Skip to product information
1 of 2

N. Narasimhaiah

ಅವನೇ ಅಪರಾಧಿ

ಅವನೇ ಅಪರಾಧಿ

Publisher - ಸಪ್ನ ಬುಕ್ ಹೌಸ್

Regular price Rs. 125.00
Regular price Rs. 125.00 Sale price Rs. 125.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 168

Type - Paperback

ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನ೦ಟಿಸಿದ. ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ. ಅದೂ ಅಕ್ಷರ ಸೌಲಭ್ಯವಂಚಿತ ದಲಿತ ಕುಟುಂಬದಿಂದ ಬಂದಿರುವ, ಇತ್ತೀಚೆಗಷ್ಟೆ ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿರುವ, ಇಷ್ಟೆಲ್ಲಾ ಸಾಧನೆ ಗೈದೂ ಬಡತನವನ್ನು ಹಾಸಿ ಹೊದ್ದು ಎಲೆಮರೆಕಾಯಿಯಂತೆ ಬದುಕುತ್ತಿರುವ ಕನ್ನಡ ಸಾಹಿತ್ಯ ಲೋಕದ ಅದ್ವಿತೀಯ ಕಾದಂಬರಿಕಾರರು ನಮ್ಮೆಲ್ಲರ ಪ್ರೀತಿಯ ಎನ್. ನರಸಿಂಹಯ್ಯ

೬೦-೭೦ರ ದಶಕಗಳಲ್ಲಿ ತಿಂಗಳಿಗೊಂದೆರಡರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅತ್ಯದ್ಭುತ ಬರಹಗಾರರಿವರು, ಬಡಕುಟುಂಬಗಳ ನಮ್ಮಂಥವರು ನಮ್ಮ ನಮ್ಮ ಕಷ್ಟಕಾರ್ಪಣ್ಯಗಳನ್ನು ಮರೆಯಲು ಅನುವು ಮಾಡಿಕೊಟ್ಟಿದ್ದೇ ಇವರ ಅಸಂಖ್ಯಾತ ಕಾದಂಬರಿಗಳು ನಮ್ಮಲ್ಲಿ ವಾಚನಾಭಿರುಚಿಯನ್ನು ಬೆಳೆಸಿದ, ಬೇರೆ ಬೇರೆ ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಪ್ರಥಮ ಸೋಪಾನ ಶ್ರೇಯಸ್ಸು ನಿಸ್ಸಂದೇಹ ವಾಗಿ ಇವರಿಗೇ ಸಲ್ಲಬೇಕು. ಇವರ ಕಾದಂಬರಿಗಳ ಪುರುಷೋತ್ತಮ. ಮಧುಸೂಧನ ರಂಥ ಪತ್ತೇದಾರರು ಆ ಕಾಲದ ಸಾಮಾನ್ಯ ಓದುಗರಿಗೆ ಮಾದರಿಯಾಗಿದ್ದರು, ಆದರ್ಶವಾಗಿದ್ದರು, ಕಾರಣ ಇವರ ಎಲ್ಲ ಕಾದಂಬರಿಗಳು ಸರಳ, ಸುಂದರ, ಒಮ್ಮೆ ಓದಲೆತ್ತಿಕೊಂಡರೆ ಕೆಳಗಿಡಲಿಕ್ಕಾಗದಷ್ಟು ಕುತೂಹಲಕಾರಿಯಾದವುಗಳು, ಅಹಂಕಾರ ಬದಿಗೊತ್ತಿ ಓದಿದವರಿಗೆ ಇವು ಕೊಡುವ ಡ್ರಿಲ್ಲು, ಅನುಭವ ಅನನ್ಯ ರೀತಿಯದು. ಖಂಡಿತ ಈ ಕಾದಂಬರಿಗಳಿಗೆ ಪುಸ್ತಕ ಪ್ರೀತಿಗೆ ಪುನರ್ಜನ್ಮ ನೀಡುವಂಥ ಅಗಾಧ ತಾಕತ್ತಿದೆ. ಹರಕತ್ತುಗಳ ನಡುವೆ ತಮ್ಮ ವೃದ್ಯಾಪ್ಯವನ್ನು ಕಳೆಯುತ್ತಿರುವ ನರಸಿಂಹಯ್ಯನವರಲ್ಲಿ ಆರ್ಥಿಕ ಉತ್ಸಾಹ ತುಂಬಲಿಕ್ಕೆಂದೇ ಕರ್ನಾಟಕದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾದ ಸಪ್ನ ಬುಕ್ ಹೌಸ್ ಈ ಕಾದಂಬರಿಗಳನ್ನು ಪ್ರಕಟಿಸುತ್ತಿದೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ನರಸಿಂಹಯ್ಯನವರಲ್ಲಿ ಜೀವನೋತ್ಸಾಹವನ್ನು ತುಂಬುವ ಪುಣ್ಯಕಾರ್ಯ ಮಾಡಬೇಕಿದೆ.

-ಕುಂವೀ 

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)