Ganesha P. Nadora
ಬಣ್ಣ
ಬಣ್ಣ
Publisher - ನವಕರ್ನಾಟಕ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 64
Type - Paperback
ಮಕ್ಕಳ ಪ್ರಪಂಚವೆಂದರೆ ಬಣ್ಣ ಬಣ್ಣದ ರಮ್ಯಲೋಕ, ಅವರಿಗೆ ಇರುವ ಸಣ್ಣ ಸಣ್ಣ ಆಸೆ ಆಕಾಂಕ್ಷೆಗಳು ದೊಡ್ಡವರ ದೃಷ್ಟಿಯಲ್ಲಿ ಕೆಲವೊಮ್ಮೆ ನಗಣ್ಯವೆನಿಸಿದರೂ ಮಕ್ಕಳಿಗೆ ಮಾತ್ರ ಅವು ಈಡೇರಿದಾಗ ಆಗುವ ಆನಂದ ಅಷ್ಟಿಷ್ಟಲ್ಲ. ಇಲ್ಲಿನ ಕಥೆಗಳೆಲ್ಲ ಮಕ್ಕಳು ಬಯಸಿದ್ದೆಲ್ಲ ಸುಲಭವಾಗಿ ಸಿಗದಿರುವ ಬಡ ಕುಟುಂಬಗಳ ಕಥೆಗಳೇ ಆಗಿದ್ದರೂ ಮಕ್ಕಳ ಜಾಣತನಕ್ಕೇನೂ ಬಡತನವಿದ್ದಂತಿಲ್ಲ. ದೊಡ್ಡವರ ವಿವೇಚನಾರಹಿತ ನಿರ್ಧಾರಗಳಿಗೆ ಕೆಲವೊಮ್ಮೆ ಜಾಣ ಮಕ್ಕಳೇ ಪಾಠ ಕಲಿಸಬಲ್ಲರು. ಜಗಳ ಆಡದೆ ಸ್ನೇಹಿತರಂತಿದ್ದು ಹಂಚಿ ತಿನ್ನುವ ಸದ್ವರ್ತನೆಯನ್ನು ಕಲಿಸಬಲ್ಲ ತಾಯಿಯೊಬ್ಬಳು “ಕಪ್ಪೆ ಮರಿಯ ಸ್ನೇಹ” ಕಥೆಯಲ್ಲಿದ್ದಾಳೆ. ಮಕ್ಕಳಿಗೂ ಹಿರಿಯರಿಗೂ ಆದರ್ಶಗಳನ್ನು ಕಲಿಸಬಲ್ಲ ಕಥೆಗಳಿವು.
ಕೃತಿಯ ಲೇಖಕ ಶ್ರೀ ಗಣೇಶ ಪಿ. ನಾಡೋರ ಮಕ್ಕಳಿಗಾಗಿ ಹಲವು ವರ್ಷಗಳಿಂದಲೂ ಬರೆಯುತ್ತ ಬಂದವರು. ಹೇಳಬೇಕಾದ್ದನ್ನು ಸಾಕಷ್ಟು ಸರಳವಾಗಿ ಹೇಳುವುದು ಇವರ ವೈಶಿಷ್ಟ್ಯ ನವಕರ್ನಾಟಕ ಪ್ರಕಟಿಸಿದ ಇವರ 'ಬೆಳ್ಳಕ್ಕಿ ಮತ್ತು ಬುಲ್‌ಬುಲ್' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಪ್ರಶಸ್ತಿ; 'ಪ್ರಾಣಿಗಳ್ಳರು ಮತ್ತು ಮಯೂರ' ಕೃತಿಗೆ ಬಿ.ಎಂ.ಶ್ರೀ. ಪ್ರತಿಷ್ಠಾನದ ಸಾವಿತ್ರಮ್ಮ ದತ್ತಿ ಮಕ್ಕಳ ಪ್ರಶಸ್ತಿ ಲಭಿಸಿದೆ. ಇವರ 'ಸಾಧನೆ', 'ಹಾರುವ ಬಯಕೆ' ಮುಂತಾದ ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
Share
Subscribe to our emails
Subscribe to our mailing list for insider news, product launches, and more.