Gayathri Raj
ಬಣ್ಣದ ಜೋಳಿಗೆ
ಬಣ್ಣದ ಜೋಳಿಗೆ
Publisher - ಸ್ನೇಹ ಬುಕ್ ಹೌಸ್
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಗಾಯತ್ರಿ ರಾಜ್ ರವರ 'ಬಣ್ಣದ ಜೋಳಿಗೆ' ವಿಭಿನ್ನವಾದ 15 ಸಣ್ಣ ಕಥೆಗಳಿಂದ ತುಂಬಿದೆ. ಪ್ರೀತಿ, ಪ್ರೇಮ, ಪ್ರಣಯ, ಸರಸ, ದ್ವೇಷ, ಕಾತುರ, ವಿಜ್ಞಾನ, ಮನೋವಿಜ್ಞಾನ, ಎಲ್ಲವೂ ಇವೆ. ಅಕ್ಕಪಕ್ಕದಲ್ಲೇ ನಡೆಯಬಹುದಾದಂತಹ ನಮ್ಮದೇ ಕಥೆಗಳೆಂಬಂತೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಪ್ರಪಂಚದ ಅತ್ಯಂತ ಗಂಭೀರವಾದ, ಎಲ್ಲೆಲ್ಲೂ ಮುಕ್ತವಾಗಿ ಚರ್ಚಿಸಲ್ಪಡದ ಸಲಿಂಗ ಕಾಮದಂತಹ ವಿಷಯವೂ ಅತ್ಯಂತ ಸಹಜ ರೀತಿಯಲ್ಲಿ ಚರ್ಚಿಸಲ್ಪಡುತ್ತಾ. ಕೊನೆಯಲ್ಲಿ ನಮ್ಮನ್ನೇ ಚಿಂತನೆಗೆ ದೂಡಿಬಿಡುತ್ತವೆ. ಕನ್ನಡದ ಯಾವುದೇ ಲೇಖಕಿ ಬಿಡು ಬೀಸಾಗಿ ಸಲಿಂಗ ಕಾಮದ ಬಗ್ಗೆ ಬರೆದದ್ದು ನನಗೆ ನೆನಪಿಲ್ಲ. ಸ್ತ್ರೀ ಸಹಜವಾಗಿ ಪ್ರೀತಿ, ಮಮತೆಗಳ ಪ್ರಧಾನತೆ ಇರುವ ಕಥೆಗಳು ಹೃದಯವನ್ನು ಹಿಂಡುತ್ತವೆ. ಪ್ರತಿಯೊಂದು ಕಥೆಯಲ್ಲೂ ರೋಚಕತೆ ಹಾಗೂ ಸಸ್ಪೆನ್ಸ್ ಇರುವುದು ಲೇಖಕರು ಬರವಣಿಗೆಯಲ್ಲಿ ಎಷ್ಟು ಪ್ಯಾಶನೇಟ್ ಆಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಒಟ್ಟಿನಲ್ಲಿ ಕಥೆಗಳು ಎಲ್ಲೂ ಎಳೆಯದೆ, ಮುಗ್ಗರಿಸದೆ, ಸರಾಗವಾಗಿ ಓದಿಸಿಕೊಂಡು ಹೋಗುವುದರಿಂದ ನಿಮ್ಮ ಪ್ರಯಾಣಕ್ಕೆ ಅತ್ಯುತ್ತಮ ಸಂಗಾತಿ ಆಗಬಲ್ಲದು. ನಿಮ್ಮ ಬೇಸರವನ್ನು ಮ್ಯಾಜಿಕ್‌ನಂತೆ ಮಾಯಮಾಡಬಲ್ಲದು ಎಂದು ನಾನು ನಿಮ್ಮ ಗಾರುಡಿಗ ಗ್ಯಾರಂಟಿ ಕೊಡುತ್ತೇನೆ.
-ಉದಯ್ ಜಾದೂಗಾರ್
ಸ್ನೇಹ ಬುಕ್ ಹೌಸ್
Share

Subscribe to our emails
Subscribe to our mailing list for insider news, product launches, and more.