Skip to product information
1 of 2

Abdul Rasheed

ಅಂತರಾಷ್ಟ್ರೀಯ ಕುಂಬಳಕಾಯಿ

ಅಂತರಾಷ್ಟ್ರೀಯ ಕುಂಬಳಕಾಯಿ

Publisher - ವೀರಲೋಕ ಬುಕ್ಸ್

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 93

Type - Paperback

ಇಲ್ಲಿನ ಕತೆಗಳಲ್ಲಿ ಉಜ್ವಲ ಬದುಕು ಇರುವ ಹಾಗೆಯೇ ಪುಟಗಳಿಂದ ಹೊರಕ್ಕೆ ಜಿಗಿದು ಜೀವನದಲ್ಲಿ ಒಂದಾಗುವಂಥ ಪಾತ್ರಗಳೂ ಇವೆ. ಸಹಾನುಭೂತಿಯಿಂದ ಸೃಷ್ಟಿಸಲಾಗಿರುವ ಈ ಪಾತ್ರಗಳೋ, ತಮ್ಮ ಸಂಸ್ಕೃತಿಯ, ಚರಿತ್ರೆಯ, ಅಸ್ಮಿತೆಯ ಸರಹದ್ದುಗಳನ್ನು ಒಡೆದುಹಾಕುವಷ್ಟು ಶಕ್ತವಾಗಿವೆ. ನಮ್ಮ ಅನೇಕ ಕತೆಗಾರರು (ವಿಮರ್ಶಕರು ಕೂಡ) ನೇರವಾಗಿ ಕತೆ ಹೇಳುವುದನ್ನು ಸಂಶಯದಿಂದ ನೋಡುತ್ತಿರುವ ಈ ಕಾಲದಲ್ಲಿ ಏಕಕಾಲಕ್ಕೆ ನೇರವಾಗಿದ್ದೂ ಸಂಕೀರ್ಣತೆಯನ್ನು ಸಾಧಿಸುವ ಈ ಕತೆಗಳು ಗಾಢ ಅನುಭವವನ್ನು ಕೊಡುವ, ವಾಸ್ತವ ಮತ್ತು ಫ್ಯಾಂಟಸಿಯ ನಡುವಣ ಗೆರೆಯನ್ನು ಅಳಿಸಿಹಾಕುವ ಅಪ್ಪಟ ಕತೆಗಳು.

ತೀರ ಸಾಮಾನ್ಯರನ್ನು ಕುರಿತ ಕತೆಗಳಿವು, ನಿಜ. ಆದರೆ ಈ ಸಾಮಾನ್ಯರ ಕನಸುಗಳು, ತುಸು ನಿರಾಶಾದಾಯಕವಾಗಿದ್ದರೂ ಅವರ ದೈನಿಕದ ಸ್ಥಿತಿಗತಿಗಳನ್ನು ಮರೆಮಾಚುವುದಿಲ್ಲ. ಮತ್ತೆ ಈ ಕತೆಗಳಲ್ಲಿರುವ ಅರಿವಿನ ಆಳ ತಲ್ಲಣಗೊಳಿಸುವಂಥದು. ಆ ತಲ್ಲಣವನ್ನು ಉಪಶಮನಗೊಳಸುವಂತಿದೆ ಒಳಗೇ ಪ್ರವಹಿಸುವ ವಿನೋದಪಜ್ಙೆ ವಿವರಗಳಿಂದ ಪರಿಚಿತವಾಗಿದ್ದೂ ಗುರುತು ಹತ್ತದ ಪರಿಣಾಮ ಉಂಟುಮಾಡುವ ಈ ಕತೆಗಳಲ್ಲಿ ಕನಸುಗಳಿರುವ ಮನವೊಲಿಸುವ ಶಕ್ತಿಯಿದೆ.

ರಶೀದರ ಕತೆಗಳಲ್ಲಿರುವುದು ಅನುಭವಿಸಲಾದ ಅರ್ಥವಾಗಿರುವುದರಿಂದ ಇಲ್ಲಿನ ಯಾವ ಕತೆಯ ವಸ್ತುವನ್ನೂ ಪ್ರತ್ಯೇಕಿಸಿ ನೋಡಲಾಗದು.

ಸೃಜನಶೀಲ ಕಲ್ಪಕತೆಯೂ ಸೂಕ್ಷ್ಮಜ್ಞತೆಯೂ ಅನುಭವಿಸಲ್ಪಟ್ಟ ಬದುಕೂ ಧಾರಾಳವಾಗಿರುವ ಈ ಕತೆಗಳನ್ನು ಯಾರು ಓದಿದರೂ ಅವರ ಮನಷ್ಟು ಏನೋದಬಂದ, ಭಾವತೀವ್ರತೆಯಿಂದ, ಮಧುರ ಯಾತನೆಯಿಂದ, ಮೆಚ್ಚುಗೆಯಿಂದ ಅರಳುತ್ತವೆ.

-ಎಸ್ ದಿವಾಕರ್ (ಮುನ್ನುಡಿಯಿಂದ)
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)