Skip to product information
1 of 1

Hanumantha Haligeri

ಏಪ್ರಿಲ್ ಫೂಲ್

ಏಪ್ರಿಲ್ ಫೂಲ್

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಹನುಮಂತ ಹಾಲಿಗೇರಿಯವರ ಬಹುತೇಕ ಕತೆಗಳಲ್ಲಿ ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಿದ ಕ್ರೌರ್ಯದ ವೈದೃಶ್ಯಗಳಿವೆ, ಈ ಕತೆಗಳ ಹೆಚ್ಚುಗಾರಿಕೆಯೆಂದರೆ, ಅಲ್ಲಿಗೆ ಪಾತ್ರಗಳಾದವೂ ಕ್ರೂರ ವಾಸ್ತವತೆಯ ಭಾರದಿಂದ ಕಥೆಗಳು ಬಳಲುವುದಿಲ್ಲ, ಭಾವನೆಯಿಂದ ಬಿಗಿದಂತೆ ತೋರಿದರೂ ಓದುಗನ ಅಂತಃಕರಣ ತಟ್ಟುವಲ್ಲಿ ಯಶಸ್ವಿಯಾಗಿದೆ.

ಸಾವಿನಂತಹ ಬದುಕಿನ ಚಿತ್ರಗಳನ್ನು ತಣ್ಣಗೆ ನಿರುಮ್ಮಳವಾಗಿ ನಿರೂಪಿಸುವಾಗ, ಕಥಾ ಪಾತ್ರಗಳು ಉಂಟು ಮಾಡುವ ತಲ್ಲಣಗಳಿಗೆ ಬಲಿಯಾಗದ ಹೊರತು ಓದುಗನಿಗೆ ಗತ್ಯಂತರವಿಲ್ಲ. ಕತೆ ಹೇಳಿ ಮುಗಿಸಿದ ನಂತರವೂ ಉಳಿಯುವ ಮೌನ...ಮನಸ್ಸನ್ನು ಭಾರವಾಗಿಸುತ್ತದೆ.

ಮೋನಪ್ಪಜ್ಜನ ಹಲಗಿ ಬಡ್ತದ ಕುಣಿತಕ್ಕೆ ಧರ್ಮಗಳು ಒಂದಾಗಿ ಕುಣಿಯುವ ತಾಕತ್ತು ವೋಟಿನ ಮತೀಯ ರಾಜಕಾರಣಕ್ಕೆ 'ಹೊಕ್ಕಿದ್ದಲ್ಲಿ ನಿಮನ' ಎನ್ನುವ ಅನಕ್ಷರಸ್ತೆ ಹಳ್ಳಿ ಹುಡುಗರ ಆವಾಜನ್ನು ಒಟ್ಟಿಗೆ ಕೇಳಿಸುವ ಹಾಗೆ ಇಲ್ಲಿನ ಹಲವು ಕಥೆಗಳಿವೆ.

'ನೀವು ಬ್ಯಾರೆ ನಾವು ಬ್ಯಾರೆ ಅಂಥ ಹೇಳಿದ್ರ ಅಂಥ ಧರ್ಮ ನಮಗ ಬ್ಯಾಡ' ಎಂದು ಪಾತ್ರಗಳ ಮೂಲಕ ಹೇಳಿಸಿ, ಸೃಜನಶೀಲ ಮಾಧ್ಯಮವನ್ನು ಸಮರ್ಥವಾಗಿ ದುಡಿಸಿಕೊಳ್ಳುವಿಶಿಷ್ಟಕನ್ನಡ ಕಥಾ ಪರಂಪರೆಯ ವೈವಿಧ್ಯಾಂಶಗಳನ್ನು ಪ್ರತಿನಿಧಿಸುವಲ್ಲಿ ಕತೆಗಾರರು ಯಶಸ್ವಿಯಾಗಿದ್ದಾರೆ. ಮಾನವ ಸಂಬಂಧಗಳ ವಿಶಿಷ್ಟ ಪಾತ್ರ ಚಿತ್ರಣವನ್ನು ಸಿದ್ದಯ್ಯ ಸ್ವಾಮಿಗಳ ಪಾತ್ರದ ಮೂಲಕ 'ಸಿದ್ದಯ್ಯನ ಪವಾಡ' ಕಥೆ ಅನಾವರಣಗೊಳಿಸುತ್ತದೆ.ದೇವರೆನ್ನುವುದು ಇಲ್ಲವೇ ಇಲ್ಲ.ನಿಮಗೆ ನೀವೇ ದೇವರು ಎಂದರೂ ಕೇಳದೆ ಅಡ್ಡಬಿದ್ದು ತನ್ನನ್ನು ದೇವರನ್ನಾಗಿ ಮಾಡಿದ ಮೌಡ್ಯ ಜನರಿಗೆ ಸಿದ್ದಯ್ಯನ ದೇಹತ್ಯಾಗ, ಅಗಾಧ ಮೌನದ ಉತ್ತರ ನೀಡುತ್ತದೆ.ಆದರೂ ಸಾವಿರಾರು ಭಜನೆಗಳು ಶ್ಲೋಕಗಳು ರಚನೆಗೊಂಡು ಸೃಷ್ಟಿಯಾಗುವ ಸಿದ್ದಯ್ಯಸ್ವಾಮಿ ಪವಾಡಗಳ ಗದ್ದಲಕ್ಕೂ, ಓದುಗರ ಮನದಲ್ಲಿ ಮೂಡುವ ತಲ್ಲಣಕ್ಕೂ, ವಿಚಿತ್ರವಾದ ಸಂಬಂಧವೊಂದನ್ನು ಕತೆ ಉಂಟುಮಾಡುತ್ತದೆ. ಕತೆ, ಕವಿತೆ, ಕಾದಂಬರಿಗಳು ಮನುಷ್ಯನ ಬದುಕಿಗೆ ರೂಪಕ ಗಳಾಗಬೇಕು. ಅವುಗಳನ್ನೆಲ್ಲ ಹಿಂದೆ ಬಿಟ್ಟು ಮನುಷ್ಯ ಕರಗಬೇಕು ಎಂಬುದು ಇಲ್ಲಿನ ಕತೆಗಳ ಅಂತರಾಳ

ಸೃಜನಶೀಲ ಕತೆಗಾರನಿಗೆ ಹೃದಯ, ಮೆದುಳು ಶುದ್ಧವಾಗಿರಬೇಕು. ಇಲ್ಲದೆ ಹೋದರೆ, ಮೇಜಿನ ಮೇಲಿನ ಬರೆಯುವ ಕಾಗದ, ಲೇಖನಿ ಕೂಡ ಲೇಖಕನನ್ನು ಜನನ ಹೆದರಿಸಬಲ್ಲುದು. ಅಂತಹ ಸೂಕ್ಷ್ಮತೆಯನ್ನು ಹೊಂದಿದ ಅಪರೂಪದ ಕತೆಗಾರ ಹಾಲಿಗೇರಿ,

ಬಿ. ಶ್ರೀನಿವಾಸ
View full details