Skip to product information
1 of 2

Dr. Sukanya Soonagahalli

ಅನಂತಮುಖಿ

ಅನಂತಮುಖಿ

Publisher - ಹರಿವು ಬುಕ್ಸ್

Regular price Rs. 800.00
Regular price Rs. 800.00 Sale price Rs. 800.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 488

Type - Hardcover

ಒಂದು ಕಡೆ 'ಕಠಿಣ' ಎಂಬ ನೆಪಹೂಡಿ ಕನ್ನಡದಲ್ಲಿ ಶಾಸ್ತ್ರಗ್ರಂಥಗಳ ಓದು ಕ್ಷೀಣಿಸಿದೆ. ಮತ್ತೊಂದು ಕಡೆ ವೈಜ್ಞಾನಿಕ ಓದು, ಮನೋಧರ್ಮವೂ ಕಣ್ಮರೆಯಾಗುತ್ತಿದೆ. ಒಂದು ದಿಕ್ಕಿನಲ್ಲಿ ಕೃತಕ ಬುದ್ಧಿ ಮತ್ತೆಯು ವಿಜೃಂಭಿಸತೊಡಗಿದ್ದರೆ, ಮತ್ತೊಂದು ದಿಕ್ಕಿನಲ್ಲಿ ಅವೈಜ್ಞಾನಿಕತೆ ಅಬ್ಬರಿಸುತ್ತಿದೆ. ಇಂಥ ವಿರೋಧಾಭಾಸಗಳ ನಡುವೆ ಅನಂತರಾಮು ಅನರ್ಘ್ಯರತ್ನದಂತೆ ಕಾಣಿಸುತ್ತಾರೆ ಒಂದು ವಿಶ್ವವಿದ್ಯಾಲಯ ಮಾಡಬೇಕಾದ್ದನ್ನು ಒಬ್ಬರೇ ಮಾಡಿದ್ದಾರೆ. ಎಪ್ಪತ್ತೈದು ವಸಂತಗಳನ್ನು ಸಾರ್ಥಕವಾಗಿ ಪೂರೈಸಿರುವ ಆನಂತರಾಮು ಅವರಿಗೆ ಎಲ್ಲ ಬಗೆಯ ಯಶಸ್ಸನ್ನೂ, ಆರೋಗ್ಯವನ್ನು ತೋರುತ್ತೇನೆ.

-ಡಾ. ನಾಗತಿಹಳ್ಳಿ ಚಂದ್ರಶೇಖರ ಪ್ರಸಿದ್ಧ ಚಲನಚಿತ್ರ ನಿರ್ದೇಶಕರು

ಆಡಿದ ಮಾತುಗಳು ಅತ್ಯಲ್ಪವಾದರೂ, ಆಡದ ಮಾತುಗಳಿಂದಲೇ ರೂಪಿಸಲ್ಪಟ್ಟ ನಂಟು ನಮ್ಮದು. ಇಪ್ಪತ್ತೈದು ವರ್ಷಗಳಲ್ಲಿ, ಬೆಂಗಳೂರಿನಲ್ಲಿ ಒಂದೇ ಬಡಾವಣೆಯಲ್ಲಿದ್ದರೂ ಕ್ವಚಿತ್ ಭೇಟಿ ನಮ್ಮ ಹತ್ತಾರು ಭೇಟಿಗಳು ಆಗಿರುವುದು, ಯಾರು ಯಾರಿಗೂ ನಿಜವಾದ ಅರ್ಥದಲ್ಲಿ ಸಿಗದೇ ಹೋಗುವ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ! ಆದರೆ ಸಿಕ್ಕ ಒಂದೆರಡು ಕ್ಷಣಗಳಲ್ಲೇ ಅವರ ನಿಸ್ಪೃಹ, ಪಾರದರ್ಶಕ, ಪ್ರಗತಿಪರ ವ್ಯಕ್ತಿತ್ವವು ಮನಸ್ಸಿಗೆ ವಿಶಾಲವೊಂದರ ಸ್ಪರ್ಶವನ್ನು ಕೊಡುತ್ತಲೇ ಬಂದಿದೆ. ವಿಜ್ಞಾನವನ್ನು ಒಂದು ಆಯ್ಕೆಯ ಕ್ಷೇತ್ರವನ್ನಾಗಷ್ಟೇ ನೋಡದೆ, ಜೀವನ ದೃಷ್ಟಿಯೆಂದೇ ನೆಚ್ಚಿಕೊಂಡು ಅದನ್ನು ಸಮಾಜದೊಂದಿಗೆ ನಿರಪೇಕ್ಷವಾಗಿ ಸತತ ಹಂಚಿಕೊಳ್ಳುತ್ತ ಬಂದ ಟಿ.ಆರ್. ಅನಂತರಾಮು ನಿಜಕ್ಕೂ ಒಬ್ಬ ಅಪರೂಪದ ಸತ್ಯಾರ್ಥಿ.

-ಜಯಂತ ಕಾಯ್ಕಿಣಿ
ಪ್ರಸಿದ್ಧ ಸಾಹಿತಿಗಳು

ವಿಜ್ಞಾನ ಸಾಹಿತ್ಯ ಎಂದರೆ ನಖಶಿಖಾಂತ ಘನಗಂಭೀರ ಇರಬೇಕಾಗಿಲ್ಲ. ಜನಪ್ರಿಯ ವಿಜ್ಞಾನದಲ್ಲಂತೂ ಇರಲೇಬಾರದು. ವಿವರಗಳ ಮಧ್ಯೆ ಅಥವಾ ಆರಂಭದಲ್ಲೇ ಕಚಗುಳಿಯ ವಾಕ್ಯಗಳು, ಅಲ್ಲಲ್ಲಿ ಕೊಂಚ ತುಂಟತನ, ಹಾಸ್ಯಪ್ರಜ್ಞೆ, ಅದೆಷ್ಟೋ ಬಾರಿ ಅಸಂಗತವೆನಿಸುವಂಥ ಹೋಲಿಕೆ ಇವೆಲ್ಲ ಇದ್ದರೆ, ನೀರಸ ವಿಷಯಗಳನ್ನೂ ರಸವತ್ತಾಗಿಸಬಹುದು, ಎಲ್ಲಕ್ಕೂ ಮುಖ್ಯ ಅಂದರೆ ರಂಜನೀಯ ಶಿರೋನಾಮೆ. ಈ ಅಭಿನಂದನ ಗ್ರಂಥದಲ್ಲಿ ಅನಂತರಾಮು ಅವರ ಕೃತಿಗಳ ಪಟ್ಟಿಯ ಮೇಲೆ ಕಣ್ಣಾಡಿಸಿ ನೋಡಿ ಅವುಗಳಲ್ಲೇ ಬಹಳಷ್ಟನ್ನು ಹೆಕ್ಕಿ ಶಿರೋನಾಮೆಗಳ ಸಾಲುಗಳನ್ನೇ ಜೋಡಿಸಿ, ಒಂದು ಕವನವನ್ನಾಗಿಸಬಹುದು.

-ನಾಗೇಶ ಹೆಗಡೆ
ಪ್ರಸಿದ್ದ ವಿಜ್ಞಾನ ಲೇಖಕರು

ಅನಂತರಾಮು ಅವರು ಬಹುಮುಖ ಪ್ರತಿಭೆಯನ್ನು ಉಳ್ಳವರು. ಭೂವಿಜ್ಞಾನಿಯಾಗಿ, ಸಂಶೋಧಕರಾಗಿ, ಜನಪ್ರಿಯ ಅಂಕಣಕಾರರಾಗಿ, ವಿಜ್ಞಾನ ಲೇಖಕರಾಗಿ, ನಿಘಂಟುಕಾರರಾಗಿ, ಸಂಪಾದಕರಾಗಿ ಅವರು ಮಾಡಿರುವ ಸೇವೆಯನ್ನು "ನ ಭೂತೋ " ಎನ್ನಲು ಅಡ್ಡಿಯಿಲ್ಲ. ಅವರು ವಿಜ್ಞಾನ ಸಂವಹನೆಯನ್ನು ಒಂದು ತಪಸ್ಸಿನಂತೆ ನಿರ್ವಹಿಸಿದರು. ಮುದ್ರಣ ಮಾಧ್ಯಮದ ಜೊತೆಯಲ್ಲಿ ವಿದ್ಯುನ್ಮಾನವನ್ನು ಬಳಸಿಕೊಂಡರು. ಜೊತೆಗೆ ಅವಕಾಶ ದೊರೆತಾಗಲೆಲ್ಲ ಕರ್ನಾಟಕದಾದ್ಯಂತ ಸಂಚರಿಸಿ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಭಾಷಣಗಳನ್ನು ನೀಡಿದರು. ಹಾಗಾಗಿ ವಿಜ್ಞಾನವು ಅವರ ಜೀವ ಎಂದರೆ ತಪ್ಪಾಗಲಾರದು.

-ಡಾ|| ನಾ. ಸೋಮೇಶ್ವರ ಪ್ರಸಿದ್ಧ ವೈದ್ಯ ಲೇಖಕರು 

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
J
Jayaram Reddy
Anantamukhi

This book is excellent. Many interesting people have appreciated. This book inspires students and young writers. I deeply appreciate Harivu Books.
Thanking you
Prof. V. Jayaramareddy