Skip to product information
1 of 1

Guruprasad Kurtakoti

ಅಪ್ಪರೂಪ

ಅಪ್ಪರೂಪ

Publisher -

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಅಪ್ಪ ಸರಣಿಯ ಎರಡನೆಯ ಲೇಖನಗಳ ಗುಚ್ಛ ಇದಾಗಿದೆ. ಮೊದಲನೆಯ ಪುಸ್ತಕ ”ಎಲ್ಲರಂಥವನಲ್ಲ ನನ್ನಪ್ಪ”ಕ್ಕೆ ಸಿಕ್ಕ ಮನ್ನಣೆ, ಅಭಿಮಾನ, ಗುರುಪ್ರಸಾದ ಕುರ್ತಕೋಟಿ ಅವರಿಗೆ ಈ ಲೇಖನಗಳ ಗುಚ್ಛ ಪ್ರಕಟಿಸುವ ಆಸ್ಥೆ ಮೂಡಿಸಿತು .

ಈ ಪುಸ್ತಕದಲ್ಲಿ ೨೪ ಉದಯೋನ್ಮುಖ ಲೇಖಕರು ತಂತಮ್ಮ ಅಪ್ಪನ ಕುರಿತು ನೆನಪುಗಳು, ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಲೇಖನಗಳನ್ನು ಬರೆದಿರುವುದು ಸ್ವಾಗತಾರ್ಹ. ಅವರು ತಂದೆ ಮಗಳ ಭಾಂಧವ್ಯದ ಸವಿಯನ್ನು ಹಂಚಿಕೊಂಡಿದ್ದಾರೆ. ಎಲ್ಲ ಮಕ್ಕಳಿಗೆ ತಾಯಿ ಮೊದಲ “ಗುರು”ವಾದರೆ ತಂದೆ “ಹೀರೊ” ಎಂಬ ಅನುಭವವಿರುತ್ತದೆ.

“ತಾಯಿಯ” ಬಗ್ಗೆ ಮಕ್ಕಳಿಗೆ ಇರುವ ಮೃದುಭಾವನೆ, ಭಾವಾತಿರೇಕದಿಂದ ಎಷ್ಟೋ ಬಾರಿ “ತಂದೆ” ಅಪರಿಚಿತನಂತೆ, ಬರಿಯ ಪಾಲಕನಂತೆ ಅನ್ನಿಸುವುದುಂಟು. ಗಂಡಸಿನ ಒರಟುತನ, ಶಿಸ್ತಿನ ಕಾಳಜಿ, ಮಕ್ಕಳ ಭವಿಷ್ಯದ ನಡುವೆ ಕಳೆದು ಹೋದ “ಅಪ್ಪನನ್ನು” ಹುಡುಕುವ, ಗುರ್ತಿಸುವ ಪ್ರಯತ್ನ ಗುರುಪ್ರಸಾದ ಕುರ್ತಕೋಟಿಯವರದು.

View full details