. ಪರಮಾತ್ಮನಾದ ಶಿವನು ಬೇರೆಲ್ಲೂ ಇಲ್ಲದೆ ನಮ್ಮೊಳಗಡೆಯೇ ಇದ್ದಾನೆಂಬುದನ್ನು ಅವರು ತೋರಿಸಿಕೊಟ್ಟರು. ಕ್ಲಿಷ್ಟವಾದ ಪಾರಮಾರ್ಥಿಕ ಮಾರ್ಗವನ್ನು ಆಡುಭಾಷೆಯ ತಮ್ಮ ವಚನಗಳ ಮೂಲಕ ಸರಳಗೊಳಿಸಿದರು. ಬಸವಣ್ಣನವರು ಹಾಗೂ ಅನುಯಾಯಿಗಳು ರಚಿಸಿದ ವಚನಗಳು ಕನ್ನಡ ಸಾಹಿತ್ಯವನ್ನೂ ಸಹ ಶ್ರೀಮಂತಗೊಳಿಸಿದವು: ವೀರಶೈವರಿಗೆ ಪ್ರವಾದಿಗಳೂ ಸಮಾಜ ಶಾಸ್ತ್ರಜ್ಞರಿಗೆ ಸುಧಾರಕರೂ ಮತ್ತು ಕ್ರಾಂತಿಕಾರರೂ ಆಗಿದ್ದ ಬಸವಣ್ಣನವರ ಜೀವನ ಮತ್ತು ಸಾಧನೆಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಎಂ. ಚಿದಾನಂದಮೂರ್ತಿ ಅವರು ಈ ಪುಸ್ತಕದ ಲೇಖಕರು. ಕನ್ನಡ ಸಾಹಿತ್ಯ, ಭಾಷೆ, ಧರ್ಮ ಇತ್ಯಾದಿ ವಿಷಯಗಳ ಬಗ್ಗೆ ಅವರು ಹಲವು ಪುಸ್ತಕಗಳನ್ನೂ ಅನೇಕ ಸಂಶೋಧನಾ ಪ್ರಬಂಧಗಳನ್ನೂ ಬರೆದಿದ್ದಾರೆ. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)