Lakshmeesha Tholpadi
ಬಾಳು
ಬಾಳು
Publisher - ಅಭಿನವ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 84
Type - Paperback
ಉಪನಿಷತ್ತು' ಎಂದರೆ ಸರಳವಾಗಿ-ಹತ್ತಿರ ಕುಳಿತಿರುವುದು ಎಂದು. ಹತ್ತಿರ ಇರುವಿಕೆ. 'ಇರುವಿಕೆ'ಯ ಹತ್ತಿರ. ಮೊಟ್ಟೆಯ ಮೇಲೆ ಹಕ್ಕಿ ಕಾವು ಕೂತಂತೆ. ಒಡಲೊಳಗಿನ ಮಗು ತಾಯಿಗೆ ಹತ್ತಿರ ಮತ್ತು ತಾಯಿ, ಮಗುವಿಗೆ ಹತ್ತಿರವಾಗಿರುವಂತೆ. ಉಪನಿಷತ್ತು ಆಧ್ಯಾತ್ಮಿಕ ವಾಹ್ಮಯವಾಗಿರುವುದರಿಂದ, ಬದುಕಿನ ಆಳವಾದ 'ಸತ್ಯ'ದ ಹತ್ತಿರ ಕೂರುವುದು – ಅದರ ಜೊತೆಗೇ ಇರುವುದು - ಎಂದು. 'ಸತ್ಯ' ಎಂದರೆ ಇರುವಿಕೆ ಎಂದೇ ಅರ್ಥ. 'ಇರುವಿಕೆ'ಗೆ ಅದರ ಹತ್ತಿರ ಇರುವುದಲ್ಲದೆ ಬೇರಿನ್ನಾವ ಕಲಾಪಗಳೂ ಪ್ರಸ್ತುತವಲ್ಲ.
ಉಪನಿಷತ್ತಿನಲ್ಲಿ ಮೇಲ್ನೋಟಕ್ಕೆ ಒಂದು ಕಥೆ ಇದೆ. ಅದೊಂದು ಸಂದರ್ಭ ಸೂಚನೆ. ಅನುಗುಣವಾಗಿ ಕೆಲವು ಮಾತುಕತೆಗಳ ವಿವರಗಳು. ಈ ಮಾತುಕತೆಗಳಾದರೂ ಸಮಗ್ರವಾಗಿ ಪ್ರತಿಯೊಂದು ಹೆಜ್ಜೆಯನ್ನೂ ಚಿತ್ರಿಸುವಂತೆ ಇಲ್ಲ. ನಡುವೆ ನಾವು ಊಹಿಸಿಕೊಳ್ಳಬೇಕಾದ ಅನೇಕ ಸಂಗತಿಗಳಿರುತ್ತವೆ. ಎರಡು ಮನಸ್ಸುಗಳು ಸೇರಿದಾಗ ಎಷ್ಟು ಮಾತು, ಎಷ್ಟು ಮಾತಿಲ್ಲದೆ ಅರ್ಥವಾಗುವಂಥವು, ಮಾತುಗಳ ಅರ್ಥಗಳಾದರೂ ಎಷ್ಟು ಬೇರೆ ಬೇರೆ ಕಡೆ ಚಾಚುವಂಥವು- ಇವೆಲ್ಲ ಸಂಭವಗಳೂ ಇರುತ್ತವೆ. ಈ ಎಲ್ಲ ಸಂಭವಗಳ ನಡುವೆ ಸವಾಲು- ಆತಂಕಗಳ ನಡುವೆ ಉಪನಿಷತ್ತುಗಳನ್ನು ಓದುವುದೇ ಒಂದು ಸಂಭ್ರಮವೂ ಅಲ್ಲವೆ ! ಸಾವಿನ ಆಚೆಗೆ ಏನಿದೆ ಎಂಬ ಪ್ರಶ್ನೆ ಲೋಕವೇ ಬೆಚ್ಚುವಂತೆ ಮಾಡಬಲ್ಲ ಪ್ರಶ್ನೆಯಾಗಿದೆ! ಈ ಪ್ರಶ್ನೆಯನ್ನೆತ್ತಿಕೊಳ್ಳದೆ ಉಪನಿಷತ್ತು ವಿರಮಿಸುವಂತಿಲ್ಲ.
ಬದುಕೆನ್ನುವುದು 'ಕ್ಷಣಿಕ' ಎನ್ನುವುದೇ ಸಾವಿನ ಕಾಣೆಯಾಗಿರುವುದರಿಂದ, ವಿಚಿತ್ರವೆನ್ನುವಂತೆ, ಕ್ಷಣಿಕತೆಯೇ ವಿರಕ್ತಿಗಿಂತ ಹೆಚ್ಚಾಗಿ ಬದುಕಿನಲ್ಲಿ ರುಚಿಯನ್ನು ಉದ್ದೀಪಿಸುವ ಭಾವವೂ ಆಗಿರುವುದರಿಂದ, ಅಂದರೆ ಮುಗಿಯುವ ಮುನ್ನ ಆದಷ್ಟು ಸವಿಯೋಣ ಎಂದು ತೀವ್ರವಾಗಿ ಅನ್ನಿಸುವುದರಿಂದ- ಬದುಕನ್ನು ಸವಿಯುವುದಿಲ್ಲವೇನು? ಎಂದು ಸಾವೇ ಕೇಳುತ್ತಿರುವಂತೆ ಉಪನಿಷತ್ತು ಚಿತ್ರಿಸುತ್ತದೆ!
-ಒಳಗಿನ ಪುಟಗಳಿಂದ
Share
Subscribe to our emails
Subscribe to our mailing list for insider news, product launches, and more.