Y. G. Muralidharan
Publisher -
Regular price
Rs. 110.00
Regular price
Rs. 110.00
Sale price
Rs. 110.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಹಣಕ್ಕೊಂದು ಮೌಲ್ಯವಿದೆ. ಅದರ ಬಳಕೆ ಸರಿಯಾದರೆ ಹಣ ವ್ಯಯಿಸಿದವನಿಗೂ ತೃಪ್ತಿ. ದಿನೇ ದಿನೇ ಮಾರುಕಟ್ಟೆ ಬದಲಾಗುತ್ತಲೇ ಇದೆ; ಇರುತ್ತದೆ. ಹೊಸ ಹೊಸ ಉತ್ಪನ್ನಗಳು, ವಿಶೇಷ ರಿಯಾಯಿತಿ ಯೋಜನೆ, ಉಚಿತ ಕೊಡುಗೆ ಎಂದೆಲ್ಲ ಗ್ರಾಹಕರನ್ನು ಆಕರ್ಷಿಸಲು- ಸೆಳೆಯಲು ದೊಂಬರಾಟ ನಡೆಯುತ್ತಿದೆ. ಇದಕ್ಕೆ ಮಾರುಹೋದ ಗ್ರಾಹಕ ಯಾವುದು ಗುಣಮಟ್ಟದ್ದು, ಯಾವುದು ಕಳಪೆಯದ್ದು ಎಂದೆಲ್ಲ ತುಲನೆ ಮಾಡುತ್ತ ಕೂರುವುದು ಸ್ವಲ್ಪ ಕಷ್ಟ. ಹಾಗಾಗಿ, ತೋಚಿದ್ದನ್ನು ಕೊಳ್ಳುತ್ತಾನೆ. ಇಂಥ ಸಮಯದಲ್ಲಿ ಕೊಂಡ ವಸ್ತು ಅವನ ಅಗತ್ಯ ಪೂರೈಸಬೇಕಷ್ಟೆ! ಅದಾಗದೆ, ಕೈಕೊಟ್ಟಾಗ ಅದರಿಂದ ನಷ್ಟ ಅನುಭವಿಸುವವನು ಗ್ರಾಹಕನೇ. ವೈ.ಜಿ. ಮುರಳೀಧರನ್ ಅವರ 'ಅರ್ಥಹಿತ' ಓದುಗನಿಗೆ ಉಪಯೋಗಕ್ಕೆ ಬರುವುದು ಈ ವಿಚಾರದಲ್ಲೇ. ಸುಮಾರು ವರ್ಷಗಳಿಂದ ಗ್ರಾಹಕರ ಹಕ್ಕುಗಳ ಕುರಿತು ಜನರಿಗೆ ಅರಿವು ಮೂಡಿಸುವುದರೆಡೆಗೇ ಅವರ ಬರಹ- ಕಾರ್ಯಗಳು, ಹಾಗಾಗಿ, 'ಅರ್ಥಹಿತ'ದಲ್ಲೂ, ಗ್ರಾಹಕರ ಹಿತದೃಷ್ಟಿ ಇದೆ. ಶ್ರೀಸಾಮಾನ್ಯ ಯಾವೆಲ್ಲ ವಿಚಾರಕ್ಕೆ ಮಾರುಕಟ್ಟೆಯಲ್ಲಿ, ತನ್ನ ದಿನನಿತ್ಯ ಬಳಸುವ ವಸ್ತುಗಳಲ್ಲಿ, ಇನ್ನಿತರ ವಿಚಾರಗಳಲ್ಲಿ ಮೋಸ ಹೋಗುತ್ತಾನೆ. ಅದರಿಂದ ಪಾರಾಗಲು ಮಾರ್ಗಗಳೇನೂ ಇಲ್ಲವೇ ಅಂದುಕೊಳ್ಳುವ ಗ್ರಾಹಕನಿಗೆ ತಮಗಾಗೇ ಇರುವ ಗ್ರಾಹಕ ಕಾಯ್ದೆಯ ವಿಚಾರಗಳನ್ನು ಸಣ್ಣ ಸಣ್ಣ ಪ್ರಕರಣಗಳನ್ನು ಉದಹರಿಸುತ್ತ ಅದಕ್ಕೆ ಪರಿಹಾರವನ್ನೂ ತಿಳಿಸುತ್ತ ಎಚ್ಚರಿಸುವುದು 'ಅರ್ಥಹಿತ'ದ ಗುಣ. ಹಾಗಾಗಿ, ಅರ್ಥಶಾಸ್ತ್ರ, ಕಾಯ್ದೆ-ಕಾನೂನು ಅರಿಯದವರೂ, ಅರ್ಥದ ಹಿತವನ್ನು ಹೇಗೆ ಕಾಯ್ದುಕೊಳ್ಳಬೇಕು ಎಂಬುದನ್ನು ಅರ್ಥವಾಗುವಂತೆ, ಹಿತವಾಗುವಂತೆ, ಇಂದಿನ ದಿನಕ್ಕೆ ಪ್ರಸ್ತುತ ಎನಿಸುವಂತೆ ವಿವರಿಸಿರುವುದು 'ಅರ್ಥಹಿತ'ದ ವಿಶೇಷ.
