Skip to product information
1 of 1

Dr. Sripada Raghunath Kulkarni

ಅಷ್ಟಮಂಗಲ ಪ್ರಶ್ನ ದೀಪಿಕಾ

ಅಷ್ಟಮಂಗಲ ಪ್ರಶ್ನ ದೀಪಿಕಾ

Publisher - ಶ್ರೀನಿಧಿ ಪ್ರಕಾಶನ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 184

Type - Paperback

ಜ್ಯೋತಿಷಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ-ಕುತೂಹಲ ಮೂಡಿಸುವ ವಿಭಾಗ 'ಪ್ರಶ್ನಶಾಸ್ತ್ರ. ಪ್ರತಿಯೊಬ್ಬರ ಜಿಜ್ಞಾಸೆಗೂ ಉತ್ತರ ಈ ವಿಭಾಗದಲ್ಲಿ ಸಿಗುವುದೆಂಬ ನಂಬಿಕೆ. ಅದರಂತೆಯೇ ಜ್ಯೋತಿಷ್ಯದ ಒಂದು ಭಾಗವೇ ಆಗಿರುವ ಪ್ರಶ್ನಶಾಸ್ತ್ರಕ್ಕೆ ಅನುರೂಪವಾದಂಥ, ವಿಭಿನ್ನ ರೀತಿಯ ಪ್ರಶ್ನ ಮಾರ್ಗ ಅಷ್ಟಮಂಗಲ ಪ್ರಶ್ನಮ್, ಇದರಲ್ಲಿ 'ಎಂಟು ಮಂಗಳಕರ' ದ್ರವ್ಯಗಳನ್ನು - ತುಪ್ಪದ ದೀಪ, ಕನ್ನಡಿ, ಚಿನ್ನದ ನಾಣ್ಯ, ಹಾಲು, ಮೊಸರು, ಹಣ್ಣು, ಪುಸ್ತಕ ಮತ್ತು ಬಿಳಿಯ ವಸ್ತ್ರಗಳನ್ನು ಬಳಸಲಾಗುತ್ತದೆ. ಕೇರಳ ಮತ್ತು ತುಳುನಾಡಿನಲ್ಲಿ ಹೆಚ್ಚಾಗಿ ಅನುಸರಿಸುವ ಈ ಪ್ರಶ್ನಮಾರ್ಗದ ಅಧಿಕೃತ ಕರ್ತೃ- ನಾರಾಯಣ ನಂಬೂದ್ರಿ, 1649ರಲ್ಲಿ ರಚಿತವಾದ ಈ ಪ್ರಶ್ನಮಾರ್ಗ ಇಂದಿಗೂ ಪ್ರಚಲಿತ. ಜೀವನದಲ್ಲಿ ವ್ಯಕ್ತಿ ಅನುಭವಿಸುವ ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗ- ಈ ಅಷ್ಟಮಂಗಲ ಪ್ರಶ್ನಮ್.

ಈ ಪ್ರಶ್ನಮಾರ್ಗದ ಬಗ್ಗೆ ಅನೇಕರಿಗೆ ವಿಸ್ಮಯವಿದೆ. ಏಕೆಂದರೆ, ಅಷ್ಟಮಂಗಲದ ವಿಧಾನ ವಿಭಿನ್ನ. ಇದರಲ್ಲಿ ಪ್ರಶ್ನೆಕರ್ತನ ಜಾತಕ ನೋಡಿ ಹೇಳುವುದಕ್ಕಿಂತ ನಿಗದಿತ ದಿನವೊಂದನ್ನು ನಿರ್ಧರಿಸಿ, ಅಂದು ಕೆಲವು ಪೂಜೆಗಳನ್ನು ಕೈಗೊಂಡ ನಂತರ ಪರಿಹಾರ ಸೂಚಿಸುವುದು ನಡೆಯುತ್ತದೆ. ಪ್ರಶ್ನಕರ್ತನಿಗೆ ದೈವಜ್ಞನಿಂದ ನಿಖರ ಫಲಿತಾಂಶ, ಉತ್ತರ ತಿಳಿಯಲು ಎರಡು ಮೂರು ದಿನಗಳೂ ಹಿಡಿಯಬಹುದು. ವ್ಯಕ್ತಿಯ ಜೀವನದ ವರ್ತಮಾನ-ಭೂತ-ಭವಿಷ್ಯತ್‌ಗಳನ್ನು ಕೆಲವೊಂದು ಶಕುನದಿಂದ, ಕವಡೆ, ವೀಳ್ಯದೆಲೆಗಳ ಬಳಕೆಯಿಂದ ಸ್ಪಷ್ಟವಾಗಿ ಅಷ್ಟಮಂಗಲದ ದೈವಜ್ಜರು ತಿಳಿಯಪಡಿಸಬಲ್ಲರು.

ಜ್ಯೋತಿಷಾಸಕ್ತರಿಗೆ ಅನುಕೂಲವಾಗುವಂತೆ ಸರಳ ಕನ್ನಡದಲ್ಲಿ, 14 ಅಧ್ಯಾಯಗಳನ್ನು ಹೊಂದಿರುವ 'ಅಷ್ಟಮಂಗಲ ಪ್ರಶ್ನ ದೀಪಿಕಾ' ಕೃತಿಯನ್ನು ತಮ್ಮ ಅನುಭವ – ಅಧ್ಯಯನದಿಂದ ಶ್ರೀಪಾದ ಕುಲಕರ್ಣಿಯವರು ರಚಿಸಿದ್ದಾರೆ.

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
T
Thimma NAIK m

ಅಷ್ಟಮಂಗಲ ಪ್ರಶ್ನ ದೀಪಿಕಾ