Goruru Ramaswamy Iyengar
ಬೈಲಹಳ್ಳಿ ಸರ್ವೆ
ಬೈಲಹಳ್ಳಿ ಸರ್ವೆ
Publisher - ಐಬಿಹೆಚ್ ಪ್ರಕಾಶನ
- Free Shipping Above ₹250
- Cash on Delivery (COD) Available
Pages -
Type -
.ಬೈಲಹಳ್ಳಿ ಸರ್ವೆಯಲ್ಲಿ ಶ್ರೀ ಅಯ್ಯಂಗಾರ್ಯರು ಈ ಅಂಶಗಳನ್ನು ಮನೋಜ್ಞವಾಗಿ ವಿವರಿಸಿದ್ದಾರೆ. ಬರೆದಿರುವುದು ಪ್ರಬಂಧವಲ್ಲ ; ಅನುಭವ ವಿವರಣೆ. ಹೇಳಿರುವುದು ಕತೆಯಲ್ಲ ; ಸಹಜಸ್ಥಿತಿ, ಅನುಭವ ರಸಾಯನ ಹಳ್ಳಿಯವರ ಜೀವನದಲ್ಲಿರುವ ಜೀವ ಪರಿಚಯ ಮಾಡಿಕೊಡುತ್ತಿದೆ ಬೈಲಹಳ್ಳಿ ಸರ್ವೆ. ಹಳ್ಳಿಯವರೊಡನೆ ಬೆರೆತು ಅವರ ಜೀವನದ ಗತಿಯರಿಯಲು ದುಡಿಯುವ ಮಹನೀಯರು ಪದಗಳಿಗಾಗಿ ಸಂಕಟಪಡಬೇಕಾದುದಿಲ್ಲ. ಶ್ರೀ ಅಯ್ಯಂಗಾರ್ಯರ ಈ ಗ್ರಂಥವೇ ಉದಾಹರಣೆ. ಇಂತಹ ಗ್ರಂಥಗಳಿಂದ ಪಾರಿಭಾಷಿಕ ಮತ್ತು ಪಠ್ಯಾಯ ಪದಗಳಿಗೆ ನಮ್ಮವರು ಪಡುತ್ತಿರುವ ತೊಂದರೆಯೂ ಬಹಳ ಮಟ್ಟಿಗೆ ನಿವಾರಣೆಯಾಗುತ್ತದೆ.
ಶ್ರೀ ಅಯ್ಯಂಗಾರ್ಯರು ತಾವು ಕೈಕೊಂಡ ಕೆಲಸವನ್ನು ಎಷ್ಟು ದಕ್ಷತೆಯಿಂದ ಚತುರತೆಯಿಂದ ನಿರ್ವಹಿಸಬಲ್ಲರೆಂಬುದಕ್ಕೆ ಈ ಹೊತ್ತಿಗೆಯೇ ಸಾಕ್ಷಿ. ಹಳ್ಳಿಯ ಜೀವನದಲ್ಲಿ ಅವರು ಕಂಡಿರುವ ಉಜ್ವಲ ಬೆಳಕು ಸಾಹಿತಿಗಳ ಜೀವನ ಕನ್ನಡ ಸಂಸ್ಕೃತಿ ಸ್ವರೂಪವನ್ನು ಸಂದರ್ಶಿಸಲು ತವಕಪಡುತ್ತಿರುವವರಿಗೆ ಅಮರಜ್ಯೋತಿ.
- ತಿರುಮಲೆ ತಾತಾಚಾರ್ಯ ಶರ್ಮ
'ಬೈಲಹಳ್ಳಿ ಸರ್ವೆ'ಯು ಹಳ್ಳಿಗರ ಸಂಸ್ಕೃತಿಯ ಕೈಪಿಡಿಯಾಗಿದೆ. ಗೊರೂರರ ಗ್ರಂಥಗಳಲ್ಲಿ ಚಿತ್ರಿತವಾದ ಹಳ್ಳಿಗರ ಭಾವ, ಭಾಷೆ, ವಿಚಾರ, ನಂಬಿಕೆ ಅನುಭವಗಳೂ ಹಾಗೂ ಸ್ವಭಾವ ನಿರೂಪಣ, ಹಾಸ್ಯದ ಬುಗ್ಗೆ ಇವುಗಳೂ ಆಧುನಿಕ ಕನ್ನಡ ಸಾಹಿತ್ಯಕ್ಕೆ ಉತ್ತಮ ಕಾಣಿಕೆಗಳಾಗಿವೆ.
-ಸ.ಸ. ಮಾಳವಾಡ
Share
ಹಳ್ಳಿ ಮತ್ತು ಹಳ್ಳಿ ಜನರ ಜೀವನ ಅಲ್ಲಿನ ಬದುಕು ಎಲ್ಲವನ್ನು ಸೊಗಸಾಗಿ ಕಟ್ಟಿದ್ದಾರೆ ಗೊರೂರು ಅವರು ..ಅವರ ಎಲ್ಲ ಪುಸ್ತಕದಲ್ಲೂ ಹಳ್ಳಿಯ ಜೀವನ ಕಾಣಬಹುದು
Subscribe to our emails
Subscribe to our mailing list for insider news, product launches, and more.