Skip to product information
1 of 1

M. S. Vijaya Haran

ಬಲ್ಲವರು ಬಲ್ಲಂತೆ ಭೈರಪ್ಪ

ಬಲ್ಲವರು ಬಲ್ಲಂತೆ ಭೈರಪ್ಪ

Publisher - ಸಾಹಿತ್ಯ ಭಂಡಾರ

Regular price Rs. 320.00
Regular price Rs. 320.00 Sale price Rs. 320.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಇಂದು ಡಾ| ಎಸ್.ಎಲ್. ಭೈರಪ್ಪನವರು ಬರಿಯ ಕನ್ನಡದ ಮಟ್ಟಿಗಲ್ಲದೆ ಭಾರತದ ಎಲ್ಲ ಪ್ರಮುಖಭಾಷೆಗಳಿಗೂ ಹೆಚ್ಚಿನ ಜಗತ್ತಿಗೆ ಸಂಪರ್ಕಭಾಷೆಯಾದ ಇಂಗ್ಲಿಷಿಗೂ ಆಪ್ತರಾದ ಲೇಖಕರೆನಿಸಿದ್ದಾರೆ. ವಸ್ತುತಃ ಇವರು ತಮ್ಮ ಸಾಹಿತ್ಯವ್ಯಕ್ತಿತ್ವಗಳ ಸತ್ತ್ವದ ಮೂಲಕ ವಿಶ್ವಮೌಲ್ಯವನ್ನು ಎಂದೋ ಮೈದುಂಬಿಸಿಕೊಂಡಿದ್ದಾರೆ. ಇದು ವಿಶೇಷತಃ ಕನ್ನಡಿಗರಾದ ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ.

ಇಂಥ ಸಾರಸ್ವತಮೂರ್ತಿಯನ್ನು ಬಹುಕಾಲದಿಂದ ಆಪ್ತವಾಗಿ ಬಲ್ಲ ಅನೇಕರ ಅನುಭವಗಳೂ ಆತ್ಮೀಯತೆಗಳೂ ಆಸಕ್ತರಿಗೆ ಮುಟ್ಟಿಲ್ಲವೆಂಬ ಕೊರತೆಯನ್ನು ಕಳೆಯುವ ನಿಟ್ಟಿನಲ್ಲಿ ಸದ್ಯದ ಗ್ರಂಥ 'ಬಲ್ಲವರು ಬಲ್ಲಂತೆ ಭೈರಪ್ಪ' ಮಹತ್ತ್ವದ್ದೆನಿಸಿದೆ.

ಇಲ್ಲಿ ಭೈರಪ್ಪನವರನ್ನು ಹಲವು ಮಜಲುಗಳಲ್ಲಿ ನೋಡಿ, ಒಡನಾಡಿ, ಮಾತನಾಡಿ, ಸ್ನೇಹಾದರಗಳನ್ನು ತುಂಬಿಕೊಂಡ ಸಾಹಿತ್ಯಸಾಧಕರ, ಸಂವೇದನಶೀಲ ಸಹೃದಯರ ಅನಿಸಿಕೆ ಅಭಿಪ್ರಾಯಗಳು ಬೆಚ್ಚಗಿನ ಪ್ರೀತಿ-ವಿಶ್ವಾಸಗಳ ತೆಕ್ಕೆಯಲ್ಲಿ ರೂಪುಗೊಂಡಿವೆ. ಹಾಗೆಂದಮಾತ್ರಕ್ಕೆ ಇಲ್ಲಿರುವುದು ಬರಿಯ ಅಂಧ ಆರಾಧನೆಯಲ್ಲ. ಮುಗ್ಧವಾದ ಮೆಚ್ಚುಗೆಯಲ್ಲ. ಇದು ಅಕ್ಕರೆ ಬಾಧ್ಯತೆಯುಳ್ಳ ಎಚ್ಚರದ ಅಕ್ಷರಾಭಿವ್ಯಕ್ತಿಯೂ ಹೌದು.

ಈ ವರೆಗೆ ಅಷ್ಟಾಗಿ ತಿಳಿದಿರದ - ಆದರೆ ತಿಳಿಯಲು ಬಯಸುವ - ಭೈರಪ್ಪನವರ ಆರ್ದ್ರವೂ ಆತ್ಮೀಯವೂ ಆದ ಸಾಹಿತ್ಯೇತರ ಮುಖಗಳನ್ನು ಪರಿಚಯ ಮಾಡಿಕೊಳ್ಳುವ ಸುಸಂದರ್ಭ ಒದಗಿದೆ. ಹೀಗಾಗಿ ಸದ್ಯದ ಕೃತಿಗೆ ತನ್ನದೇ ಆದ ವಿಶಿಷ್ಟ ಸ್ಥಾನ ದಕ್ಕಿದೆ. ಜೊತೆಗೆ ಅಕ್ಷರಲೋಕದಲ್ಲಿ ಮಾತ್ರವಲ್ಲದೆ ಆತ್ಮೀಯತೆಯ ವಿಶ್ವದಲ್ಲಿ ಕೂಡ ಭೈರಪ್ಪನವರು ಅಸಾಮಾನ್ಯರೆಂಬ ಸುಂದರವಾದ ಸತ್ಯ ಕೂಡ ಇಲ್ಲಿ ಅನಾವರಣಗೊಂಡಿದೆ.

ಈ ಹೊತ್ತಿಗೆಯು ಭೈರಪ್ಪನವರ ತೊಂಬತ್ತು ವಸಂತಗಳನ್ನು ಪೂರೈಸಿದ ಸವಿನೆನಪಿಗಾಗಿ ಅವರಿಗೆ ಸಾಹಿತ್ಯಲೋಕ ಆದರದಿಂದ ಅರ್ಪಿಸಿದ ನಲ್ಮೆಯ ನುಡಿಗಾಣಿಕೆ.

-ಸಾಹಿತ್ಯ ಭಂಡಾರ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)