Skip to product information
1 of 2

Kum. Veerabhadrappa

ಅರಮನೆ

ಅರಮನೆ

Publisher - ಸಪ್ನ ಬುಕ್ ಹೌಸ್

Regular price Rs. 425.00
Regular price Rs. 425.00 Sale price Rs. 425.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 567

Type - Hardcover

'ಅರಮನೆ' ಕುಂವೀಯವರ ಸೃಜನಶೀಲತೆಯ ಶಿಖರ. ಇದು ಕನ್ನಡದ ಸಂದರ್ಭದಲ್ಲಿ ಕಾದಂಬರಿ ಎನ್ನುವ ಸಾಹಿತ್ಯಪ್ರಕಾರದ ನಿರ್ವಚನ ಮತ್ತು ಸ್ವರೂಪವನ್ನೇ ಆಮೂಲಾಗ್ರವಾಗಿ ಬದಲಾಯಿಸುತ್ತದೆ. ಆಧುನಿಕವನ್ನು ಒಳಗೊಳ್ಳುತ್ತಲೇ ದೇಸೀ ಕಥನ ಪರಂಪರೆಯ ಆಯಾಮಗಳನ್ನು ಪಡೆದುಕೊಳ್ಳುತ್ತದೆ. ಹತ್ತೊಂಬತ್ತನೆಯ ಶತಮಾನದ ಸಮುದಾಯವು ವಸಾಹತೀಕರಣವನ್ನು ಒಳಗೆ ಮಾಡಿಕೊಂಡ ಬಗೆಯನ್ನು ಬಹಳ ಭಿನ್ನವಾಗಿ ಚಿತ್ರಿಸಿರುವ ಈ ಕೃತಿಯಲ್ಲಿ ರಾಜಸತ್ತೆ, ಬ್ರಿಟಿಷ್ ಪ್ರಭುತ್ವ ಮತ್ತು ಸಾಂಬವಿಯಿಂದ ಪ್ರತಿನಿಧಿತವಾಗುವ ಜನಸತ್ತೆಯ ಮುಖಾಮುಖಿ ನಡೆಯುತ್ತದೆ. ಬಡವರ, ಶೋಷಿತರ ಮತ್ತು ಹೆಣ್ಣುಮಕ್ಕಳ ಆಶೋತ್ತರಗಳ ಪ್ರತಿಮಾರೂಪವಾದ ಸಾಂಬವಿಯು, ತನಗಿರುವ ಅಲೌಕಿಕವಾದ ಶಕ್ತಿಗಳ ವಿನಿಯೋಗದಿಂದಲೇ ಜನಕಲ್ಯಾಣದಲ್ಲಿ ನಿರತಳಾಗುತ್ತಾಳೆ. ದೈವವು ಮಾನುಷದ ಜೊತೆಯಲ್ಲಿ ಪಡೆಯುವ ಸಂಗಾತವೇ ಅದಕ್ಕೆ ಜನಪರವಾದ ನೆಲೆಗಳನ್ನು ಒದಗಿಸುತ್ತದೆ. ಇಲ್ಲಿನ ಜೀವನವು ತನ್ನ ವಿವರಗಳಲ್ಲಿ ಅಂತೆಯೇ ಧೋರಣೆಗಳಲ್ಲಿ ಜನಸಾಮಾನ್ಯರ ಆಶಯಗಳಿಗೆ, ಜೀವನಪ್ರೀತಿಗೆ ಹಿಡಿದ ಕನ್ನಡಿಯಾಗಿದೆ. ಇನ್ನೊಂದು ಕಡೆ, ಬ್ರಿಟಿಷ್ ಅಧಿಕಾರಿಯಾದ ಥಾಮಸ್ ಮನ್ರೋ ರಾಜಕೀಯವಾದ ಹುನ್ನಾರಗಳನ್ನು ನಡೆಸುವುದರ ಸಂಗಡವೇ ಜನಪರವಾದ ಚಟುವಟಿಕೆಗಳಲ್ಲಿಯೂ ನಿರತನಾಗಿ ದಂತಕಥೆಯಾಗುತ್ತಾನೆ.

ನಮ್ಮ ಪೀಳಿಗೆಯ ಅತ್ಯಂತ ಪ್ರತಿಭಾವಂತ ಲೇಖಕರಲ್ಲಿ ಒಬ್ಬರಾದ ಕುಂವೀಯವರು ವಾಸ್ತವದ ಮತ್ತು ಸಂಕೇತವಾದದ ಪರಿಮಿತಿಗಳನ್ನು ಬಹಳ ಸುಲಭವಾಗಿ ಮೀರಿದ್ದಾರೆ. ಹೊಸದೊಂದು ನಿರೂಪಣ ವಿಧಾನವನ್ನೇ ರೂಪಿಸಿಕೊಂಡಿದ್ದಾರೆ. ಅವರಿಗೆ ಸಹಜವಾದ ವೈನೋದಿಕ ಶೈಲಿಯು ಅಪವ್ಯಯವಾಗದೆ ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಕೆಯಾಗಿದೆ.

ಚರಿತ್ರೆ, ಸಮಾಜ ಮತ್ತು ಜೀವನದ ಬಗ್ಗೆ ನಮಗಿರುವ ತಿಳಿವಳಿಕೆಗಳನ್ನು ತಿದ್ದುವ ಈ ಕೃತಿಯು, ಮನಸ್ಸಿಗೆ ಸಂತೋಷ, ಉಲ್ಲಾಸಗಳನ್ನು ನೀಡುತ್ತದೆ, 'ಅರಮನೆ' ಕನ್ನಡ ಜನಮಾನಸದಲ್ಲಿ ನೂರು ಕಾಲ ಉಳಿಯಲಿರುವ ಸಾರ್ಥಕ ಕೃತಿ.

-ಡಾ. ಎಚ್‌.ಎಸ್‌. ರಾಘವೇಂದ್ರ ರಾವ್‌

.... ಒ೦ದು ಕಾಲ ಘಟ್ಟದ ಗ್ರಾಮೀಣ ಭಾರತವೇ ಈ ಕೃತಿಯಲ್ಲಿ ಉಸಿರಾಡುತ್ತದೆ ಎಂದರೆ ಅದೇನು ಉತ್ಪ್ರೇಕ್ಷೆಯಲ್ಲ.

-ಡಾ.ಸಿ.ಎನ್. ರಾಮಚಂದ್ರನ್

(ಮುನ್ನುಡಿಯಲ್ಲಿ)
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)