S. Shettar
Publisher - ಅಭಿನವ ಪ್ರಕಾಶನ
- Free Shipping
- Cash on Delivery (COD) Available
Pages -
Type -
Couldn't load pickup availability
ಸಾಧುಗೆ ಸಾಧು, ಮಾಧೂರ್ಯನ್ಗೆ ಮಾಧೂರ್ಯಮ್ ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಎಂಬ ಕಪ್ಪೆಅರಭಟ್ಟನ ಕಲ್ಬರಹದ ಮಾತುಗಳನ್ನು ನಾವೆಲ್ಲರೂ ಆಗಾಗ ಕೇಳಿಯೇ ಇರುತ್ತೇವೆ. ಕನ್ನಡ ನಾಡಿನ ಹಿರಿಮೆ, ಗರಿಮೆಗಳನ್ನು ಬಣ್ಣಿಸುವವರು ಈ ಕಲ್ಬರಹದ ಸಾಲುಗಳನ್ನು ಬಳಸುವುದು ಸಾಮಾನ್ಯ ಸಂಗತಿಯಾಗಿದೆ. ಹಾಗಿದ್ದರೆ ಈ ಕಪ್ಪೆಅರಭಟ್ಟ ಯಾರು? ಶ್ರೀ ಅಕ್ಷರಮೇರು ದಾಮೋದರನೆಂಬ ಕವಿ, ಲಿಪಿಕಾರ ಹಾಗೂ ಶಿಲ್ಪಿಯೇ ಈ ಕಪ್ಪೆಅರಭಟ್ಟನೇ? ಚಾಳುಕ್ಯರ ಕಾಲದ ಕನ್ನಡ ಲಿಪಿ ವಿನ್ಯಾಸವನ್ನು ಹೊಸ ಬಗೆಯಲ್ಲಿ ಅಭ್ಯಸಿಸಿ, ಲಿಪಿ ಅಧ್ಯಯನಕ್ಕೊಂದು ಮಾದರಿಯನ್ನು ಷ.ಶೆಟ್ಟರ್ ಅವರು ಇಲ್ಲಿ ಒದಗಿಸಿದ್ದಾರೆ. ಕ್ರಿ.ಶ ಎಂಟನೆಯ ಶತಮಾನದ ಪೂರ್ವಾರ್ಧದ ಈ ಕಲ್ಬರಹದ ಓದು ನಿಮ್ಮನ್ನು ಸಾವಿರದ ಇನ್ನೂರು ವರ್ಷಗಳ ಹಿಂದಕ್ಕೆ ಕೊಂಡೊಯ್ದು ಕಳೆದ ನೂರು ವರ್ಷಗಳಿಂದಲೂ ಚರ್ಚೆಯಾಗುತ್ತಿರುವ ಈ ಶಾಸನದ ಬಗ್ಗೆ ಹೊಸ ಹೊಳಹುಗಳನ್ನು ಕೊಡುತ್ತದೆ.
