Veerakaputra Shreenivasa
ಬದುಕೇ ಥ್ಯಾಂಕ್ಯೂ
ಬದುಕೇ ಥ್ಯಾಂಕ್ಯೂ
Publisher - ವೀರಲೋಕ ಬುಕ್ಸ್
- Free Shipping Above ₹250
- Cash on Delivery (COD) Available
Pages - 183
Type - Paperback
ಎತ್ತರದ 'ಕನಸು'ಗಳ ಕಟ್ಟಬಯಸುವ ಜೀವ. ಆ ಕನಸುಗಳತ್ತ ನಡೆವ ಹಾದಿಯಲ್ಲಿ ಎದುರಾಗುವ ಅಡ್ಡಗೋಡೆಗಳು ಇರುವುದೇ ಹಾರಲು, ದಾಟಲು ಎಂಬ ಉತ್ಸುಕತೆಯ ಚಿಲುಮೆ, ಹಾದುಬಂದ ಮುಳ್ಳಪೊದೆಗಳು ಕೆರೆದ ರಕ್ತದಗಾಯ ಮರೆತು ಅವು ಬಿರಿದಿದ್ದ ಹೂಗಳ ಘಮಲನ್ನು ಮಾತ್ರವೇ ನೆನಪಿಸಿಕೊಳ್ಳುವ ಧನಾತ್ಮಕ ಭಾವ. ಸಂಪರ್ಕಕ್ಕೆ ಬಂದವರಿಗೆಲ್ಲಾ ತನ್ನಲ್ಲಿನ ಎಂದೂ ಬತ್ತದ ಹುರುಪಿನ ಹುಚ್ಚನ್ನು ಹಚ್ಚುವ 'ಪಿಚ್ಚಿಗಾಡು', ಪ್ರೀತಿಗೆ ಮಂಡಿಯೂರಿ, ಅದರ 'ನದಿ'ಯಲ್ಲಿ ಸಾಗುವ ದೋಣಿಗ. ಇಂತಹ ಜೀವವೊಂದು ಬದುಕಿ ಬಂದ ಹಾದಿಯನ್ನು ಅತೀ ಸರಳ ಮಾತುಗಳಲ್ಲಿ ಹಂಚಿಕೊಂಡರೆ? ಆ ಬದುಕಲ್ಲಿ ಸುರಿದ ಸುರಿಮಳೆಯ ಸೊಗಸನ್ನೂ ಬಿಸಿಲಬೇಗೆಯಲ್ಲಿನ ದಾಹವನ್ನೂ, ಚಳಿಯಾದಾಗ ಸಿಕ್ಕ ಅಪ್ಪುಗೆಯ ಆನಂದವನ್ನೂ, ಮುಚ್ಚುಮರೆಯಿಲ್ಲದೆ ತೆರೆದಿಟ್ಟರೆ? ಆ ಮೂಲಕ ತನ್ನ ಅಂತರ್ಯವನ್ನು ಬಿಚ್ಚಿಟ್ಟರೆ? ಆಗ ನಮಗೆ ಸಿಗುವುದೇ 'ಬದುಕೇ ಥ್ಯಾಂಕ್ಯೂ'
-ಡಾ. ಕೆ.ಎನ್ ಗಣೇಶಯ್ಯ
ವೀರಕಪುತ್ರ ಶ್ರೀನಿವಾಸ್ ಬರಹಗಳು ಆ ಕ್ಷಣದ ಸತ್ಯಗಳಂತೆ ಹೊಳೆಯುತ್ತವೆ. ಅವರು ತಮಗಿಷ್ಟವಾದದ್ದನ್ನು ಥಟ್ಟನೆ ಒಪ್ಪಿಕೊಳ್ಳುತ್ತಾರೆ. ಮೆಚ್ಚಿಕೊಳ್ಳುತ್ತಾರೆ. ಹೇಗೆ ಬದುಕಬೇಕು ಅನ್ನುವುದನ್ನು ಅವರಿಗೆ ಬದುಕೇ ಕಲಿಸಿದಂತೆ ತೋರುತ್ತದೆ. ಹೀಗಾಗಿಯೇ ಬರಹಗಳಲ್ಲಿ ನಿರುದ್ದಿಶ್ಯ ಪ್ರಾಮಾಣಿಕತೆ ಮತ್ತು ಅಕಾರಣ ಅಕ್ಕರೆ ತುಂಬಿಕೊಂಡಿವೆ. ಜೀವನ ಪ್ರೀತಿ, ಸಮಾಧಾನ, ಎಚ್ಚರಿಕೆ, ಅಂತರ್ಶೋಧ, ಆತ್ಮನಿರೀಕ್ಷೆ, ತುಂಟಾಟ-ಎಲ್ಲವೂ ಸೇರಿವೆ. ಆದ್ದರಿಂದಲೇ ಜೀವನವನ್ನು ಬಹುವಾಗಿ ಪ್ರೀತಿಸುವ ನಿರ್ಮಲ ಮನಸ್ಸಿನ ನಿರಾತಂಕ ಲಹರಿಗಳಂತೆ ಓದಿಸಿಕೊಳ್ಳುತ್ತವೆ. ಎಲ್ಲಿಯೂ ನಮ್ಮನ್ನು ಕಂಗೆಡಿಸುವುದಿಲ್ಲ. ಬದುಕು. ಪ್ರವಾಸ ಮತ್ತು ಥಟ್ಟನೆ ಹೊಳೆದ ಸಂಗತಿಗಳು-ಹೀಗೆ ಮೂರು ವಿಭಾಗದಲ್ಲಿರುವ ಬರಹಗಳನ್ನು ಈಗಷ್ಟೇ ತಾರುಣ್ಯಕ್ಕೆ ಕಾಲಿಡುತ್ತಿರುವವರು ಓದಬೇಕು. ಇವು ಅವರ ಬದುಕನ್ನು ಮತ್ತಷ್ಟು ಚೆಂದಗೊಳಿಸಿಕೊಳ್ಳಲು ನೆರವಾಗಬಲ್ಲವು.
-ಜೋಗಿ
Share
Subscribe to our emails
Subscribe to our mailing list for insider news, product launches, and more.